Video

ಬಾಲಯ್ಯ ಬರ್ತ್‌ಡೇ ಸ್ಪೆಷಲ್‌; ‘ಅಖಂಡ-2’ ಟೀಸರ್‌ ರಿಲೀಸ್‌

ಬಾಲಕೃಷ್ಣ ಹೊಸಚಿತ್ರ ‘ಅಖಂಡ-2’ ಟೀಸರ್‌ ಬಿಡುಗಡೆ

ಮಾಸ್‌ ಅವತಾರದಲ್ಲಿ ನಂದಮೂರಿ ಬಾಲಕೃಷ್ಣ ಎಂಟ್ರಿ!

ಸೂಪರ್‌ ಹಿಟ್‌ ‘ಅಖಂಡ’ ಸಿನೆಮಾದ ಮುಂದುವರೆದ ಭಾಗ ‘ಅಖಂಡ-2’

ತೆಲುಗಿನ ನಟ ‘ಗಾಡ್ ಆಫ್ ಮಾಸ್’ ಖ್ಯಾತಿಯ ನಟ ನಂದಮೂರಿ ಬಾಲಕೃಷ್ಣ ಉರೂಫ್‌ ಬಾಲಯ್ಯ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರು ನಟಿಸುತ್ತಿರುವ ಮುಂಬರುವ ಬಹುನಿರೀಕ್ಷಿತ ‘ಅಖಂಡ-2’ ಸಿನೆಮಾದ ಮೊದಲ ಟೀಸರ್‌ ಬಿಡುಗಡೆ ಮಾಡಲಾಗಿದೆ. ಬಾಲಕೃಷ್ಣ ಅವರ ಹುಟ್ಟುಹಬ್ಬದ ವಿಶೇಷವಾಗಿ ‘ಅಖಂಡ-2’ ಸಿನೆಮಾದ ಟೀಸರ್‌ ಬಾಲಯ್ಯ ಅಭಿಮಾನಿಗಳ ಮುಂದೆ ಬಂದಿದೆ.

ಇನ್ನು ಬಿಡುಗಡೆಯಾಗಿರುವ ‘ಅಖಂಡ-2’ ಸಿನೆಮಾದ ಟೀಸರ್‌ನಲ್ಲಿ ನಟ ಬಾಲಯ್ಯ ಪಕ್ಕಾ ಮಾಸ್‌ ಅವತಾರದಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಹಿಮದಿಂದ ಆವೃತವಾದ ಕೈಲಾಸದಲ್ಲಿ ಬರುವ ಬಾಲಯ್ಯ ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿ, ಕೈಯಲ್ಲಿ ನಂದಿ ಮುಖ ಇರುವ ತ್ರಿಶೂಲ ಹಿಡಿದು, ಖಡಕ್‌ ಡೈಲಾಗ್ಸ್‌ ಹೇಳುತ್ತಾ ಸಖತ್‌ ಸ್ಟೈಲಿಶ್‌ ಆಗಿ ಎಂಟ್ರಿ ಕೊಟ್ಟಿದ್ದಾರೆ. ಭರ್ಜರಿ ಆಕ್ಷನ್ಸ್ ಸನ್ನಿವೇಶಗಳು, ಎಸ್‌. ಥಮನ್‌ ಮ್ಯೂಸಿಕ್‌ ‘ಅಖಂಡ-2’ ಟೀಸರ್‌ ನಲ್ಲಿ ಎದ್ದು ಕಾಣುತ್ತಿದೆ. ಸಾಧು ಗೆಟಪ್‌ ನಲ್ಲಿ ಎಂಟ್ರಿ ಕೊಡುವ ಬಾಲಯ್ಯ ದುಷ್ಟರನ್ನು ಸಂಹಾರ ಮಾಡುವ ರೀತಿ ಅವರ ಅಭಿಮಾನಿಗಳಿಗೆ ಒಂದಷ್ಟು ಕಿಕ್‌ ಕೊಡುವಂತಿದೆ.

ಬಾಲಯ್ಯ ಡಬಲ್‌ ರೋಲ್‌…?

ಬಾಲಕೃಷ್ಣ ನಟನೆಯ ‘ಅಖಂಡ’ ಸಿನೆಮಾ 2021 ರಲ್ಲಿ ಬಿಡುಗಡೆ ಆಗಿತ್ತು ಅನೇಕರಿಗೆ ಗೊತ್ತಿರಬಹುದು. ಟಾಲಿವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್‌ ಹಿಟ್‌ ಆಗಿದ್ದ ಈ ಚಿತ್ರದಲ್ಲಿ ಬಾಲಯ್ಯ ಅಘೋರಿಯ ಪಾತ್ರದಲ್ಲಿ ನಟಿಸಿದ್ದರು.  ಇದೀಗ ಅದೇ ಸಿನೆಮಾದ ಎರಡನೇ ಭಾಗವಾಗಿ ‘ಅಖಂಡ 2’ ಸಿನೆಮಾ ತೆರೆಗೆ ಬರುತ್ತಿದೆ. ಈ ಹಿಂದೆ ‘ಅಖಂಡ’ ಸಿನೆಮಾವನ್ನು ನಿರ್ದೇಶನ ಮಾಡಿದ್ದ ತೆಲುಗಿನ ಖ್ಯಾತ ನಿರ್ದೇಶಕ ಬೊಯಪಾಟಿ ಶ್ರೀನು ಅವರೇ ‘ಅಖಂಡ 2’ ಸಿನೆಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ‘ಅಖಂಡ 2’ ಸಿನೆಮಾದಲ್ಲಿಯೂ ನಾಯಕ ನಟ ಬಾಲಕೃಷ್ಣ ದ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆಯಾದರೂ, ಇಲ್ಲಿಯವರೆಗೆ ಚಿತ್ರತಂಡ ಮಾತ್ರ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ನಾಲ್ಕನೇ ಬಾರಿಗೆ ಒಂದಾದ ಬಾಲಯ್ಯ-ಶ್ರೀನು ಜೋಡಿ

ಇನ್ನು ‘ಅಖಂಡ 2’ ಸಿನೆಮಾ ನಿರ್ದೇಶಕ ಬೊಯಪಾಟಿ ಶ್ರೀನು ಹಾಗೂ ನಟ ಬಾಲಕೃಷ್ಣ ಕಾಂಬಿನೇಷನ್‌ ನಲ್ಲಿ ಮೂಡಿಬರುತ್ತಿರುವ ನಾಲ್ಕನೇ ಸಿನೆಮಾವಾಗಿದೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದಿದ್ದ ‘ಸಿಂಹ’, ‘ಲಿಜೆಂಡ್’ ಹಾಗೂ 2021 ರಲ್ಲಿ ಬಿಡುಗಡೆ ಆಗಿದ್ದ ‘ಅಖಂಡ’ ಸಿನೆಮಾಗಳು ಭಾರಿ ಯಶಸ್ಸುಗಳಿಸಿವೆ. ಇದೀಗ ‘ಅಖಂಡ 2′ ಸಿನೆಮಾ ನಿರ್ದೇಶನದಲ್ಲಿ ಬೊಯಪಾಟಿ ಶ್ರೀನು ತೊಡಗಿದ್ದಾರೆ. ಪ್ರತಿಷ್ಠಿತ ’14 ರೀಲ್ಸ್ ಪ್ಲಸ್’ ಬ್ಯಾನರ್ ಅಡಿಯಲ್ಲಿ ರಾಮ್ ಅಚಂತ ಮತ್ತು ಗೋಪಿಚಂದ್ ಅಚಂತ ನಿರ್ಮಿಸಿರುವ ‘ಅಖಂಡ 2’ ಸಿನೆಮಾವನ್ನು ಎಂ. ತೇಜಸ್ವಿನಿ ನಂದಮೂರಿ ಪ್ರಸ್ತುತಪಡಿಸಿದ್ದಾರೆ.

‘ಅಖಂಡ-2’ ಸಿನೆಮಾದ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಭರದಿಂದ ಸಾಗಿದ ‘ಅಖಂಡ 2’ ಸಿನೆಮಾ ಚಿತ್ರೀಕರಣ

‘ಅಖಂಡ 2’ ಸಿನೆಮಾದ ಚಿತ್ರೀಕರಣ ಸದ್ಯ ಜಾರ್ಜಿಯಾದ ಗ್ರ್ಯಾಂಡ್ ಲೊಕೇಲ್ಸ್‌ನಲ್ಲಿ ನಡೆಯುತ್ತಿದೆ. ಸೆಪ್ಟೆಂಬರ್ 25ರಂದು ದಸರಾ ವಿಶೇಷ ದಿನವಾಗಿ ಚಿತ್ರ ಪ್ಯಾನ್‌ ಇಂಡಿಯಾ ಲೆವೆಲ್‌ ನಲ್ಲಿ ಬಿಡುಗಡೆಯಾಗಲಿದೆ. ಬಾಲಯ್ಯಗೆ ಜೋಡಿಯಾಗಿ ಸಂಯುಕ್ತಾ ನಟಿಸುತ್ತಿದ್ದು, ಆದಿ ಪಿನಿಸೆಟ್ಟಿ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. ಹೈ ಬಜೆಟ್‌ ನಲ್ಲಿ ನಿರ್ಮಾಣವಾಗುತ್ತಿರುವ ‘ಅಖಂಡ-2’ ಸಿನೆಮಾಗೆ ಎಸ್‌. ಥಮನ್‌ ಸಂಗೀತ ನಿರ್ದೇಶನ, ಸಿ. ರಾಮಪ್ರಸಾದ್, ಸಂತೋಷ್ ಡಿ. ಡೆಟಕೆ ಛಾಯಾಗ್ರಹಣ, ಎ. ಎಸ್ ಪ್ರಕಾಶ್‌ ಕಲಾ ನಿರ್ದೇಶನ, ತಮ್ಮಿರಾಜು ಸಂಕಲನ, ರಾಮ್-ಲಕ್ಷ್ಮಣ್ ಫೈಟ್‌ ಚಿತ್ರಕ್ಕಿರಲಿದೆ.

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!