Video

ಬಹುನಿರೀಕ್ಷಿತ ‘ಧುರಂದರ್ 2’ ಸಿನೆಮಾ ಟ್ರೇಲರ್ ರಿಲೀಸ್

‘ಧುರಂದರ್ 2’ ಸಿನಿಮಾದ ಟ್ರೇಲರ್ ಬಿಡುಗಡೆ

‘ಧುರಂದರ್’ ಚಿತ್ರದ ಸೀಕ್ವೆಲ್ ‘ಧುರಂಧರ್ 2’ ಬಿಡುಗಡೆ​​ಗೆ ರೆಡಿ 

ಬೀಸ್ಟ್​ ಮೋಡ್​​​ನಲ್ಲಿ ರಿವೇಂಜ್​ಗೆ ಇಳಿದ ರಣವೀರ್

ಕಳೆದ 2025ರ ಡಿಸೆಂಬರ್‌ ಮೊದಲ ವಾರದಲ್ಲಿ ಬಿಡುಗಡೆಯಾಗಿದ್ದ ಹಿಂದಿಯ ‘ಧುರಂಧರ್’ ಸಿನೆಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಕಮಾಲ್‌ ಮಾಡಿದ್ದು ನಿಮಗೆ ಗೊತ್ತಿರಬಹುದು. 2025ರಲ್ಲಿ ಯಾವುದೇ ದೊಡ್ಡ ಹಿಟ್‌ ಸಿನೆಮಾಗಳಿಲ್ಲದೆ ಬಾಡಿ ಬೆಂಡಾಗಿ ಹೋಗಿದ್ದ ಬಾಲಿವುಡ್‌ಗೆ ‘ಧುರಂಧರ್’ ಸಿನೆಮಾ ಅಕ್ಷರಶಃ ಆಕ್ಸಿಜನ್‌ ಕೊಟ್ಟಂತಿತ್ತು. ನೋಡ ನೋಡುತ್ತಿದ್ದಂತೆ, ‘ಧುರಂಧರ್’ ದೇಶ-ವಿದೇಶಗಳಲ್ಲಿ ಗಳಿಕೆಯಲ್ಲಿ ದಾಖಲೆ ಬರೆಯಿತು. 2025ರ ಹಿಂದಿಯ ಸೂಪರ್‌ ಹಿಟ್‌ ಸಿನೆಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ‘ಧುರಂಧರ್’ ಸಿನೆಮಾದ ಸೀಕ್ವೆಲ್‌, ಈಗ ಇದೇ 2026ರ ಮಾರ್ಚ್‌ 19ರಂದು ತೆರೆಗೆ ಬರುತ್ತಿದೆ.

ಹೌದು, ‘ಧುರಂಧರ್’ ಮೊದಲ ಭಾಗ ಸೂಪರ್‌ ಹಿಟ್‌ ಆಗುತ್ತಿದ್ದಂತೆ, ಚಿತ್ರತಂಡ ‘ಧುರಂಧರ್-2’ ಸಿನೆಮಾವನ್ನು ತೆರೆಗೆ ತರುವುದಾಗಿ ಘೋಷಿಸಿತ್ತು. ಇದೀಗ ‘ಧುರಂಧರ್-2’ ಸಿನೆಮಾದ ಬಹುತೇಕ ಕೆಲಸಗಳು ಸದ್ದಿಲ್ಲದೆ ಪೂರ್ಣಗೊಂಡಿದ್ದು, ‘ಧುರಂಧರ್-2’ ಸಿನೆಮಾದ ಟ್ರೇಲರ್‌ ಕೂಡ ಬಿಡುಗಡೆಯಾಗಿದೆ.

‘ಧುರಂಧರ್’ ಸೀಕ್ವೆಲ್‌ ಮೇಲೆ ಗರಿಗೆದರಿದ ನಿರೀಕ್ಷೆ…

ಅಂದಹಾಗೇ, ‘ಧುರಂಧರ್’ ಸಿನೆಮಾ ಸೂಪರ್ ಹಿಟ್ ಆಗುತ್ತಿದ್ದಂತೆ, ಆ ಚಿತ್ರದ ಸೀಕ್ವೆಲ್ ‘ಧುರಂಧರ್ 2’ ಮೆಲೇ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿತ್ತು. ‘ಧುರಂಧರ್ 2’ ಚಿತ್ರದ ಟ್ರೇಲರಿಗಾಗಿ ಕಾದು ಕುಳಿತಿದ್ದ ಅಭಿಮಾನಿಗಳ ಮುಂದೆ, ಇದೇ ಮಾರ್ಚ್ 7ರಂದು ಬೆಳಿಗ್ಗೆ 11.01ಕ್ಕೆ ‘ಧುರಂಧರ್ 2’ ಸಿನೆಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಟ್ರೇಲರ್ ನೋಡಿದ ಬಳಿಕ ‘ಧುರಂಧರ್ 2’ ಸಿನೆಮಾ ತೆರೆಮೇಲೆ ಯಾವ ರೀತಿಯಲ್ಲಿ ಇರಲಿದೆ ಎಂಬುದರ ಬಗ್ಗೆ ಅಭಿಮಾನಿಗಳಿಗೂ ಒಂದಷ್ಟು ಚಿತ್ರಣ ಸಿಕ್ಕಿದೆ.

ಹೇಗಿದೆ ‘ಧುರಂಧರ್ 2’ ಸಿನೆಮಾದ ಟ್ರೇಲರ್‌..?

ರೆಹಮಾನ್ ಡಕಾಯಿತ್ ಹತ್ಯೆಯನ್ನು ಹಮ್ಜಾ ಅಲಿ ಮಜಾರಿ (ರಣವೀರ್ ಸಿಂಗ್) ಮಾಡುತ್ತಾನೆ. ಭೀಕರವಾಗಿ ಈ ಕೊಲೆ ನಡೆಯುತ್ತದೆ. ಈ ಕೊಲೆ ಬಳಿಕ ‘ಧುರಂಧರ್’ ಸಿನೆಮಾದ ಮೊದಲ ಭಾಗ ಕೊನೆ ಆಗಿತ್ತು. ಈಗ ‘ಧುರಂಧರ್ 2’ ಸಿನೆಮಾ ಇಲ್ಲಿಂದಲೇ ಆರಂಭ ಆಗುತ್ತಿದೆ. ಹಮ್ಜಾ ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ರಿವೇಂಜ್​​ಗೆ ಇಳಿಯುತ್ತಾನೆ. ಹೀಗಾಗಿ, ಇಡೀ ಸಿನೆಮಾ ಉದ್ದಕ್ಕೂ ಸೇಡಿನ ಕಥೆ ಇರಲಿದೆ ಎಂಬುದು ‘ಧುರಂಧರ್ 2’ ಸಿನೆಮಾದ ಟ್ರೇಲರ್‌ ನೋಡಿದವರಿಗೆ ಸ್ಪಷ್ಟವಾಗಿ ಅರ್ಥವಾಗುವಂತಿದೆ.

ಸ್ಕ್ರೀನ್‌ ಮೇಲೆ ಹೈವೋಲ್ಟೇಜ್‌ ಆಕ್ಷನ್‌ ಕಹಾನಿ…

ಇನ್ನು ಬಿಡುಗಡೆಯಾಗಿರುವ ‘ಧುರಂಧರ್ 2’ ಚಿತ್ರದ ಟ್ರೇಲರ್ ಉದ್ದಕ್ಕೂ ಭರ್ಜರಿ ಆ್ಯಕ್ಷನ್ ತುಂಬಿಕೊಂಡಿದೆ. ಚಿತ್ರದ ದೃಶ್ಯಗಳಲ್ಲಿ ಭರ್ಜರಿ ಫೈಟ್ಸ್‌ ಮತ್ತು ಸಾಹಸ ದೃಶ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಮ್ಜಾ  ಮೂಲ ಹೆಸರು ಜಸ್ಕಿರತ್ ಸಿಂಗ್ ರಂಗಿ. ಆತ ಹಮ್ಜಾ ಆಗಲು ಒಪ್ಪಿಕೊಂಡಿದ್ದು ಹೇಗೆ ? ಆತನನ್ನು ಈ ಸೀಕ್ರೆಟ್ ಮಿಷನ್​​ಗೆ ಆಯ್ಕೆ ಮಾಡಿಕೊಂಡಿದ್ದು ಹೇಗೆ ಎಂಬಿತ್ಯಾದಿ ವಿಷಯಗಳನ್ನು ‘ಧುರಂಧರ್ 2’ ಸಿನೆಮಾದ ಟ್ರೇಲರ್​​ನಲ್ಲಿ ತೋರಿಸಲಾಗಿದೆ. ಇನ್ನು ‘ಧುರಂಧರ್ 2’ ಟ್ರೇಲರಿನ ಬಹುತೇಕ ದೃಶ್ಯಗಳು ರಕ್ತಸಿಕ್ತವಾಗಿದ್ದು, ‘ಧುರಂಧರ್ 2’ ಸಿನೆಮಾ ಕೂಡ ಬಹುತೇಕ ಹಾಗೇ ಇರಲಿದೆ ಎಂಬುದು ‘ಧುರಂಧರ್ 2’ ಸಿನೆಮಾ ಟ್ರೇಲರ್‌ ನೋಡಿದ ವೀಕ್ಷಕರಿಗೆ ಸ್ಪಷ್ಟವಾಗುತ್ತದೆ. ಅದ್ಧೂರಿ ಮೇಕಿಂಗ್‌, ಬೃಹತ್‌ ಕಲಾವಿದರ ತಾರಾಗಣ ಮತ್ತು ತಾಂತ್ರಿಕ ಕೆಲಸಗಳು ‘ಧುರಂಧರ್ 2’ ಸಿನೆಮಾದ ಟ್ರೇಲರಿನಲ್ಲಿ ನೋಡುಗರ ಗಮನ ಸೆಳೆಯುವಂತಿದೆ. ಒಟ್ಟಾರೆ ‘ಧುರಂಧರ್ 2’ ಟ್ರೇಲರ್‌, ಆಡಿಯನ್ಸ್‌ ನಿರೀಕ್ಷೆ ಇನ್ನಷ್ಟು ಹೆಚ್ಚಿಸಲು ಯಶಸ್ವಿಯಾಗಿದೆ ಎಂದು ಹೇಳಬಹುದು.

‘ಧುರಂಧರ್ 2’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…​​

‘ಧುರಂಧರ್’ ಚಿತ್ರವನ್ನು ಆದಿತ್ಯ ಧಾರ್ ನಿರ್ದೇಶನ ಮಾಡಿದ್ದಾರೆ. ‘ಧುರಂಧರ್’ ಸಿನೆಮಾದ ಮೊದಲ ಭಾಗದಲ್ಲಿದ್ದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರ ಬಳಗ ‘ಧುರಂಧರ್ 2’ ಸಿನೆಮಾದಲ್ಲೂ ಮುಂದುವರೆದಿದೆ. ‘ಜಿಯೋ ಸ್ಟುಡಿಯೋಸ್‌’ ಈ ಸಿನೆಮಾವನ್ನು ನಿರ್ಮಾಣ ಮಾಡಿದ್ದು, ವಿಶ್ವದಾದ್ಯಂತ ಏಕಕಾಲಕ್ಕೆ ‘ಧುರಂಧರ್ 2’ ಸಿನೆಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಕನ್ನಡದಲ್ಲೂ ತೆರೆ ಕಾಣಲಿದೆ ‘ಧುರಂಧರ್ 2’

ಕಳೆದ ಬಾರಿ ಬಿಡುಗಡೆಯಾಗಿ ತೆರೆಗೆ ಬಂದಿದ್ದ ‘ಧುರಂಧರ್’ ಸಿನೆಮಾ ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ರಿಲೀಸ್ ಆಗಿತ್ತು. ಆದರೆ ಈಗ ‘ಧುರಂದರ್ 2’ ಸಿನೆಮಾ ಹಿಂದಿ ಜೊತೆಗೆ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮೊದಲಾದ ಭಾಷೆಗಳಲ್ಲಿ ಕೂಡ ರಿಲೀಸ್ ಆಗಲಿದೆ. ‘ಧುರಂಧರ್’ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಪಾಕಿಸ್ತಾನಕ್ಕೆ ತೆರಳುತ್ತಾರೆ. ಅಲ್ಲಿ ಪಾಕಿಸ್ತಾನದವರಂತೆ ಇದ್ದು, ಸ್ಪೈ ಆಗಿ ಕೆಲಸ ಮಾಡುತ್ತಾರೆ. ಸಿನೆಮಾ ಭರ್ಜರಿ ಆ್ಯಕ್ಷನ್​​ಗಳನ್ನು ಒಳಗೊಂಡಿತ್ತು. ಕಂದಾಹಾರ್ ಹೈಜ್ಯಾಕ್, ಮುಂಬೈ ದಾಳಿ ಇತ್ಯಾದಿ ವಿಷಯಗಳನ್ನು ಒಳಗೊಂಡಿತ್ತು. ಆದಿತ್ಯ ಧಾರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಧುರಂಧರ್’ ಸಾವಿರ ಕೋಟಿ ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮೊದಲ ಚಿತ್ರ ಸಾವಿರ ಕೋಟಿ ರೂಪಾಯಿ ವ್ಯವಹಾರ ಮಾಡುವಲ್ಲಿ ಯಶಸ್ವಿಯಾಗಿದ್ದರಿಂದ, ಮೊದಲ ಭಾಗಕ್ಕಿಂತಲೂ ಸೀಕ್ವೆಲ್ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಚಿತ್ರರಂಗದಲ್ಲಿ ಇದೆ.

Related Posts

error: Content is protected !!