Video

‘ಪೆದ್ದಿ’ಯ ಪೈಲ್ವಾನ್ ಗೆಟಪ್ಗೆ ರಾಮ್ ಚರಣ್ ಫ್ಯಾನ್ಸ್‌ ಫಿದಾ!

ರಾಮ್ ಚರಣ್ ಬರ್ತಡೇಗೆ ‘ಪೆದ್ದಿ’ ಗ್ಲಿಂಪ್ಸ್ ರಿಲೀಸ್…

ದೇಹ ಹುರಿಗೊಳಿಸಿ ಖಡಕ್ ‘ಪೈಲ್ವಾನ್’ ಅವತಾರದಲ್ಲಿ ‘ಗ್ಲೋಬಲ್ ಸ್ಟಾರ್’ ರಾಮ್ ಚರಣ್ 

‘ಪೆದ್ದಿ’ಯ ಕನ್ನಡದ ಟೀಸರ್ ಗೆ ಶಿವಣ್ಣ ಧ್ವನಿ

ತೆಲುಗು ನಟ ‘ಗ್ಲೋಬಲ್ ಸ್ಟಾರ್’ ರಾಮ್ ಚರಣ್ ನಟಿಸುತ್ತಿರುವ ಬಹು ನಿರೀಕ್ಷಿತ ಸಿನೆಮಾ ‘ಪೆದ್ದಿ’ ತೆರೆಗೆ ಬರಲ ಭರದಿಂದ ತಯಾರಾಗುತ್ತಿದೆ. ಸದ್ಯ ‘ಪೆದ್ದಿ’ ಚಿತ್ರದ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ‘ಪೆದ್ದಿ’ ಚಿತ್ರದ ಸ್ಪೆಷಲ್ ಗ್ಲಿಂಪ್ಸ್ ಕೂಡ ಬಿಡುಗಡೆಯಾಗಿದೆ. ‘ಪೆದ್ದಿ’ ಚಿತ್ರದ ನಾಯಕ ನಟ ರಾಮ್ ಚರಣ್ ತೇಜ ಅವರ ಬರ್ತಡೇ ವಿಶೇಷವಾಗಿ ‘ಪೆದ್ದಿ’ ಚಿತ್ರದ ಸ್ಪೆಷಲ್‌ ಗ್ಲಿಂಪ್ಸ್‌ ಬಿಡುಗಡೆ ಮಾಡಲಾಗಿದೆ.

ಇನ್ನು ಬಿಡುಗಡೆಯಾಗಿರುವ ‘ಪೆದ್ದಿ’ ಚಿತ್ರದ ಸ್ಪೆಷಲ್‌ ಗ್ಲಿಂಪ್ಸ್‌ ನಲ್ಲಿ ನಟ ರಾಮ್‌ ಚರಣ್‌ ತಮ್ಮ ಹಿಂದಿನ ಗೆಟಪ್‌ಗಳಿಗಿಂತ ಸಂಪೂರ್ಣ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ದೇಹ ಹುರಿಗೊಳಿಸಿ ಖಡಕ್ ‘ಪೈಲ್ವಾನ್’ ಅವತಾರದಲ್ಲಿ ರಾಮ್ ಚರಣ್ ಕಾಣಿಸಿಕೊಂಡಿದ್ದಾರೆ. ಟೀಸರ್ ನಲ್ಲಿ ಅವರು ತಮ್ಮ ಭುಜ ಬಲದ ಪರಾಕ್ರಮ ಪ್ರದರ್ಶಿಸಿದ್ದು, ‘ಪೆದ್ದಿ’ ಚಿತ್ರದ ಕನ್ನಡದ ಟೀಸರ್ ಗೆ ಸ್ಯಾಂಡಲ್‌ವುಡ್‌ ನಟ ಶಿವರಾಜಕುಮಾರ್‌ ಧ್ವನಿಯಾಗಿದ್ದಾರೆ. ‘ಪೆದ್ದಿ’ ಚಿತ್ರದ ಕನ್ನಡ ಟೀಸರ್‌ನಲ್ಲಿ ನಟ ಶಿವರಾಜಕುಮಾರ್‌ ಕುಸ್ತಿ ಅಂದರೆ ಏನೂ ಅನ್ನೋದನ್ನ ವಿವರಿಸಿದ್ದಾರೆ. ಇನ್ನು ‘ಪೆದ್ದಿ’ ಸಿನೆಮಾದಲ್ಲಿ ಪೈಲ್ವಾನ್ ಗೆಟಪ್ ನಲ್ಲಿ ರಾಮ್ ಚರಣ್ ಅವರನ್ನು ನೋಡಿ ಅವರ ಅಭಿಮಾನಿಗಳು ಫುಲ್‌ ಥ್ರಿಲ್ ಆಗಿದ್ದಾರೆ. ರಾಮ ಚರಣ್‌ ಹೊಸ ಗೆಟಪ್‌ ಬಗ್ಗೆ ಎಲ್ಲಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

‘ಪೆದ್ದಿ’ಯಲ್ಲಿ ಬೃಹತ್‌ ತಾರೆಯರ ಸಮಾಗಮ!

ಈ ಹಿಂದೆ ತೆಲುಗಿನಲ್ಲಿ ತೆರೆಕಂಡು ಸೂಪರ್‌ ಹಿಟ್‌ ಆಗಿದ್ದ ‘ಉಪ್ಪೆನ’ ಸಿನೆಮಾವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ ಈ ‘ಪೆದ್ದಿ’ ಚಿತ್ರಕ್ಕೆ ಆಕ್ಷನ್- ಕಟ್ ಹೇಳಿದ್ದಾರೆ. ‘ಪೆದ್ದಿ’ ಸಿನೆಮಾದಲ್ಲಿ ರಾಮ್ ಚರಣ್‌ಗೆ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ಕನ್ನಡದ ನಟ ಹ್ಯಾಟ್ರಿಕ್ ಹೀರೋ ಶಿವಕುಮಾರ್ ‘ಪೆದ್ದಿ’ ಚಿತ್ರದಲ್ಲಿ ಸ್ಪೆಷಲ್ ರೋಲ್ ಪ್ಲೇ ಮಾಡಿದ್ದಾರೆ. ಇನ್ನುಳಿದಂತೆ, ಜಗಪತಿ ಬಾಬು, ದಿವೇಂದು ಶರ್ಮಾ ಮುಂತಾದ ಬೇರೆ ಬೇರೆ ಭಾಷೆಯ ಜನಪ್ರಿಯ ಕಲಾವಿದರ ಬೃಹತ್‌ ತಾರಾಗಣವೇ ‘ಪೆದ್ದಿ’ ಸಿನೆಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದೆ.

‘ಪೆದ್ದಿ’ ಸಿನೆಮಾದಲ್ಲಿ ನಾಯಕ ನಟ ರಾಮ್‌ ಚರಣ್‌ ಅವರ ಪೈಲ್ವಾನ್‌ ಲುಕ್‌ ಗ್ಲಿಂಪ್ಸ್‌ (ಟೀಸರ್‌) ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

‘ಪೆದ್ದಿ’ ಸ್ಪೋರ್ಟ್ ಆಕ್ಷನ್ ಡ್ರಾಮಾ

ಇನ್ನು ‘ಪೆದ್ದಿ’ ಸ್ಪೋರ್ಟ್ ಆಕ್ಷನ್ ಡ್ರಾಮಾ ಸಿನೆಮಾವಾಗಿದ್ದು, ಈ ಚಿತ್ರಕ್ಕೆ ಎ. ಆರ್. ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ವೃದ್ಧಿ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ‘ಪೆದ್ದಿ’ ಸಿನೆಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ಮತ್ತು ‘ಸುಕುಮಾರ್ ರೈಟಿಂಗ್ಸ್’ ಬ್ಯಾನರ್‌ಗಳು ಚಿತ್ರಕ್ಕೆ ಬೆಂಬಲವಾಗಿ ನಿಂತಿವೆ. ಆರ್. ರತ್ನವೇಲು ಛಾಯಾಗ್ರಹಣ ಮಾಡುತ್ತಿದ್ದು, ಇದೇ 2026ರ ಏಪ್ರಿಲ್ 30ಕ್ಕೆ ‘ಪೆದ್ದಿ’ ಸಿನೆಮಾ ತೆಲುಗು, ತಮಿಳು, ಹಿಂದಿ, ಕನ್ನಡ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ

Related Posts

error: Content is protected !!