‘ಜಸ್ಟ್ ಮ್ಯಾರೀಸ್’ ಹೊಸ ಹಾಡು ಹೊರಬಂತು…
‘ಜಸ್ಟ್ ಮ್ಯಾರೀಡ್’ ಚಿತ್ರದ ಮದುವೆ ಗೀತೆ ಬಿಡುಗಡೆ
ಮದುವೆಗಾಗಿ ಕನ್ನಡದಲ್ಲೊಂದು ಹೊಸ ಚಿತ್ರ ಗೀತೆ!
ನವಜೋಡಿಗಳ ಅನುರಾಗದ ಹೊಸ ಹಾಡು…
ನಟ ಶೈನ್ ಶೆಟ್ಟಿ ಮತ್ತು ನಟಿ ಅಂಕಿತಾ ಅಮರ್ ಜೋಡಿಯಾಗಿ ಅಭಿನಯಿಸುತ್ತಿರುವ ‘ಜಸ್ಟ್ ಮ್ಯಾರೀಡ್’ ಸಿನೆಮಾದ ಮದುವೆ ಹಾಡೊಂದು ಇದೀಗ ಹೊರಬಂದಿದೆ. ಸದ್ಯ ಆಷಾಡ ಮಾಸ ಮುಗಿದು ಶ್ರಾವಣ ಮಾಸದ ಮದುವೆ ಹಬ್ಬದ ಸೀಜನ್ ಶುರುವಾಗಿದೆ.
‘ಬಹುಮಟ್ಟಿಗೆ ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಮದುವೆಗಳಲ್ಲಿ ಕನ್ನಡ ಮದುವೆ ಗೀತೆಗಳ ಕೊರತೆ ಇತ್ತು’ ಎಂದಿರುವ ‘ಜಸ್ಟ್ ಮ್ಯಾರೀಡ್’ ಚಿತ್ರತಂಡ, ‘ಈಗ ‘ಜಸ್ಟ್ ಮ್ಯಾರೀಡ್’ ಸಿನೆಮಾದ ಮೂಲಕ ನಾವು ಮತ್ತೆ ನಮ್ಮ ಭಾಷೆಯಲ್ಲಿ, ನಮ್ಮ ಸಂಭ್ರಮದ ಹಾಡು ಪಡೆಯುವ ಉದ್ದೇಶದಿಂದ ನಮ್ಮ ಜಸ್ಟ್ ಮ್ಯಾರೀಡ್ ಸಿನೆಮಾದ ಮದುವೆ ಹಾಡನ್ನು ಬಿಡುಗಡೆ ಮಾಡಿದ್ದೇವೆ’ ಎಂದಿದೆ.
ಇನ್ನು ‘ಜಸ್ಟ್ ಮ್ಯಾರೀಡ್’ ಸಿನೆಮಾದ ‘ಮಾಂಗಲ್ಯಂ ತಂತು ನಾನೇನಾ…’ ಎಂಬ ಸಾಲಿನಿಂದ ಶುರುವಾಗುವ ಈ ಗೀತೆಗೆ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿದ್ದು, ಅಜನೇೇಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಯಲ್ಲಿ ಈ ಗೀತೆ ಮೂಡಿಬಂದಿದೆ. ಸಂಜಿತ್ ಹೆಗ್ಡೆ ಈ ಗೀತೆಗೆ ಧ್ವನಿಯಾಗಿದ್ದಾರೆ.
‘ಜಸ್ಟ್ ಮ್ಯಾರೀಡ್’ ಸಿನೆಮಾದ ‘ಮಾಂಗಲ್ಯಂ ತಂತು ನಾನೇನಾ…’ ಗೀತೆಯ ಲಿರಿಕಲ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಅಂಕಿತಾ ಅಮರ್ ಮತ್ತು ಶೈನ್ ಶೆಟ್ಟಿ ಅವರ ನಡುವಿನ ಕ್ಯಾಮಿಸ್ಟ್ರಿ ನೈಸರ್ಗಿಕವಾಗಿದೆ. ನವಜೋಡಿಗಳ ಅನುರಾಗವನ್ನು ನಿಖರವಾಗಿ ಚಿತ್ರಿಸುತ್ತಾ, ಪ್ರೇಮದ ಹೊಸ ಮುಖವನ್ನು ಈ ಹಾಡು ಪರಿಚಯಿಸುತ್ತದೆ. 
ಈ ಹಾಡು ರೀಲ್ಸ್‌ಗೆ ಅಲ್ಲ, ರಿಯಲ್ ಲೈಫ್ಕೋ!
‘ಹಾಡು ಕೇಳಿದ ಕ್ಷಣದಿಂದಲೇ ನಗು, ನೆನಪು, ಪ್ರೀತಿ, ಸಂಭ್ರಮ—ಇವೆಲ್ಲಾ ಒಂದೇ ವೇಳೆ ಮೂಡಿಸುತ್ತವೆ. ಈ ಹಾಡು ಕೇಳಿದಾಗ ಬಹುಮಂದಿಗೆ ಡಾ. ರಾಜಕುಮಾರ್ ಅವರ ಹಳೆಯ ಮದುವೆ ಹಾಡುಗಳು ನೆನಪಾಗುತ್ತವೆ. ಆದರೂ ಇದರಲ್ಲಿದೆ ಆಧುನಿಕ ತಾಜಾತನ, ಜಾನಪದದ ನಗು ಮತ್ತು ಹೃದಯದ ನಂಟು. ಇದು ಮದುವೆ ಹಾಡುಗಳ ಹೊಸ ಕನ್ನಡ ಹೆಮ್ಮೆ. ಸಿನೆಮಾದ ದರ್ಜೆ, ನಾಟ್ಯದ ಔತಣ, ಕಾಸ್ಟ್ಯೂಮ್‌ಗಳ ವೈವಿಧ್ಯತೆ, ಹಿರಿಯ ಕಲಾವಿದರ ಸಾನ್ನಿಧ್ಯ—ಇವೆಲ್ಲವೂ ಈ ಹಾಡನ್ನು ಸಂಪೂರ್ಣ ಪ್ಯಾಕೇಜ್ ಆಗಿ ರೂಪಿಸಿವೆ’ ಎಂಬುದು ಚಿತ್ರತಂಡದ ಮಾತು.















