Street Beat

‘ತಿಕ್ಲುರಾಮ’ ಸಿನೆಮಾಕ್ಕೆ ಈಗ ಕಾದಂಬರಿ ರೂಪ

ಹೊರಬಂತು ‘ತಿಕ್ಲುರಾಮ’ ಸಿನೆಮಾದ ಕಾದಂಬರಿ

ಡಾ. ನಟರಾಜ ಅವರ ಪರಿಸರ ಪ್ರೇಮಿ, ಹೃದಯಸ್ಪರ್ಶಿ ಕಾದಂಬರಿ ಬಿಡುಗಡೆ

ಸಿನೆಮಾದ ಜೊತೆಗೆ ಕಾದಂಬರಿ ರೂಪ ಪಡೆದುಕೊಂಡ ‘ತಿಕ್ಲುರಾಮ’

‘ತಿಕ್ಲುರಾಮ’ – ಕನ್ನಡದಲ್ಲಿ ಹೀಗೊಂದು ಹೆಸರಿನಲ್ಲಿ ಸಿನೆಮಾವೊಂದು ತೆರೆಗೆ ಬರುತ್ತಿರುವುದು ಅನೇಕರಿಗೆ ಗೊತ್ತಿರಬಹುದು. ಕೆಲ ತಿಂಗಳ ಹಿಂದಷ್ಟೇ ಈ ‘ತಿಕ್ಲುರಾಮ’ ಸಿನೆಮಾದ ಶೀರ್ಷಿಕೆಗೆ ಸಂಬಂಧಿಸಿದಂತೆ, ಅದರ ಸುತ್ತ ಒಂದಷ್ಟು ವಿವಾದಗಳು ಕೂಡ ಭುಗಿಲೆದ್ದಿತ್ತು. ಇದೀಗ ಈ ‘ತಿಕ್ಲುರಾಮ’ ಸಿನೆಮಾವನ್ನು ಕಾದಂಬರಿ ರೂಪದಲ್ಲಿ ಕನ್ನಡದ ಓದುಗರ ಮುಂದಿಡುವ ಪ್ರಯತ್ನ ನಡೆದಿದೆ.

ಹೌದು, ಪರಿಸರ ಪ್ರೇಮಿಯೊಬ್ಬನ ಹೃದಯಸ್ಪರ್ಶಿ ಕಥೆಯನ್ನು ಹೊಂದಿರುವ ‘ತಿಕ್ಲುರಾಮ’ ಡಾ. ನಟರಾಜ ವಿರಚಿತ ಕಾದಂಬರಿಯಾಗಿದ್ದು ಸಿನೆಮಾ ರೂಪದಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ಈ ಚಿತ್ರದ ಶೇಕಡ 40ರಷ್ಟು ಚಿತ್ರೀಕರಣ ಕೂಡ ನಡೆದಿದೆ. ಇದೀಗ ಈ ಸಿನೆಮಾಕ್ಕೆ ಕಾದಂಬರಿ ರೂಪ ನೀಡಲಾಶಗಿದ್ದು, ಇತ್ತೀಚೆಗೆ ‘ತಿಕ್ಲುರಾಮ’ ಕಾದಂಬರಿ ಬೆಂಗಳೂರಿನ ಮಂತ್ರಿ ಮಾಲ್‌ದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ‘ಪದ್ಮಶ್ರೀ’ ಡಾ. ದೊಡ್ಡರಂಗೇಗೌಡ, ನಟ ನಿರ್ದೇಶಕ ಕೆ. ಸುಚೇಂದ್ರ ಪ್ರಸಾದ್, ಸಾಹಿತಿ ಮತ್ತು ನಿರ್ದೇಶಕ ಬಿ. ಶಿವಾನಂದ, ಡಾ. ಭರತ್ ಮುಂತಾದವರ ಅಮೃತ ಹಸ್ತದಲ್ಲಿ ‘ತಿಕ್ಲುರಾಮ’ ಕಾದಂಬರಿ ರೂಪದಲ್ಲಿ ಬಿಡುಗಡೆಯಾಗಿ ಹೊರಬಂದಿತು.

‘ತಿಕ್ಲುರಾಮ’ನ ಬೆನ್ನು ತಟ್ಟಿದ ಡಾ. ದೊಡ್ಡರಂಗೇ ಗೌಡ

‘ತಿಕ್ಲುರಾಮ’ ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕನ್ನಡದ ಹಿರಿಯ ಸಾಹಿತಿ ಪ್ರೊ. ಡಾ. ದೊಡ್ಡರಂಗೇಗೌಡ, ‘ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ವಿಶಿಷ್ಟ ಬರಹಗಳು, ಸೃಜನಶೀಲ ಸಾಹಿತ್ಯಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಗುರುತಿಸುವಂತೆ ಮಾಡುತ್ತಿವೆ. ಇದು ಒಂದು ಒಳ್ಳೆಯ ಬೆಳವಣಿಗೆ. ನಮ್ಮ ಮುಂದಿರುವ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಭಾಷೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವಂತಾಗಬೇಕು. ‘ತಿಕ್ಲುರಾಮ’ ಕಾದಂಬರಿ ಕೂಡ ಅದೇ ಆಶಯವನ್ನು ಈಡೇರಿಸಲಿ. ‘ತಿಕ್ಲುರಾಮ’ ಕಾದಂಬರಿಯ ಮೂಲವಸ್ತು, ಅದರ ಸೆಳೆತ ಚೆನ್ನಾಗಿದೆ. ಇದು ಓದುಗರನ್ನು ತಲುಪಲಿ. ‘ತಿಕ್ಲುರಾಮ’ ಕಾದಂಬರಿ ಸಿನೆಮಾವಾಗುವುದನ್ನು ನೋಡಲು ಕಾತುರನಾಗಿದ್ದೇನೆ. ಇಂಥದ್ದೊಂದು ಪ್ರಯತ್ನ ಮಾಡುತ್ತಿರುವ ಇಡೀ ತಂಡಕ್ಕೆ ಶುಭವಾಗಲಿ’ ಎಂದರು.

‘ತಿಕ್ಲುರಾಮ’ ಮನಮುಟ್ಟಲಿದ್ದಾನೆ; ಸುಚೇಂದ್ರ ಪ್ರಸಾದ್‌

‘ತಿಕ್ಲುರಾಮ’ ಕಾದಂಬರಿ ಬಿಡುಗಡೆ ವೇಳೆ ಹಾಜರಿದ್ದ ಹಿರಿಯ ನಟ ಸುಚೇಂದ್ರ ಪ್ರಸಾದ್‌, ‘ಪುಸ್ತಕದಲ್ಲಿ ಗ್ರಾಮೀಣ ಸೊಗಡು, ಪರಿಸರ ಕಾಳಜಿ ಓದುಗರನ್ನು ಆಸಕ್ತಿ ತರಿಸುವಂತಿದೆ. ‘ತಿಕ್ಲುರಾಮ’ ಸಿನೆಮಾ ರೂಪದಲ್ಲಿ ಸಾಕ್ಷಿಯಾಗಿರುವುದು, ಗಮನೀಯ ಮತ್ತು ಮಾದರಿ ಅನಿಸುತ್ತೆ. ಇಂತಹ ಕೃತಿಗಳು ನಿರಂತವಾಗಿ ಹೊರಬರಲಿ. ಮನದ ಗದ್ದಲ ದೂರ ಮಾಡಿಕೊಳ್ಳಲು, ಪುಸ್ತಕ ಸಹಕಾರಿಯಾಗಿ, ಮನಸ್ಸಿಗೆ ಮುದ ನೀಡುತ್ತದೆ. ಮಂಜುಕವಿ ಶ್ರಮಕ್ಕೆ ಫಲ ಸಿಗಲಿ. ‘ತಿಕ್ಲುರಾಮ’ ಓದುಗರ ಮತ್ತು ನನೋಡುಗರ ಮನನಮುಟ್ಟಿದ್ದಾನೆ ಎಂಬ ವಿಶ್ವಾಸವಿದೆ’ ಎಂದರು.

‘ಬಿ. ಇ ಮುಗಿಸಿದ ನನಗೆ, ನಾನು ಕಥೆ ಬರೆದಿರುವುದು ಸೋಜಿಗ ಅನಿಸಿದೆ. ಪ್ರೌಡಶಾಲೆಯಲ್ಲಿದ್ದಾಗ ದೊಡ್ಡರಂಗೇಗೌಡರ ಪ್ರವಚನ ಕೇಳಿ ಪ್ರೇರಣೆಯಾಗಿ, ಅವರಂತೆ ಜೀವನದಲ್ಲಿ ನಡೀಬೇಕು ಅಂದುಕೊಂಡಿದ್ದೆ, ಇಂದು ಹಲವು ಕಥೆಗಳನ್ನು ಬರೆಯಲು ಸಹಕಾರಿ ಆಯಿತು. ಸರ್ಕಾರಿ ಕೆಲಸದಲ್ಲಿ ಕಂಡಂತ, ಸುತ್ತಮುತ್ತಲಿನ ವಿದ್ಯಾಮಾನಗಳನ್ನು ಅಕ್ಷರರೂಪದಲ್ಲಿ ತಂದಿದ್ದೇನೆ. ಕೊನೆಗೆ ‘ತಿಕ್ಲುರಾಮ’ ಹೆಸರು ಇಡಲಾಗಿದ್ದಕ್ಕೆ ಕಾರಣವೇನು’ ಎಂಬುದಕ್ಕೆ ಡಾ. ರಾಜ್‌ವೀರ್ ವಿವರಣೆ ಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ‘ತಿಕ್ಲುರಾಮ’ ಸಿನೆಮಾದ ನಿರ್ದೇಶಕ ಮಂಜು ಕವಿ, ‘ಪುಸ್ತಕವನ್ನು ಪ್ರತಿಯೊಬ್ಬರು ಓದಬೇಕು. ಓದಿದವರು ಖಂಡಿತ ಒಂದಷ್ಟು ಜನ ಬದಲಾವಣೆ ಆಗ್ತಾರೆ. ಪರಿಸರ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು. ಪ್ರಕೃತಿ ಎಲ್ಲವನ್ನು ಕೊಟ್ಟಿದೆ. ಇನ್ನು ಮುಂತಾದ ವಿಷಯಗಳ ಬಗ್ಗೆ ವರ್ಣನೆ ಮಾಡಲಾಗಿದೆ. ಸುಚೇಂದ್ರ ಪ್ರಸಾದ್ ಶಾಸಕರಾಗಿ ಬಣ್ಣ ಹಚ್ಚುತ್ತಿದ್ದಾರೆ. ಬೇರೆ ಟೈಟಲ್ ಇಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ತಿಳಿಸಲಾಗುವುದು’ ಎಂದು ತಿಳಿಸಿದರು.

ಶೀಘ್ರದಲ್ಲಿಯೇ ‘ತಿಕ್ಲುರಾಮ’ ತೆರೆಗೂ ಬರಲಿದ್ದಾನೆ! 

ಇನ್ನು ‘ತಿಕ್ಲುರಾಮ’ ಸಿನೆಮಾಕ್ಕೆ ಮಂಜು ಕವಿ ನಿರ್ದೇಶನ ಜವಬ್ದಾರಿಯನ್ನು ಹೊತ್ತುಕೊಂಡಿದ್ದು, ಡಾ. ರಾಜವೀರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ‘ಕರಿಷ್ಮ-ಶ್ರ್ಯಾವ್ಯ ಕಂಬೈನ್ಸ್’ ಬ್ಯಾನರ್ ಅಡಿಯಲ್ಲಿ ಶೃತಿ. ಜಿ. ಬಿ ಮತ್ತು ಕೋಮಲ ನಟರಾಜು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ತಾರಾಗಣದಲ್ಲಿ ಸುಚೇಂದ್ರ ಪ್ರಸಾದ್, ಜಹಾಂಗೀರ್, ಚೈತ್ರರಾಮ್, ಹಾಸ್ಯ ನಟ ಗಿರೀಶ್. ಇವರೊಂದಿಗೆ ವಿನೋದ್ ಪವಿತ್ರ, ನಿಖಿತ ಸ್ವಾಮಿ, ಶ್ರಾವ್ಯ ಸೇರಿದಂತೆ ಅನೇಕ ಹೆಸರಾಂತ ಕಲಾವಿದರು ಅಭಿನಯಿಸುತ್ತಿದ್ದಾರೆ. ಸದ್ಯ ‘ತಿಕ್ಲುರಾಮ’ ಸಿನೆಮಾದ ಕೆಲಸಗಳು ಭರದಿಂದ ನಡೆಯುತ್ತಿದ್ದು, ಶೀಘ್ರದಲ್ಲಿಯೇ ‘ತಿಕ್ಲುರಾಮ’ನನ್ನು ಸಿನೆಮಾರೂಪದಲ್ಲಿ ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

Related Posts

error: Content is protected !!