Pop Corner

‘ಟಾಕ್ಸಿಕ್’ ಟೀಸರ್‌ ದಾಖಲೆ ವೀಕ್ಷಣೆ!

ಯಶ್‌ ಬರ್ತ್ ಡೇ ಯಂದು ಬಿಡುಗಡೆಯಾದ ‘ಟಾಕ್ಸಿಕ್’ ಟೀಸರ್‌

‘ಟಾಕ್ಸಿಕ್’ ಟೀಸರ್‌ ಕೇವಲ 21 ಗಂಟೆಗಳಲ್ಲಿ ಬರೋಬ್ಬರಿ 4.7 ಕೋಟಿ ವೀಕ್ಷಣೆ

ಹಾಲಿವುಡ್‌ ಶೈಲಿಯ ಟೀಸರ್‌ಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ

ನಟ ‘ರಾಕಿಂಗ್‌ ಸ್ಟಾರ್‌’ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನೆಮಾದ ಮೊದಲ ಟೀಸರ್ 2026ರ ಜನವರಿ 8ರಂದು ಬಿಡುಗಡೆಯಾಗಿದೆ. ನಟ ಯಶ್‌ ಅವರ ಜನ್ಮದಿನದ ಸಂಭ್ರಮದಲ್ಲಿ ‘ಟಾಕ್ಸಿಕ್‌’ ಟೀಸರ್‌ ಬಿಡುಗಡೆಯಾಗಿದ್ದು, ಇದೀಗ ಈ ಟೀಸರ್‌ ದಾಖಲೆ ವೀಕ್ಷಣೆ ಕಂಡಿದೆ. ಹೌದು, ಯಶ್ ಜನ್ಮದಿನದಂದು ರಿಲೀಸ್ ಆದ ‘ಟಾಕ್ಸಿಕ್‌’ ಟೀಸರ್ ಬಿಡುಗಡೆಯಾದ ಕೇವಲ 21 ಗಂಟೆಗಳಲ್ಲಿ ಬರೋಬ್ಬರಿ 4.7 ಕೋಟಿ ವೀಕ್ಷಣೆ ಪಡೆದು ಹೊಸ ದಾಖಲೆ ಸೃಷ್ಟಿಸಿದೆ.

‘ರಾಯ’ ಪಾತ್ರದ ಪರಿಚಯಿಸುವ ಟೀಸರ್…

ಯಶ್ ರವರ ‘ರಾಯ’ ಪಾತ್ರದ ಪರಿಚಯಿಸುವ ಈ ಟೀಸರ್, ಹಾಲಿವುಡ್ ಗುಣಮಟ್ಟದ ಮೇಕಿಂಗ್ ಮತ್ತು ಗ್ಯಾಂಗ್‌ಸ್ಟರ್ ಅವತಾರದಿಂದ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ‘ಟಾಕ್ಸಿಕ್’ ಸಿನೆಮಾ ಬಗ್ಗೆ ಅಭಿಮಾನಿಗಳಿಗೆ ಇದ್ದ ನಿರೀಕ್ಷೆ ತುಂಬಾನೇ ದೊಡ್ಡದು. ಈಗ ಟೀಸರ್ ರಿಲೀಸ್ ಆಗಿ ಸಂಚಲನ ಸೃಷ್ಟಿಸಿದೆ. ಟೀಸರ್ ಅಂದುಕೊಂಡಿದ್ದಕ್ಕಿಂತ ಹೆಚ್ಚು ರಾ ಆಗಿ ಮೂಡಿ ಬಂದಿದೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ‘ಟಾಕ್ಸಿಕ್’ ಟೀಸರ್ ಈಗ ದಾಖಲೆಯ ವೀಕ್ಷಣೆ ಕಂಡಿದೆ. ಕನ್ನಡ ಚಿತ್ರರಂಗದ ಟೀಸರ್ ಒಂದು ಈ ರೀತಿಯಲ್ಲಿ ಹವಾ ಮಾಡಿದ್ದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು ಎಂದರೂ ತಪ್ಪಾಗಲಾರದು.

ಟೀಸರ್ 5 ಕೋಟಿ ವೀಕ್ಷಣೆ ಕಾಣುವ ಸಾಧ್ಯತೆ!

‘ಟಾಕ್ಸಿಕ್’ ಸಿನೆಮಾದ ಟೀಸರ್‌ ಮೇಕಿಂಗ್​, ಯಶ್ ಅವರ ಸ್ಟೈಲ್ ಗಮನ ಸೆಳೆಯುತ್ತಿದ್ದು, ಈ ಟೀಸರ್ 21 ಗಂಟೆಯಲ್ಲಿ ಬರೋಬ್ಬರಿ 47 ಮಿಲಿಯನ್ ವೀಕ್ಷಣೆ ಕಂಡಿದೆ. ಅಂದರೆ 4.7 ಕೋಟಿ ವೀವ್ಸ್ ಆಗಿದೆ. 24 ಗಂಟೆ ಕಳೆಯುವುದರ ಒಳಗೆ ಈ ಚಿತ್ರದ ಟೀಸರ್ 5 ಕೋಟಿ ವೀಕ್ಷಣೆ ಕಾಣುವ ಎಲ್ಲಾ ಸಾಧ್ಯತೆ ಇದೆ. ಯಶ್ ಅವರು ‘ರಾಯ’ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರವನ್ನು ಪರಿಚಯಿಸಲು ಈ ಟೀಸರ್ ಬಿಡುಗಡೆ ಮಾಡಲಾಗಿದೆ.

 ಗ್ಯಾಂಗ್​ಸ್ಟರ್ ಅವಾತಾರದಲ್ಲಿ ಯಶ್‌…!

ನಟ ಯಶ್ ‘ಕೆಜಿಎಫ್ 2’ ಚಿತ್ರಕ್ಕಿಂತ ಹೆಚ್ಚು ರಾ ಆಗಿ, ಗ್ಯಾಂಗ್​ಸ್ಟರ್ ಅವಾತಾರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ‘ಟಾಕ್ಸಿಕ್’ ಸಿನೆಮಾ ಇದೇ 2026ರ ಮಾರ್ಚ್ 19ರಂದು ತೆರೆಗೆ ಬರಲಿದೆ. ಗೀತು ಮೋಹನ್​ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಅಂದಹಾಗೆ, ‘ಟಾಕ್ಸಿಕ್’ ಸಿನೆಮಾದ ಟೀಸರ್‌ ನೋಡಿದವರು, ಇದು ‘ಎ’ ಸರ್ಟಿಫಿಕೇಟ್ ಚಿತ್ರ ಆಗಬಹುದು ಎಂಬ ಊಹೆ ವ್ಯಕ್ತಪಡಿಸುತ್ತಿದ್ದಾರೆ. ಮೇಕಿಂಗ್ ವಿಷಯದಲ್ಲಿ ‘ಟಾಕ್ಸಿಕ್’ ಸಿನೆಮಾದ ಹಾಲಿವುಡ್​ನವರನ್ನು ಹಿಂಬಾಲಿಸಿದೆ ಎನ್ನಲಾಗುತ್ತಿದೆ. ಹೀಗಾಗಿ ‘ಟಾಕ್ಸಿಕ್’ ಸಿನೆಮಾದಲ್ಲೂ ಹಾಲಿವುಡ್ ಅನುಭವ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

Related Posts

error: Content is protected !!