Street Beat

‘ಪೀಟರ್‌’ ಮೇಲೆ ಭರಪೂರ ನಿರೀಕ್ಷೆ…

‘ಪೀಟರ್‌’ ಆಡಿಯೋ ರಿಲೀಸ್‌ ಮತ್ತು ಪ್ರೀ-ರಿಲೀಸ್‌ ಇವೆಂಟ್‌

ಇದೇ 2026ರ ಏಪ್ರಿಲ್‌ 10ರಿಂದ ‘ಪೀಟರ್‌’ ಚಿತ್ರ ರಾಜ್ಯದಾದ್ಯಂತ ಬಿಡುಗಡೆ

‘ಪೀಟರ್‌’ ಕೈ ಹಿಡಿಯುವ ನಿರೀಕ್ಷೆಯಲ್ಲಿ ಯುವ ಪ್ರತಿಭೆಗಳ ತಂಡ

ಕನ್ನಡ ಚಿತ್ರರಂಗದ ಬಹುತೇಕ ನವ ಯುವ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಪೀಟರ್‌’ ಸಿನೆಮಾ ಇದೇ 2026ರ ಏಪ್ರಿಲ್‌ 10ರಂದು ರಾಜ್ಯಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ‘ಪೀಟರ್‌’ ಸಿನೆಮಾದ ಪೋಸ್ಟರ್‌ ಮತ್ತು ಒಂದಷ್ಟು ತುಣುಕುಗಳನ್ನು ಬಿಟ್ಟು ಸಿನಿಪ್ರಿಯರ ಗಮನವನ್ನು ಸೆಳೆದಿದ್ದ ‘ಪೀಟರ್‌’ ಚಿತ್ರತಂಡ, ಇದೀಗ ಚಿತ್ರದ ಆಡಿಯೋವನ್ನು ಬಿಡುಗಡೆಗೊಳಿಸಿ, ಚಿತ್ರದ ಪ್ರೀ-ರಿಲೀಸ್‌ ಇವೆಂಟ್‌ ಕಾರ್ಯಕ್ರವನ್ನು ಯಶಸ್ವಿಯಾಗಿ ನಡೆಸಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ‘ಕನ್ನಡ ಚಲನಚಿತ್ರ ಕಲಾವಿದರ ಸಂಘ’ದ ಆಡಿಟೋರಿಯಂನಲ್ಲಿ ನಡೆದ ‘ಪೀಟರ್‌’ ಚಿತ್ರದ ಆಡಿಯೋ ಮತ್ತು ಪ್ರೀ-ರಿಲೀಸ್‌ ಇವೆಂಟ್‌ ಸಮಾರಂಭದಲ್ಲಿ ಹಾಜರಿದ್ದ ‘ಪೀಟರ್’ ಚಿತ್ರದ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರತಂಡ, ಚಿತ್ರದ ವಿಶೇಷತೆಗಳು ಮತ್ತು ಚಿತ್ರದಲ್ಲಿನ ತಮ್ಮ ಅನುಭವಗಳನ್ನು ನೆರೆದಿದ್ದ ಪ್ರೇಕ್ಷಕರು ಮತ್ತು ಮಾಧ್ಯಮಗಳ ಮುಂದೆ ಹಂಚಿಕೊಂಡಿತು.

ನೋಡುಗರಿಗೆ ‘ಪೀಟರ್’ ಹೊಸ ಕಂಟೆಂಟ್‌ ಕೊಡಲಿದ್ದಾನಂತೆ…

ಇದೇ ಸಂದರ್ಭದಲ್ಲಿ ಮಾತನಾಡಿದ ‘ಪೀಟರ್‌’ ಚಿತ್ರದ ನಿರ್ದೇಶಕ ಸುಕೇಶ್ ಶೆಟ್ಟಿ ಮಾತನಾಡಿ, ‘ಈ ಸಿನೆಮಾದ ಪ್ರತಿ ಹಂತದಲ್ಲಿ, ಪ್ರತಿ ಕಂಟೆಂಟ್ ನಲ್ಲಿಯೂ ನಾವು ಹೊಸತನ ಕೊಟ್ಟಿದ್ದೇವೆ. ನೋಡುಗರು ಥಿಯೇಟರ್ ನಲ್ಲಿ ಕೂತು ಮಡಿಕೇರಿಯ ಭಾಗಮಂಡಲದಲ್ಲಿ ನಡೆಯೋ ರೋಚಕ ಕಥೆಯನ್ನು ಅನುಭವಿಸಲೇಬೇಕು. ಅದಕ್ಕೆ ತಕ್ಕಂತೆ ‘ಪೀಟರ್‌ʼ ಸಿನೆಮಾದ ಕಥೆ ಹೆಣೆದಿದ್ದು, ಶಬ್ಧ ವಿನ್ಯಾಸ, ಪರಿಸರ ಇದೆಲ್ಲದರಿಂದ ಪ್ರೇಕ್ಷಕ ಹೊಸ ಅನುಭವೆ ಪಡೆಯುವುದು ಗ್ಯಾರೆಂಟಿ. ಮ್ಯೂಸಿಕ್ ಅಂತಾ ಬಂದಾಗ ನಾಲ್ಕು ಜಾನರ್ ನಲ್ಲಿ ಮ್ಯೂಸಿಕ್ ಮಾಡಿದ್ದೇವೆ. ‘ಪೀಟರ್’ ಸಿನೆಮಾದ ಪ್ರತಿ ಕಂಟೆಂಟ್, ಹಾಡು, ಟೀಸರ್ ಎಲ್ಲವೂ ಕೂಡ ಆಡಿಯನ್ಸ್ ಗೆ ಹತ್ತಿರವಾಗಲೂ ಇದೇ ಕಾರಣ. ನಾವು ಭಿನ್ನವಾಗಿ ಕಂಟೆಂಟ್ ಪ್ರೆಸೆಂಟ್ ಮಾಡುತ್ತಾ ಬಂದಿದ್ದೇವೆ’ ಎಂದರು.

‘ಪೀಟರ್‌’ ಜೊತೆಗೆ ರಾಜೇಶ್‌ ಧ್ರುವ ಎಮೋಶನಲ್‌ ಜರ್ನಿ!

‘ಪೀಟರ್‌’ ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ರಾಜೇಶ್ ಧ್ರುವ, ‘ಇದು ನಾನು ನಾಯಕನಾಗಿ ಅಭಿನಯಿಸುತ್ತಿರುವ ಎರಡನೇ ಸಿನೆಮಾ. ‘ಪೀಟರ್‌’ ಜೊತೆಗೆ ನಮಗೊಂದು ಎಮೋಷನಲ್ ಜರ್ನಿ ಇದೆ. ಒಂದೊಳ್ಳೆ ಕಲಾವಿದರು ಹಾಗೂ ಒಳ್ಳೆ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಚೆನ್ನಾಗಿತ್ತು. ನಿರ್ದೇಶಕ ಸುಕೇಶ್ ಶೆಟ್ಟಿ  ಮುಂದೆ ಕನ್ನಡ ಚಿತ್ರರಂಗದ ಮೋಸ್ಟ್ ವಾಂಟೆಂಡ್ ಡೈರೆಕ್ಟರ್ ಆಗುತ್ತಾರೆ. ಮೂರು ವರ್ಷ ಈ ಚಿತ್ರಕ್ಕಾಗಿ ಕೆಲಸ ಮಾಡಿ ಅಚ್ಚುಕಟ್ಟಾಗಿ ಔಟ್ ಫುಟ್ ತಂದಿದ್ದಾರೆ. ರವಿ ಹಾಗೂ ರಾಕೇಶ್ ಇಬ್ಬರು ಫ್ಯಾಷನೇಟೆಡ್ ಪ್ರೊಡ್ಯೂಸರ್. ಇವರಿಬ್ಬರೂ ಚಿತ್ರಕ್ಕೆ ಯಾವುದಕ್ಕೂ ಕಮ್ಮಿ ಮಾಡದೇ ಎಲ್ಲವನ್ನೂ ಸಿನೆಮಾಗೆ ನೀಡಿದ್ದಾರೆ. ‘ಪೀಟರ್’ ರಾಕ್ಷಸನೋ ಹೌದು, ರಕ್ಷಕನೂ ಹೌದು. ಅವನ ಜೀವನದಲ್ಲಿ ಚೆಂಡೆ ತುಂಬಾ ಮುಖ್ಯವಾಗಿರುತ್ತದೆ. ಅದರ ರಕ್ಷಣೆಗೆ ಹೇಗೆ ಮುಂದಾಗ್ತಾನೆ. ಹಾಗೂ ಅವನ ವೈಯಕ್ತಿಕ ಜೀವನದ ರಕ್ಷಣೆಗೆ ರಾಕ್ಷಸ ಆಗುತ್ತಾನೆ.‌ ಅದನ್ನು‌ ನೀವು ಥಿಯೇಟರ್ ನಲ್ಲಿ ನೋಡಿ ಎಕ್ಸ್ ಪಿರಿಮೆಂಟ್ ಮಾಡಬೇಕು’ ಎಂದರು.

‘ಪೀಟರ್’ ಚಿತ್ರದಲ್ಲಿ ನಾಯಕ ನಟ  ರಾಜೇಶ್ ಧ್ರುವಾ ಅವರಿಗೆ  ನಾಯಕಿಯಾಗಿಯರಾಗಿ  ಜಾನ್ವಿ ಮತ್ತು  ರವೀಕ್ಷಾ ಶೆಟ್ಟಿ ಜೋಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಘು ಪಾಂಡೇಶ್ವರ್ , ಪ್ರತಿಮಾ ನಾಯಕ್, ರಾಮನಾಡಗೌಡ, ವರುಣ್ ಪಟೇಲ್ , ಭರತ್, ದೀನಾ, ರಾಧಾಕೃಷ್ಣ ಕುಂಬ್ಳೆ, ರಕ್ಷಿತ್ ದೊಡ್ಡೇರಾ ಹೀಗೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.

ಈ ಹಿಂದೆ ಕನ್ನಡದಲ್ಲಿ ‘ದೂರದರ್ಶನ’ ಸಿನೆಮಾ ನಿರ್ದೇಶಿಸಿದ್ದ ಸುಕೇಶ್ ಶೆಟ್ಟಿ ‘ಪೀಟರ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ಪೀಟರ್’ ಚಿತ್ರದ ಹಾಡುಗಳಿಗೆ ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜಿಸಿದ್ದಾರೆ. ಕರ್ನಾಟಕ ಕೇರಳ ಗಡಿ ಭಾಗದಲ್ಲಿ ನಡೆಯೋ ಈ ಕಥೆಯನ್ನ ಗುರುಪ್ರಸಾದ್ ನಾರ್ನಾಡ್ ತಮ್ಮ ಛಾಯಾಗ್ರಹಣದಲ್ಲಿ ಸೆರೆ ಹಿಡಿದಿದ್ದಾರೆ. ಚಿತ್ರಕ್ಕೆ ನವೀನ್ ಶೆಟ್ಟಿ ಸಂಕಲನ ಕಾರ್ಯ ಮಾಡಿದ್ದಾರೆ. ‘ವೃದ್ಧಿ ಸ್ಟುಡಿಯೋಸ್’ ಬ್ಯಾನರ್ ನಡಿಯಲ್ಲಿ 100ಕ್ಕೂ ಹೆಚ್ಚು ಸಿನೆಮಾಗಳಿಗೆ ಸೌಂಡ್ ಡಿಸೈನರ್ ಆಗಿ ಕೆಲಸ ಮಾಡಿರೋ ರವಿ ಹೀರೇಮಠ್ ಮತ್ತು ರಾಕೇಶ್ ಹೆಗ್ಗಡೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಪೀಟರ್’ ಚಿತ್ರವನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ವಿತರಣೆ ಮಾಡುತ್ತಿದೆ.

ಪರಭಾಷೆಯಲ್ಲೂ ಬಿಡುಗಡೆಯಾಗಲಿದ್ದಾನೆ ‘ಪೀಟರ್’

‘ಪೀಟರ್’ ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲೂ ತೆರೆಗೆ ಬರಲಿದೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಹೈದ್ರಾಬಾದ್ ನಲ್ಲಿಯೂ ಸದ್ಯ ‘ಪೀಟರ್’ ಚಿತ್ರದ ಪ್ರಚಾರ ಕೆಲಸ ನಡೆಯುತ್ತಿದೆ. ಏಪ್ರಿಲ್ 10ಕ್ಕೆ ‘ಪೀಟರ್’ ಚಿತ್ರ ಕರ್ನಾಟಕ ರಾಜ್ಯದಲ್ಲಿ ಬಿಡುಗಡೆಯಾದರೇ, ಇನ್ನೂ ಎರಡು ವಾರದ ಬಳಿಕ ಆಯಾಯಾ ರಾಜ್ಯಗಳಲ್ಲಿ ‘ಪೀಟರ್’ ಚಿತ್ರ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.

Related Posts

error: Content is protected !!