ಬಹು ಭಾಷೆಗಳಲ್ಲಿ ಹೊರಬಂತು ‘ಪೆದ್ದಿ’ ಟ್ರೇಲರ್
ಬಹುನಿರೀಕ್ಷಿತ ‘ಪೆದ್ದಿ’ ಸಿನೆಮಾ ಟ್ರೇಲರ್ ರಿಲೀಸ್
ಏಕಕಾಲಕ್ಕೆ ಬಹುಭಾಷೆಗಳಲ್ಲಿ ಹೊರಬಂತು ‘ಪೆದ್ದಿ’ ಟ್ರೇಲರ್
ಟ್ರೇಲರಿನಲ್ಲಿ ಮಾಸ್ ಅಡಿಯನ್ಸ್ ಗಮನ ಸೆಳೆದ ಸ್ಪೋರ್ಟ್ಸ್ ಆಕ್ಷನ್-ಡ್ರಾಮಾ
‘ಗ್ಲೋಬಲ್ ಸ್ಟಾರ್’ ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ‘ಪೆದ್ದಿ’ ಸಿನೆಮಾವನ್ನು ರಾಮ್ ಚರಣ್ ಅಭಿಮಾನಿಗಳು ತುದಿಗಾಲಿನಲ್ಲಿ ಎದುರು ನೋಡುತ್ತಿದ್ದಾರೆ. ಅಂದಹಾಗೆ, ಇದೇ 2026ರ ಜೂನ್ 4ರಂದು, ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘ಪೆದ್ದಿ’ ಅದ್ದೂರಿಯಾಗಿ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ‘ಪೆದ್ದಿ’ ಚಿತ್ರದ ಒಂದಷ್ಟು ಗ್ಲಿಂಪ್ಸ್ ನಲ್ಲಿ ರಾಮ್ ಚರಣ್ ಅವತಾರ ನೋಡಿ ಎಕ್ಸೈಟ್ ಆಗಿದ್ದ ಫ್ಯಾನ್ಸ್,
ಇದೀಗ ಬಿಡುಗಡೆಯಾಗಿರುವ ‘ಪೆದ್ದಿ’ ಸಿನೆಮಾದ ಟ್ರೇಲರ್ ನೋಡಿ ಫುಲ್ ಥ್ರಿಲ್ ಆಗಿದ್ದಾರೆ. ಹೌದು, ಇದೇ 2026ರ ಮೇ 18ರಂದು ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ‘ಪೆದ್ದಿ’ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ.
ಹೇಗಿದೆ ‘ಪೆದ್ದಿ’ ಸಿನೆಮಾದ ಟ್ರೇಲರ್..?
ಆರಂಭದಲ್ಲಿಯೇ ಚಿತ್ರತಂಡ ಹೇಳಿಕೊಂಡು ಬಂದಿರುವಂತೆ, ‘ಪೆದ್ದಿ’ ಒಂದು ಔಟ್ ಅಂಡ್ ಔಟ್ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ. ‘ಪೆದ್ದಿ’ ಸಿನೆಮಾದ ಟ್ರೇಲರಿನಲ್ಲಿ ಕೂಡ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾದ ಝಲಕ್ ಅನ್ನು ತೆರೆದಿಡಲಾಗಿದೆ. ಕ್ರೀಡಾ ಕಥಾಹಂದರದ ಜೊತೆಗೆ, ಲವ್, ರೊಮ್ಯಾನ್ಸ್, ಸೆಂಟಿಮೆಂಟ್, ಫ್ಯಾಮಿಲಿ ಎಮೋಶನ್ಸ್, ಆಕ್ಷನ್, ಥ್ರಿಲ್ಲರ್ ಹೀಗೆ ಎಲ್ಲಾ ಥರದ ಎಂಟರ್ಟೈನ್ಮೆಂಟ್ ಎಲಿಮೆಂಟ್ಸ್‌ಗಳನ್ನು ‘ಪೆದ್ದಿ’ ಸಿನೆಮಾದ ಟ್ರೇಲರಿನಲ್ಲಿ ಕಟ್ಟಿಕೊಡಲಾಗಿದೆ.
‘ಪೆದ್ದಿ’ ಸಿನೆಮಾದ ಟ್ರೇಲರಿನಲ್ಲಿ ನಾಯಕ ನಟ ರಾಮ್ ಚರಣ್ ಜೊತೆಗೆ ನಾಯಕಿ ಜಾನ್ವಿ ಕಪೂರ್, ನಟರಾದ ಶಿವರಾಜಕುಮಾರ್, ರವಿ ಕಿಶನ್, ಬೊಮ್ಮನ್ ಇರಾನಿ, ಜಗಪತಿ ಬಾಬು, ದಿವೇಂದು ಶರ್ಮಾ ಹೀಗೆ ದೊಡ್ಡ ಕಲಾವಿದರ ತಾರಾಗಣವೇ ಕಾಣಬಹುದು. ಇನ್ನು ‘ಪೆದ್ದಿ’ ಸಿನೆಮಾ ಬಹುಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಾಣುತ್ತಿದೆ. ಹಾಗಾಗಿ ‘ಪೆದ್ದಿ’ ಚಿತ್ರದ ಟ್ರೇಲರ್ ಅನ್ನು ಕೂಡ ತೆಲುಗಿನ ಜೊತೆಗೆ ಕನ್ನಡ, ಹಿಂದಿ, ತಮಿಳು, ಮಲೆಯಾಳಂ ಹೀಗೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದೆ.
‘ಪೆದ್ದಿ’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಇದೇ 2026ರ ಜೂ. 4ಕ್ಕೆ ಥಿಯೇಟರಿನಲ್ಲಿ ‘ಪೆದ್ದಿ’ ದರ್ಶನ
ಈ ಹಿಂದೆ ತೆಲುಗಿನಲ್ಲಿ ‘ಉಪ್ಪೆನ’ ಸಿನೆಮಾವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ ‘ಪೆದ್ದಿ’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ‘ಪೆದ್ದಿ’ ಚಿತ್ರದ ಹಾಡುಗಳಿಗೆ ಸಂಗೀತ ಮಾಂತ್ರಿಕ ಎ. ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ‘ವೃದ್ಧಿ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ಮತ್ತು ‘ಸುಕುಮಾರ್ ರೈಟಿಂಗ್ಸ್’ ಬ್ಯಾನರ್‌ಗಳು ಚಿತ್ರಕ್ಕೆ ಬೆಂಬಲವಾಗಿ ನಿಂತಿವೆ. ಆರ್. ರತ್ನವೇಲು ಛಾಯಾಗ್ರಹಣ, ನವೀಲ್ ನೂಲಿ ಸಂಕಲನ ಚಿತ್ರಕ್ಕಿದೆ. ಸದ್ಯ ಟ್ರೇಲರ್ ಮೂಲಕ ನಿರೀಕ್ಷೆಯನ್ನು ಹೆಚ್ಚಿಸಿರುವ ‘ಪೆದ್ದಿ’ ಥಿಯೇಟರಿನಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬುದು ಇದೇ ಜೂನ್ ಮೊದಲ ವಾರಾಂತ್ಯದಲ್ಲಿ ಗೊತ್ತಾಗಲಿದೆ.















