ತೆಲುಗು ಬಾಲಯ್ಯನ 112ನೇ ಚಿತ್ರಕ್ಕೆ ಮುಹೂರ್ತ
ಸೆಟ್ಟೇರಿತು ನಂದಮೂರಿ ಬಾಲಕೃಷ್ಣ ಅಭಿನಯದ 112ನೇ ಸಿನೆಮಾ
ಬಾಲಯ್ಯ ಹೊಸ ಆಕ್ಷನ್ ಚಿತ್ರಕ್ಕೆ ಕೊರಟಾಲ ಶಿವ ಆಕ್ಷನ್-ಕಟ್
ಹೊಸ ಗೆಟಪ್‌ನಲ್ಲಿ ಎಂಟ್ರಿಗೆ ಬಾಲಯ್ಯ ರೆಡಿ
ತೆಲುಗಿನ ‘ಗಾಡ್ ಆಫ್ ಮಾಸ್ಸ್’ ಖ್ಯಾತಿಯ ಬಾಲಕೃಷ್ಣನ ಉರೂಪ್ ಬಾಲಯ್ಯ ಈ ಬಾರಿ ಮತ್ತೊಂದು ಮಾಸ್ ಗೆಟಪ್‌ನಲ್ಲಿ ಅಭಿಮಾನಿಗಳ ಮುಂದೆ ಬರೋದಕ್ಕೆ ತಯಾರಾಗಿದ್ದಾರೆ. ಹೌದು, ಈ ಹಿಂದೆ ‘ಅಖಂಡ-2’ ಸಿನೆಮಾದ ಮೂಲಕ ಅಭಿಮಾನನಿಗಳಿಗೆ ತಮ್ಮ ಅಖಂಡ ದರ್ಶನ ಕೊಟ್ಟಿದ್ದ ಬಾಲಯ್ಯ ಈ ಬಾರಿ ಅದೇ ಥರದ ಮತ್ತೊಂದು ಔಟ್ ಅಂಡ್ ಔಟ್ ಆಕ್ಷನ್ ಸ್ಟೋರಿಯ ಭಾಗವಾಗುತ್ತಿದ್ದಾರೆ. 
ಅದ್ಧೂರಿಯಾಗಿ ಸೆಟ್ಟೇರಿದ ಬಾಲಯ್ಯ 112 ಚಿತ್ರ
ಇನ್ನು ನಂದಮೂರಿ ಬಾಲಕೃಷ್ಣ ಅಭಿನಯದ 112ನೇ ಸಿನೆಮಾದ ಮುಹೂರ್ತ ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಇದೇ 2026ರ ಜೂನ್ 28ರಂದು ಅದ್ಧೂರಿಯಾಗಿ ಸೆಟ್ಟೇರಿದೆ. ಈ ಅದ್ಧೂರಿ ಮುಹೂರ್ತ ಸಮಾರಂಭಕ್ಕೆ ಆಂಧ್ರಪ್ರದೇಶದ ಸಚಿವರಾದ ನಾರಾ ಲೋಕೇಶ್ ಹಾಗೂ ಕಂದುಲ ದುರ್ಗೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಳಿದಂತೆ ತೆಲುಗು ಚಿತ್ರರಂಗದ ಸುರೇಶ್ ಬಾಬು, ಗೋಪಿಚಂದ್ ಮಾಲಿನೇನಿ, ವೆಂಕಟ ಸತೀಶ್ ಕಿಲಾರು, ಮತ್ತು ಸಾಹು ಗರಪಾಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಂದುಲ ದುರ್ಗೇಶ್ ಈ ಹೊಸ ಸಿನೆಮಾದ ಮುಹೂರ್ತ ಸಮಾರಂಭದಲ್ಲಿ ಕ್ಯಾಮೆರಾ ಚಾಲನೆ ನೀಡಿದರು. ಸಚಿವ ನಾರಾ ಲೋಕೇಶ್ ಕ್ಲಾಪ್ ಮಾಡಿದರು. ಬಾಲಕೃಷ್ಣ ಅವರ ಪುತ್ರಿ ನಂದಮೂರಿ ತೇಜಸ್ವಿನಿ ಚಿತ್ರದ ಮೊದಲ ದೃಶ್ಯವನ್ನು ನಿರ್ದೇಶಿಸಿದರು.
ಬಾಲಯ್ಯ ಹೊಸ ಚಿತ್ರಕ್ಕೆ ಕೊರಟಾಲ ಶಿವ ನಿರ್ದೇಶನ
ತೆಲುಗಿನಲ್ಲಿ ‘ಮಿರ್ಚಿ’, ‘ಶ್ರೀಮಂತುಡು’, ‘ಜನತಾ ಗ್ಯಾರೇಜ್’, ‘ಭರತ್ ಅನೆ ನೇನು’ ಸಿನೆಮಾಗಳ ಖ್ಯಾತಿಯ ಸೆನ್ಸೇಷನಲ್ ಡೈರೆಕ್ಟರ್ ಕೊರಟಾಲ ಶಿವ ಈಗ ಬಾಲಯ್ಯಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕಾಂಬಿನೇಷನ್ ಒಂದಾಗಿರುವುದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚು ಮಾಡಿದೆ. ‘ಎಸ್‌ಎಲ್‌ವಿ ಸಿನಿಮಾಸ್’ ಮತ್ತು ‘ಯುವಸುಧಾ ಆರ್ಟ್ಸ್’ನ ಬ್ಯಾನರ್‌ನಡಿಯಲ್ಲಿ ನಿರ್ಮಾಪಕರಾದ ಸುಧಾಕರ್ ಚೆರುಕುರಿ ಮತ್ತು ಸುಧಾಕರ್ ಮಿಕ್ಕಿಲಿನೇನಿ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. 
ಮುಹೂರ್ತ ಸಮಾರಂಭದಲ್ಲಿ ಮಾತನಾಡಿದ ನಟ ನಂದಮೂರಿ ಬಾಲಕೃಷ್ಣ, ‘ಲಕ್ಷಾಂತರ ಅಭಿಮಾನಿಗಳ ಪ್ರೀತಿ ಮತ್ತು ವಾತ್ಸಲ್ಯವನ್ನು ಗಳಿಸಿದ್ದಕ್ಕೆ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಸಚಿವರಾದ ನರ ಲೋಕೇಶ್ ಮತ್ತು ಕಂದುಲ ದುರ್ಗೇಶ್ ಅವರಿಗೆ ಮತ್ತು ಮೊದಲ ದೃಶ್ಯ ನಿರ್ದೇಶಿಸಿದ್ದಕ್ಕಾಗಿ ತೇಜಸ್ವಿನಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ತೇಜಸ್ವಿನಿ ಈ ಹಿಂದೆ ನನ್ನ “ಅನ್‌ಸ್ಟಾಪಬಲ್” ಕಾರ್ಯಕ್ರಮದ ಕ್ರಿಯೇಟಿವ್ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಇದು ನಿರ್ದೇಶಕ ಮತ್ತು ನಿರ್ಮಾಪಕರೊಂದಿಗಿನ ನನ್ನ ಮೊದಲ ಚಿತ್ರವಾಗಿದೆ. ಹೀಗಾಗಿ ಇದನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ’ ಎಂದರು. ಸದ್ಯ ಬಾಲಯ್ಯ ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡ್ತಿರುವ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಚಿತ್ರೀಕರಣ ಕಾಕಿನಾಡ ಬಂದರಿನಲ್ಲಿ ನಡೆಯುತ್ತಿದೆ. ಆ ಬಳಿಕ ಆಂಧ್ರಪ್ರದೇಶದಲ್ಲಿ ನಡೆಯಲಿರುವ ಕೊರಟಾಲ ಶಿವ ಶೂಟಿಂಗ್ ನಲ್ಲಿ ಬಾಲಯ್ಯ ಭಾಗಿಯಾಗಲಿದ್ದಾರೆ.















