Pop Corner

ಥೈಲ್ಯಾಂಡ್‌ ನಲ್ಲಿ ರಶ್ಮಿಕಾ – ದೇವರಕೊಂಡ ‘ಬಡ್ಡಿಮೂನ್‌’!

ವಿವಾಹದ ಬಳಿಕ ಥೈಲ್ಯಾಂಡ್ ನತ್ತ ರಶ್ಮಿಕಾ – ವಿಜಯ್‌ ಪ್ರವಾಸ

ಮಧುಚಂದ್ರಕ್ಕೆ ಥೈಲ್ಯಾಂಡಿನ ‘ಏರ್‌ಬಿಎನ್‌ಬಿ’ಯ ಖಾಸಗಿ ವಿಲ್ಲಾದತ್ತ ಮುಖಮಾಡಿದ ತಾರಾ ಜೋಡಿ

 ‘ಏರ್‌ಬಿಎನ್‌ಬಿ’ಯ ಹೊಸ ಕಿರುಚಿತ್ರದಲ್ಲಿ ಕಾಣಿಸಿಕೊಂಡ ವಿರೋಶ್‌ ಜೋಡಿ!

ಜನಪ್ರಿಯ ತಾರಾ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ವಿವಾಹದ ನಂತರದ ಮೊದಲ ಪ್ರವಾಸ ಮಾಡಿದ್ದು, ಥೈಲ್ಯಾಂಡ್‌ ನ ‘ಏರ್‌ಬಿಎನ್‌ಬಿ’ಯ ಖಾಸಗಿ ವಿಲ್ಲಾದಲ್ಲಿ ಆಪ್ತ ಕ್ಷಣಗಳನ್ನು ಕಳೆದಿದ್ದಾರೆ. ಇದೀಗ ಅವರು ಮದುವೆ ಬಳಿಕ ಮೊದಲ ಪ್ರವಾಸದ ಸುಂದರ ಕ್ಷಣಗಳನ್ನು ಕಳೆದಿರುವುದಾಗಿ ತಮ್ಮ ಅನುಭವಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಜಾಗತಿಕ ಪ್ರವಾಸೋದ್ಯಮ ಸಂಸ್ಥೆ ‘ಏರ್‌ಬಿಎನ್‌ಬಿ’ ತನ್ನ ನೂತನ ಕಿರುಚಿತ್ರವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಈ ತಾರಾ ಜೋಡಿ ಕಾಣಿಸಿಕೊಂಡಿದ್ದಾರೆ.

ಥೈಲ್ಯಾಂಡ್‌ ನ ಮನಮೋಹಕ ತಾಣ ‘ಕೋ ಸಮುಯಿ’ ನಲ್ಲಿ ಚಿತ್ರೀಕರಿಸಲಾದ ಈ ಕಿರುಚಿತ್ರವುವಿವಾಹದ ನಂತರ ದಂಪತಿಗಳು ತಮ್ಮ ಮೊದಲ ವಿರಾಮ ಸಂದರ್ಭವನ್ನು ಹೇಗೆ ಕಳೆದರು ಎಂಬುದನ್ನು ಚಿತ್ರಿಸಿದೆ. ಇಲ್ಲಿ ಯಾವುದೇ ಆಡಂಬರವಿಲ್ಲದೆ, ಏರ್‌ಬಿಎನ್‌ಬಿ’ಯ ಖಾಸಗಿ ವಿಲ್ಲಾವೊಂದರಲ್ಲಿ ಪರಸ್ಪರರ ಜೊತೆ ಸಮಯ ಕಳೆಯುವಅಡುಗೆ ಮನೆಯಲ್ಲಿ ಹಾಡುತ್ತಾ ಸಂಭ್ರಮಿಸುವ ಮತ್ತು ಸ್ವಿಮ್ಮಿಂಗ್ ಪೂಲ್ ಬಳಿ ಹರಟೆ ಹೊಡೆಯುವ ಅತ್ಯಂತ ಸಹಜ ಕ್ಷಣಗಳನ್ನು ಸೆರೆಹಿಡಿಯಲಾಗಿದೆ.

ಈ ವಿಶೇಷ ಚಿತ್ರದ ವಿಶೇಷತೆಯೆಂದರೆಚಿತ್ರದ ಹಿನ್ನೆಲೆ ಧ್ವನಿಯಲ್ಲಿ ವಿಜಯ್ ಮತ್ತು ರಶ್ಮಿಕಾ ತಮ್ಮ ಮದುವೆಯ ಸಂದರ್ಭದಲ್ಲಿ ಪರಸ್ಪರ ಬರೆದುಕೊಂಡಿದ್ದ ಆಪ್ತ ಮಾತುಗಳನ್ನು ಬಳಸಿಕೊಂಡಿರುವುದು. ಉಪಹಾರದ ಸಮಯದ ತುಂಟಾಟಭವಿಷ್ಯದ ಕನಸುಗಳ ಬಗ್ಗೆ ನಡೆಸುವ ಗಂಭೀರ ಚರ್ಚೆಗಳು ಈ ಕಿರುಚಿತ್ರದಲ್ಲಿ ಗಮನ ಸೆಳೆಯುತ್ತವೆ. ಕೇವಲ ಪ್ರವಾಸ ಮಾತ್ರವಲ್ಲದೆಸಂಬಂಧಗಳಲ್ಲಿನ ಸಣ್ಣ ಸಣ್ಣ ಸುಂದರ ಕ್ಷಣಗಳನ್ನು ಸಂಭ್ರಮಿಸುವುದನ್ನು ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ. 

ವಿರೋಶ್ ಜೋಡಿಯದ್ದು ಬಡ್ಡಿಮೂನ್‘ ಅಂತೆ!

ಈ ಪ್ರವಾಸದಲ್ಲಿ ರಶ್ಮಿಕಾ ಮಂದಣ್ಣ – ವಿಜಯ್‌ ದೇವರಕೊಂಡ ದಂಪತಿಯ ಜೊತೆ ಅವರ ಸ್ನೇಹಿತರು ಭಾಗವಹಿಸಿರುವುದು ವಿಶೇಷ. ಮಧುಚಂದ್ರದ ಪ್ರವಾಸದಲ್ಲಿ ನವ ವಧುವರರ ಜೊತೆಗೆ ಅವರ ಆತ್ಮೀಯ ಸ್ನೇಹಿತರು ಮತ್ತು ಆಪ್ತರು ಕೂಡ ತೆರಳುವುದನ್ನು ‘ಬಡ್ಡಿಮೂನ್‌’ ಎನ್ನಲಾಗುತ್ತಿದ್ದು, ಇತ್ತೀಚೆಗೆ ಈ ‘ಬಡ್ಡಿಮೂನ್‌’ ಟ್ರೆಂಡ್‌ ಜನಪ್ರಿಯವಾಗುತ್ತಿದೆ. ಈ ಹೊಸ ಪರಿಕಲ್ಪನೆಯ ‘ಬಡ್ಡಿಮೂನ್’ ಅನ್ನುವುದು ಈ ಕಾಲದ ಬದಲಾಗುತ್ತಿರುವ ಪ್ರವಾಸೋದ್ಯಮದ ಟ್ರೆಂಡ್ ಅನ್ನು ತೋರಿಸುತ್ತದೆ. ‘ಏರ್‌ಬಿಎನ್‌ಬಿ’ ಅಂಕಿ-ಅಂಶಗಳ ಪ್ರಕಾರಭಾರತೀಯ ಪ್ರವಾಸಿಗರು ಬೇಸಿಗೆಯ ಪ್ರವಾಸಕ್ಕಾಗಿ ಮಾಡುವ ಹುಡುಕಾಟಗಳಲ್ಲಿ ಶೇಕಡಾ 40% ರಷ್ಟು ಗ್ರೂಪ್ ಸ್ಟೇ‘ ಅಥವಾ ಗುಂಪಾಗಿ ಉಳಿದುಕೊಳ್ಳುವ ಆಯ್ಕೆಗಳೇ ಇರುತ್ತವೆ. ಮಧುಚಂದ್ರದ ಸಂದರ್ಭದಲ್ಲೂ ಆಪ್ತ ಗೆಳೆಯರ ಬಳಗವನ್ನು ಜೊತೆಗೊಯ್ಯುವ ಬಡ್ಡಿಮೂನ್‘ ಟ್ರೆಂಡ್‌ ನಿಧಾನವಾಗಿ ಭಾರತದಲ್ಲಿ ಜನಪ್ರಿಯವಾಗುತ್ತಿದೆ.

Related Posts

error: Content is protected !!