Pop Corner

‘ಲವ್‌ 2 ಲಸ್ಸಿ’ ಮೋಶನ್‌ ಪೋಸ್ಟರ್‌ ಮತ್ತು ಸಾಂಗ್ ರಿಲೀಸ್

ಹೊಸಬರ ‘ಲವ್ 2 ಲಸ್ಸಿ’ ಚಿತ್ರದ ಪೋಸ್ಟರ್, ಹಾಡು ಹೊರಕ್ಕೆ

ನವ ಪ್ರತಿಭೆಗಳ ಹೊಸ ಪ್ರೇಮಕಥೆ ‘ಲವ್ 2 ಲಸ್ಸಿ’ ತೆರೆಗೆ ಬರಲು ತಯಾರಿ… 

ನೈಜ ಕಥೆಗೆ ‘ಲವ್ 2 ಲಸ್ಸಿ’ ಚಿತ್ರರೂಪ

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹೊಸ ಚಿತ್ರ ‘ಲವ್ 2 ಲಸ್ಸಿ’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ‘ಲವ್ 2 ಲಸ್ಸಿ’ ಚಿತ್ರದ ಚಿತ್ರೀಕರಣ ಮತ್ತು ಬಹುತೇಕ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ‘ಲವ್ 2 ಲಸ್ಸಿ’ ಚಿತ್ರದ ಮೋಶನ್‌ ಪೋಸ್ಟರ್‌ ಮತ್ತು ಹಾಡನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಚಿತ್ರ ನಿರ್ದೇಶಕ ಒರಟ ಶ್ರೀ, ರಾಜಕೀಯ ನಾಯಕ ಸಪ್ತಗಿರಿ ಗೌಡ ಮೊದಲಾದ ಗಣ್ಯರು ಹಾಜರಿದ್ದು ‘ಲವ್ 2 ಲಸ್ಸಿ’ ಚಿತ್ರದ ಮೋಶನ್‌ ಪೋಸ್ಟರ್‌ ಮತ್ತು ಹಾಡನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ರೀಲ್‌ನಲ್ಲಿ ರಿಯಲ್‌ ಸ್ಟೋರಿಯಂತೆ…!

ಇನ್ನು ‘ಲವ್ 2 ಲಸ್ಸಿ’ ಸಿನೆಮಾವನ್ನು ‘ಆರ್‌.ಕೆ.ಬಿ ಫಿಲಂಸ್‌’ನ ಭಾರತಿ ಶ್ರೀನಿವಾಸ್ ರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಯುವ ಪ್ರತಿಭೆ ಹರಿಪ್ರಾಣ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕನ್ನಡ ಚಿತ್ರರಂಗ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 20 ವರ್ಷಗಳಿಂದ ಸಕ್ರಿಯರಾಗಿರುವ ಹರಿಪ್ರಾಣ, ಇಲ್ಲಿಯವರೆಗೆ ಸುಮಾರು 18 ಸಿನೆಮಾಗಳಲ್ಲಿ ವಿವಿಧ ಕೆಲಸ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. ‘ಲವ್ 2 ಲಸ್ಸಿ’ ಸಿನೆಮಾದ ಮೂಲಕ ಹರಿಪ್ರಾಣ ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.

‘ಲವ್ 2 ಲಸ್ಸಿ’ ಮೇಲೆ ನಿರ್ದೇಶಕರಿಗೆ ಭರಪೂರ ಭರವಸೆ

ನಿರ್ದೇಶಕ ಹರಿಪ್ರಾಣ ಮಾತನ್ನಾಡಿ, ‘ಈ ಸಿನೆಮಾ ಒಂದು ನೈಝ ಘಟನೆ ಆಧರಿಸಿ ತೆರೆಗೆ ಬರುತ್ತಿದೆ. ಪುತ್ತೂರು ಹುಡುಗಿ ಬೆಂಗಳೂರು ಹುಡುಗನನ್ನ ಇಟ್ಟುಕೊಂಡು ಈ ಸಿನೆಮಾ ಮಾಡಿದ್ದೀನಿ. ಇದು ಕೆಫೆ ಸ್ಟೋರಿ ಅಲ್ಲ. ಈ ರಿಯಲ್ ಲವ್ ಸ್ಟೋರಿ ಹುಡುಗಿಯಿಂದ ಅನುಮತಿ ಪಡೆದು ಮಾಡಿದ್ದೇವೆ. 2006-2007 ರಲ್ಲಿ ನಡೆದಂತ ಘಟನೆ ಇದಾಗಿದೆ. ಇದೊಂದು ಟ್ರಾಜಿಡಿ ಲವ್ ಸ್ಟೋರಿ. ಅದನ್ನು ನೋಡುಗರ ಮನಮುಟ್ಟುವಂತೆ ಮಾಡಿದ್ದೇವೆ.  ನನಗೆ ಹಾಡುಗಳು, ಕಥೆ ಬರೆಯೋದು ತುಂಬಾನೇ ಇಷ್ಟ. ಅದೆಲ್ಲವನ್ನೂ ಈ ಸಿನೆಮಾದಲ್ಲಿ ಮಾಡಿದ್ದೇನೆ’ ಎಂದಿದ್ದಾರೆ.

‘ಲವ್ 2 ಲಸ್ಸಿ’ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶಕ ವಿನು ಮನಸ್ಸು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಹಾಡುಗಳ ಬಗ್ಗೆ ಮಾತನಾಡಿರುವ ಸಂಗೀತ ನಿರ್ದೇಶಕ ವಿನು ಮನಸ್ಸು, ‘ಈ ಸಿನೆಮಾದಲ್ಲಿ ನಾಲ್ಕು ಹಾಡುಗಳಿವೆ. ಎಲ್ಲಾ ಹಾಡುಗಳೂ ಸನ್ನಿವೇಶಕ್ಕೆ ತಕ್ಕಂತೆ ಅರ್ಥಪೂರ್ಣವಾಗಿ ಇದೆ. ಹಾಡುಗಳನ್ನು ತುಂಬ ಚೆನ್ನಾಗಿ ಚಿತ್ರಿಸಲಾಗಿದೆ. ಹಾಗೆಯೇ ಇಡೀ ಸಿನೆಮಾ ಕೂಡ ತುಂಬ ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರದ ಹಾಡನ್ನು ಎಲ್ಲರೂ ಕೇಳಿ ಎಂಜಾಯ್ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.

ಶೀಘ್ರದಲ್ಲೇ ‘ಲವ್ 2 ಲಸ್ಸಿ’ ಸಿನೆಮಾ ತೆರೆಗೆ…

‘ಲವ್ 2 ಲಸ್ಸಿ’ ಸಿನೆಮಾದಲ್ಲಿ ನಟ ಆರ್ಯನ್‌ ನಾಯಕನಾಗಿ ಮತ್ತು ಜೀವಿತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ಸಿನೆಮಾ ತುಂಬ ಅದ್ಬುತವಾಗಿ ಮೂಡಿ ಬಂದಿದೆ. ಒಂದು ಲವ್ ಸ್ಟೋರಿ ನಲ್ಲಿ ಏನೆಲ್ಲಾ ಇದೆಯೋ ಅದೆಲ್ಲಾ ಈ ಸಿನೆಮಾದಲ್ಲಿ ಇದೆ‌. ಅಷ್ಟೇ ಅಲ್ಲ ಫ್ಯಾಮಿಲಿಗೆ ಕನೆಕ್ಟ್ ಆಗುವಂತ ವಿಚಾರಗಳು ಇದೆ’ ಎಂದಿದ್ದಾರೆ ಚಿತ್ರದ ನಾಯಕ ಮತ್ತು ನಾಯಕಿ. ಉಳಿದಂತೆ ಜಗನ್, ತಾರಾ, ವೈಷ್ಣವಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

‘ಲವ್ 2 ಲಸ್ಸಿ’ ಸಿನೆಮಾಕ್ಕೆ ಎಂ.ಎ.ಅರ್ಜುನ್ ಧೋನಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು, ಸುಳ್ಯ ಮೊದಲಾದ ಕಡೆಗಳಲ್ಲಿ ‘ಲವ್ 2 ಲಸ್ಸಿ’ ಸಿನೆಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಭರದಿಂದ ‘ಲವ್ 2 ಲಸ್ಸಿ’ ಸಿನೆಮಾದ ಪ್ರಚಾರ ಕಾರ್ಯಗಳು ನಡೆಯುತ್ತಿದ್ದು, ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರಲಿದೆ.

Related Posts

error: Content is protected !!