Quick ಸುದ್ದಿಗೆ ಒಂದು click

‘ಟಾಕ್ಸಿಕ್’ ಚಿತ್ರದ ಬಿಡುಗಡೆ ಮುಂದೂಡಿಕೆ!

ಬಹುನಿರೀಕ್ಷಿತ ‘ಟಾಕ್ಸಿಕ್’ ಬಿಡುಗಡೆ ಮುಂದೂಡಿದ ಚಿತ್ರತಂಡ

ತೆರೆಗೆ ಎರಡು ವಾರಗಳಿರುವಾಗಲೇ ಚಿತ್ರತಂಡದ ಕಡೆಯಿಂದ ಹೊರಬಿತ್ತು ಸುದ್ದಿ

ಮಾರ್ಚ್‌ 19ರ ಬದಲು ಜೂನ್‌ 4ಕ್ಕೆ ‘ಟಾಕ್ಸಿಕ್’ ರಿಲೀಸ್‌

ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಇದೇ ಮಾರ್ಚ್‌ 19ರಂದು ನಟ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಅದ್ದೂರಿಯಾಗಿ ತೆರೆಗೆ ಬರಬೇಕಿತ್ತು. ಆದರೆ ಇನ್ನೇನು ‘ಟಾಕ್ಸಿಕ್’ ಚಿತ್ರದ ಬಿಡುಗಡೆಗೆ ಎರಡು ವಾರಗಳಷ್ಟೇ ಬಾಕಿಯಿದೆ ಎನ್ನುವಾಗಲೇ ‘ಟಾಕ್ಸಿಕ್’ ಚಿತ್ರತಂಡ, ಚಿತ್ರದ ಬಿಡುಗಡೆಯನ್ನು ಜೂನ್‌ 4ಕ್ಕೆ ಮುಂದೂಡಿರುವ ಘೋಷಣೆ ಮಾಡಿದೆ.

‘ಟಾಕ್ಸಿಕ್’ ಚಿತ್ರತಂಡ ಇಂದು (4 ಮಾರ್ಚ್‌ 2026) ಬೆಳಿಗ್ಗೆ ಈ ಬಗ್ಗೆ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ‘ಟಾಕ್ಸಿಕ್’ ಚಿತ್ರದ ಬಿಡುಗಡೆಯನ್ನು ಮಾರ್ಚ್‌ 19ರ ಬದಲಾಗಿ ಜೂನ್‌ 4ರಂದು ಮಾಡುವುದಾಗಿ ತಿಳಿಸಿದೆ.

ಹೌದು, ‘ಟಾಕ್ಸಿಕ್’ ಚಿತ್ರವನ್ನು ನಿರ್ಮಿಸುತ್ತಿರುವ ‘ಕೆವಿಎನ್‌ ಪ್ರೊಡಕ್ಷನ್ಸ್‌’ ಮತ್ತು ‘ಮಾನ್ಸ್‌ಸ್ಟಾರ್‌ ಮೈಂಡ್ಸ್‌ ಕ್ರಿಯೇಶನ್ಸ್‌’ ಸಂಸ್ಥೆಗಳು ಈ ಬಗ್ಗೆ ತಮ್ಮ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿವೆ. ಮಧ್ಯ ಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಪ್ರಸ್ತುತ ಏರ್ಪಟ್ಟಿರುವ ಪ್ರಕ್ಷುಬ್ಧ ಸ್ಥಿತಿಯಲ್ಲಿ ‘ಟಾಕ್ಸಿಕ್’ ಚಿತ್ರವನ್ನು ಬಿಡುಗಡೆ ಮಾಡಲು ಪೂರಕ ವಾತಾವರಣವಿಲ್ಲ ಎಂದು ಹೇಳಿಕೊಂಡಿರುವ ಚಿತ್ರತಂಡ, ಮಾರ್ಚ್‌ 19ರ ಬದಲು ಇದೇ 2026ರ ಜೂನ್‌ 4ರಂದು ‘ಟಾಕ್ಸಿಕ್’ ಚಿತ್ರವನ್ನು ವಿಶ್ವದಾದ್ಯಂತ ತೆರೆಗೆ ತರುವುದಾಗಿ ಮಾಹಿತಿ ನೀಡಿದೆ. ಒಟ್ಟಾರೆ ‘ಟಾಕ್ಸಿಕ್’ ಚಿತ್ರದ ಬಿಡುಗಡೆಯನ್ನು ತುದಿಗಾಲಿನಲ್ಲಿ ಎದುರು ನೋಡುತ್ತಿದ್ದ ನಟ ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳಿಗೆ ‘ಟಾಕ್ಸಿಕ್’ ಚಿತ್ರತಂಡದ ಕಡೆಯಿಂದ ಹೊರಬಂದಿರುವ ಈ ಸುದ್ದಿ ಬೇಸರ ಮೂಡಿಸಿರುವುದಂತೂ ಸುಳ್ಳಲ್ಲ.

‘ಟಾಕ್ಸಿಕ್’ ಮುಂದೂಡಿಕೆಯಿಂದ ‘ದುರಂಧರ್‌ 2’ ಹಾದಿ ಸುಗಮ!

ಇನ್ನು ಈ ಮೊದಲಿನಂತೆ, ಇದೇ ಮಾರ್ಚ್‌ 19ರಂದು ‘ಟಾಕ್ಸಿಕ್’ ಚಿತ್ರದ ಜೊತೆಗೆ ಹಿಂದಿಯಲ್ಲಿ ರಣ್ವೀರ್‌ ಸಿಂಗ್‌ ಅಭಿನಯದ ‘ದುರಂಧರ್‌ 2’ ಚಿತ್ರವೂ ತೆರೆಗೆ ಬರುವ ಯೋಜನೆ ಹಾಕಿಕೊಂಡಿತ್ತು. ಎರಡೂ ಸಿನೆಮಾಗಳೂ ಕೂಡ ಬಿಗ್‌ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು, ಎರಡೂ ಸಿನೆಮಾಗಳೂ ಕೂಡ ಇಡೀ ಭಾರತೀಯ ಚಿತ್ರರಂಗದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿವೆ. ಹೀಗಾಗಿ ‘ಟಾಕ್ಸಿಕ್’ ಮತ್ತು ‘ದುರಂಧರ್‌ 2’ ನಡುವೆ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದ ಪೈಪೋಟಿ ಎದುರಾಗಬಹುದು ಎಂಬ ಔಾತಾವರಣ ಕೂಡ ಸೃಷ್ಟಿಯಾಗಿತ್ತು. ಆದರೆ, ಇದೀಗ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ಮುಂದೂಡಿರುವುದರಿಂದ ‘ದುರಂಧರ್‌ 2’ ಚಿತ್ರದ ಬಿಡುಗಡೆಯ ಹಾದಿ ಸುಗಮವಾಗಿದೆ.

Related Posts

error: Content is protected !!