ರಿಲೀಸ್ ಆಯ್ತು ‘ರಿಪ್ಪನ್ ಸ್ವಾಮಿ’ ಸಿನೆಮಾ ಟ್ರೇಲರ್
ವಿಜಯ ರಾಘವೇಂದ್ರ ನಟನೆಯ ‘ರಿಪ್ಪನ್ ಸ್ವಾಮಿ’ ಟ್ರೇಲರ್ ಹೊರಕ್ಕೆ
ಖಡಕ್ ಗೆಟಪ್‌ನ ಟ್ರೇಲರಿನಲ್ಲಿ ಎಂಟ್ರಿಕೊಟ್ಟ ‘ಚಿನ್ನಾರಿಮುತ್ತ’
ತೆರೆಗೆ ಬರಲು ಸಿದ್ಧವಾಯಿತು ‘ರಿಪ್ಪನ್ ಸ್ವಾಮಿ’ ಚಿತ್ರ
ನಟ ವಿಜಯ್ ರಾಘವೇಂದ್ರ ಅಭಿನಯದ ಮತ್ತೊಂದು ಹೊಸಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಅಂದಹಾಗೆ, ಆ ಸಿನೆಮಾದ ಹೆಸರು ‘ರಿಪ್ಪನ್ ಸ್ವಾಮಿ’. ಈಗಾಗಲೇ ‘ರಿಪ್ಪನ್ ಸ್ವಾಮಿ’ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಚಿತ್ರತಂಡ ‘ರಿಪ್ಪನ್ ಸ್ವಾಮಿ’ ಸಿನೆಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಕಿಶೋರ್ ಮೂಡಬಿದ್ರೆ ನಿರ್ದೇಶನದಲ್ಲಿ ಮೂಡಿಬಂದಿರುವ ‘ರಿಪ್ಪನ್ ಸ್ವಾಮಿ’ ಸಿನೆಮಾ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರವನ್ನು ಹೊಂದಿದ್ದು, ಸದ್ಯ ಬಿಡುಗಡೆಯಾಗಿರುವ ‘ರಿಪ್ಪನ್ ಸ್ವಾಮಿ’ ಸಿನೆಮಾದ ಟ್ರೇಲರ್ ನಲ್ಲಿ ನಾಯಕ ನಟ ವಿಜಯ ರಾಘವೇಂದ್ರ ಅವರ ಪಾತ್ರ ಮತ್ತು ಚಿತ್ರದ ಕಥಾಹಂದರದ ಒಂದಷ್ಟು ಗಮನ ಸೆಳೆಯುವಂತಿದೆ.
ಹೇಗಿದೆ ‘ರಿಪ್ಪನ್ ಸ್ವಾಮಿ’ ಚಿತ್ರದ ಟ್ರೇಲರ್..?
ಆರಂಭದಲ್ಲಿಯೇ ‘ರಿಪ್ಪನ್ ಸ್ವಾಮಿ’ ಚಿತ್ರತಂಡ ಹೇಳಿಕೊಂಡು ಬಂದಿರುವಂತೆ, ‘ರಿಪ್ಪನ್ ಸ್ವಾಮಿ’ ಔಟ್ ಅಂಡ್ ಔಟ್ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರದ ಸಿನೆಮಾ. ಇಲ್ಲಿಯವರೆಗೆ ಲವ್ವರ್ ಬಾಯ್, ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಹಲವು ಪಾತ್ರಗಳಲ್ಲಿ ಕಂಡಿದ್ದ ನಾಯಕ ನಟ ವಿಜಯ ರಾಘವೇಂದ್ರ, ‘ರಿಪ್ಪನ್ ಸ್ವಾಮಿ’ ಸಿನೆಮಾದಲ್ಲಿ ಬೇರೆಯದ್ದೇ ಲುಕ್ ನಲ್ಲಿ ಕಾಣಿಸುತ್ತಿದ್ದಾರೆ. ಕೈಗೆ ಕೂಡುಗೋಲು ಸಿಕ್ಕಿದ್ರೆ ಅಲ್ಲಿ ನೆತ್ತರು ಹರಿಯುತ್ತೆ. ಸ್ವಾಮಿ ಹರಿಸುವ ನೆತ್ತರು ಯಾರದ್ದು..? ಕಾಡಿನ ಜನರ ಜೀವನ ಹೇಗಿರುತ್ತೆ..? ಇಂಥ ಒಂದಷ್ಟು ಸಂಗತಿಗಳು ಟ್ರೇಲರ್ ನಲ್ಲಿದ್ದು ನಿಧಾನವಾಗಿ ಸಿನಿ ಪ್ರಿಯರ ಗಮನ ಸೆಳೆಯುತ್ತಿದೆ.
‘ರಿಪ್ಪನ್ ಸ್ವಾಮಿ’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಇದೇ ಆಗಸ್ಟ್ 29ಕ್ಕೆ ‘ರಿಪ್ಪನ್ ಸ್ವಾಮಿ’ ತೆರೆಗೆ
‘ಪಂಚಾಂನನ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಕೈಜೋಡಿಸಿ ‘ರಿಪ್ಪನ್ ಸ್ವಾಮಿ’ ಸಿನೆಮಾದನಿರ್ಮಾಣ ಮಾಡಿದ್ದಾರೆ. ‘ಪಂಚಾನನ ಫಿಲಂಸ್’ನ ಮೊದಲನೇ ಸಿನೆಮಾ ಇದಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ‘ರಿಪ್ಪನ್ ಸ್ವಾಮಿ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ‘ರಿಪ್ಪನ್ ಸ್ವಾಮಿ’ ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತವನ್ನು ನೀಡಿದ್ದಾರೆ. ರಂಗನಾಥ್ ಸಿ. ಎಂ. ರವರು ಕ್ಯಾಮರಾ ಹಿಡಿದಿದ್ದಾರೆ. ಶಶಾಂಕ್ ನಾರಾಯಣ್ ಸಂಕಲನ ಮಾಡಿದ್ದಾರೆ. ಅಂದಹಾಗೆ, ಇದೇ 2025ರ ಆಗಸ್ಟ್ 29ಕ್ಕೆ ‘ರಿಪ್ಪನ್ ಸ್ವಾಮಿ’ ಸಿನೆಮಾ ಬಿಡುಗಡೆಯಾಗಿ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.















