Street Beat

‘ಮೋಡ ಕವಿದ ವಾತಾವರಣ’ಕ್ಕೆ ರಿಲೀಸ್‌ ಡೇಟ್‌ ಫಿಕ್ಸ್‌!

2026ರ ಜೂನ್ 26ಕ್ಕೆ ‘ಮೋಡ ಕವಿದ ವಾತಾವರಣ’ ತೆರೆಗೆ

ತೆರೆಗೆ ಬರಲು ರೆಡಿಯಾದ ಸಿಂಪಲ್ ಸುನಿ ‘ಮೋಡ ಕವಿದ ವಾತಾವರಣ’ ಸಿನೆಮಾ

ಮತ್ತೊಂದು ಲವ್‌ ಸ್ಟೋರಿ ಹೇಳೋಕೆ ಸಿಂಪಲ್ ಸುನಿ ರೆಡಿ

ನಿರ್ದೇಶಕ ಸಿಂಪಲ್ ಸುನಿ ಈ ವರ್ಷ ಮತ್ತೊಮದು ಹೊಸ ಕಥೆಯನ್ನು ಸಿನಿಪ್ರಿಯರ ಮುಂದಿಡುವ ತಯಾರಿಯಲ್ಲಿದ್ದಾರೆ. ಹೌದು, ನಿರ್ದೇಶಕ ಸಿಂಪಲ್‌ ಸುನಿ ತಮ್ಮ ಶಿಷ್ಯನಿಗಾಗಿ ‘ಮೋಡ ಕವಿದ ವಾತಾವರಣ’ವನ್ನು  ಸೃಷ್ಟಿಸಿದ್ದಾರೆ. ಅರ್ಥಾತ್, ತಮ್ಮ ಗರಡಿಯಲ್ಲಿ ಪಳಗಿರುವ ಯುವ ಪ್ರತಿಭೆ ಶೀಲಮ್ ಗಾಗಿ ನಿರ್ದೇಶಕ ಸಿಂಪಲ್‌ ಸುನಿ ‘ಮೋಡ ಕವಿದ ವಾತಾವರಣ’ ಎಂಬ ಹೊಸ ಸಿನೆಮಾ ಮಾಡಿದ್ದಾರೆ. ಈಗಾಗಲೇ ತನ್ನ ಟೈಟಲ್‌ ಮತ್ತು ಹಾಡುಗಳ ಮೂಲಕ ಒಂದಷ್ಟು ನಿರೀಕ್ಷೆ ಮೂಡಿಸಿರುವ ‘ಮೋಡ ಕವಿದ ವಾತಾವರಣ’ ಚಿತ್ರದ ಬಿಡುಗಡೆ ದಿನಾಂಕ ಇದೀಗ ಅಧಿಕೃತವಾಗಿ ಘೋಷಣೆಯಾಗಿದೆ.

ಇದೇ ಮಾನ್ಸೂನ್‌ ವೇಳೆಗೆ ‘ಮೋಡ ಕವಿದ ವಾತಾವರಣ’ ತೆರೆಗೆ

ಅಂದಹಾಗೆ, ‘ಮೋಡ ಕವಿದ ವಾತಾವರಣ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇದೇ ವರ್ಷ ಜೂನ್ 26ರಂದು ‘ಮೋಡ ಕವಿದ ವಾತಾವರಣ’ ಸಿನೆಮಾ ತೆರೆಗೆ ಬರ್ತಿದೆ. ಇದೀಗ ಚಿತ್ರತಂಡ ಅಶ್ವಿನ್ ಡಿಸೈನ್ ಮಾಡಿರುವ ಚೆಂದದ ಪೋಸ್ಟರ್ ಮೂಲಕ ಚಿತ್ರದ ರಿಲೀಸ್ ಡೇಟ್ ಅನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

ಸುನಿ ಹೇಳುತ್ತಿರುವ ಸೈಂಟಿಫಿಕ್‌ ಫಿಕ್ಷನ್‌ ಲವ್ ಸ್ಟೋರಿ…

ಇನ್ನು ‘ಮೋಡ ಕವಿದ ವಾತಾವರಣ’ ಚಿತ್ರದ ನಾಯಕ ಶೀಲಮ್‌ ಈ ಹಿಂದೆ ಹಲವು ಸಿನೆಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ‘ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ‌ ಶೀಲಮ್‌ ಪೂರ್ಣ ಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಸೈಂಟಿಫಿಕ್‌ ಫಿಕ್ಷನ್‌ ಲವ್ ಸ್ಟೋರಿ ಹೊಂದಿರುವ ‘ಮೋಡ ಕವಿದ ವಾತಾವರಣ’ ಚಿತ್ರದಲ್ಲಿ ಶೀಲಮ್ ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ.

ಈ ಹಿಂದೆ ಸಿಂಪಲ್‌ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮಕಥೆ’ ಸಿನೆಮಾವನ್ನು ನಿರ್ಮಾಣ ಮಾಡಿದ್ದ ‘ರಾಮ್‌ ಮೂವೀಸ್’ ಬ್ಯಾನರಿನಲ್ಲಿ  ಈ ಸಿನೆಮಾ ನಿರ್ಮಾಣವಾಗಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ಜಂಟಿಯಾಗಿ ‘ಮೋಡ ಕವಿದ ವಾತಾವರಣ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ಮೋಡ ಕವಿದ ವಾತಾವರಣ’ ಸಿನೆಮಾಗೆ ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದು, ಆದಿತ್ಯ ಕಶ್ಯಪ್‌ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದು, ಈಗಾಗಲೇ ಸಂಜಿತ್ ಹೆಗಡೆ ಹಾಡಿರುವ ‘ನನ್ನೆದೆಯ ಹಾಡೊಂದನು’ ಗೀತೆ ಬಿಡುಗಡೆಯಾಗಿ ಕೇಳುಗರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.  ‘ಸರೆಗಮ ಮ್ಯೂಸಿಕ್‌’ ಸಂಸ್ಥೆ ‘ಮೋಡ ಕವಿದ ವಾತಾವರಣ’ ಚಿತ್ರದ ಆಡಿಯೋ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ.

Related Posts

error: Content is protected !!