Video

ಹೊರಬಂತು ‘ಪೀಟರ್’ ಚಿತ್ರದ ಟೀಸರ್

ಬಿಡುಗಡೆಯಾಯಿತು ‘ಪೀಟರ್‌’ ಟೀಸರ್

‌ರಾಜೇಶ್‌ ಧ್ರುವ – ರವೀಕ್ಷಾ ಶೆಟ್ಟಿ ಜೋಡಿಯ ಹೊಸಚಿತ್ರ ಬಿಡುಗಡೆಗೆ ರೆಡಿ

ಕುತೂಹಲ ಕೆರಳಿಸುವಂತಿದೆ ‘ಪೀಟರ್‌’ ಟೀಸರ್‌

ಆರಂಭದಿಂದಲೂ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಒಂದಷ್ಟು ಕುತೂಹಲ ಮೂಡಿಸಿರುವ ‘ಪೀಟರ್‌’ ಸಿನೆಮಾ ತೆರೆಗೆ ಬರೋದಕ್ಕೆ ತಯಾರಾಗಿದೆ. ಈಗಾಗಲೇ ತನ್ನ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಪೀಟರ್‌’ ಚಿತ್ರತಂಡ ಇದೀಗ, ತನ್ನ ಸಿನೆಮಾದ ಮೊದಲ ಟೀಸರ್‌ ಅನ್ನು ಬಿಡುಗಡೆ ಮಾಡಿದೆ. ರಾಮನವಮಿ ಹಬ್ಬದ ಸಂದರ್ಭದಲ್ಲಿ ‘ಪೀಟರ್‌’ ಸಿನೆಮಾದ ಟೀಸರ್ ಬಿಡುಗಡೆಯಾಗಿದ್ದು, ‘ಪೀಟರ್‌’ ಟೀಸರ್‌ ನೋಡುಗರ ಗಮನ ಸೆಳೆಯುವಂತಿದೆ. ಈ ಹಿಂದೆ ‘ದೂರದರ್ಶನ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ಸುಕೇಶ್‌ ಶೆಟ್ಟಿ ‘ಪೀಟರ್‌’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ವೃದ್ಧಿ ಸ್ಟುಡಿಯೋಸ್‌’ ಬ್ಯಾನರಿನಲ್ಲಿ ರವಿ ಹಿರೇಮಠ್ ಮತ್ತು ರಾಕೇಶ್ ಹೆಗಡೆ ‘ಪೀಟರ್‌’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಹೇಗಿದೆ ‘ಪೀಟರ್‌’ ಟೀಸರ್..?‌

ಔಟ್‌ ಅಂಡ್‌ ಔಟ್‌ ಸಸ್ಪೆನ್ಸ್‌ ಕಂ ಥ್ರಿಲ್ಲರ್‌ ಶೈಲಿಯಲ್ಲಿ ‘ಪೀಟರ್‌’ ಸಿನೆಮಾ ಮೂಡಿಬಂದಿದೆ. ‘ಪೀಟರ್‌’ ಟೀಸರ್‌ ನಲ್ಲಿ ಚಿತ್ರದ ಕಥಾಹಂದರ ಮತ್ತು ಪಾತ್ರಗಳ ಸಣ್ಣ ಝಲಕ್‌ ಅನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ‘ಪೀಟರ್‌’ ಚಿತ್ರದಲ್ಲಿ ರಾಜೇಶ್‌ ಧ್ರುವ ನಾಯಕನಾಗಿ ಮತ್ತು ರವೀಕ್ಷಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಪ್ರತೀಮಾ ನಾಯಕ್‌, ಜಾನ್ವಿ ರಾಯಲ, ರಘು ಪಾಂಡೇಶ್ವರ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜಿಸಿದ್ದಾರೆ. ‘ಪೀಟರ್’ ಸಿನೆಮಾದಲ್ಲಿ ಸಸ್ಪೆನ್ಸ್, ಥ್ರಿಲ್ಲರ್, ಲವ್, ಎಮೋಷನ್ ಮತ್ತು ಫ್ರೆಂಡ್ ಶಿಪ್ ಹೀಗೆ ಎಂಟರ್ಟೈನ್ಮೆಂಟ್ ಗೆ ಬೇಕಾದ ಎಲ್ಲಾ ಎಲಿಮೆಂಟ್ಸ್ ಇವೆ. ಕರಾವಳಿ ಭಾಗದ ಮಣ್ಣಿನ ಸೊಗಡಿನ ಕಥೆ ಇದಾಗಿದೆ ಎಂಬ ಸುಳಿವನ್ನು ‘ಪೀಟರ್’ ಚಿತ್ರತಂಡ ಟೀಸರ್‌ ನಲ್ಲಿ ಬಿಟ್ಟುಕೊಟ್ಟಿದೆ.

‘ಪೀಟರ್‌’ ಚಿತ್ರದ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಬಹುಭಾಷೆಗಳಲ್ಲಿ ‘ಪೀಟರ್’ ತೆರೆಗೆ

‘ಪೀಟರ್’ ಚಿತ್ರ ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲೂ ನಿರ್ಮಾಣವಾಗಿದ್ದು, ಬಹುಭಾಷೆಗಳಲ್ಲಿ ‘ಪೀಟರ್’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಇನ್ನು ‘ಪೀಟರ್’ ಚಿತ್ರವನ್ನು ‘ಕೆವಿಎನ್‌’ ಸಂಸ್ಥೆ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ಅಂದಹಾಗೆ, ಇದೇ 2025ರ ಏಪ್ರಿಲ್ 10 ರಂದು ‘ಪೀಟರ್’ ಸಿನೆಮಾ ತೆರೆಗೆ ಬರಲಿದೆ.

Related Posts

error: Content is protected !!