ವೈವಾಹಿಕ ಜೀವನಕ್ಕೆ ಕಾಲಿಟ್ಟಿ ನಟಿ, ನಿರೂಪಕಿ ಅನುಶ್ರೀ
ರೋಷನ್ ರಾಮಮೂರ್ತಿ ಜೊತೆ ನೆರೆವೇರಿದ ಅನುಶ್ರೀ ಮದುವೆ
ಬೆಂಗಳೂರಿನ ಹೊರವಲಯದ ರೆಸಾರ್ಟ್ ನಲ್ಲಿ ನಡೆದ ಅನುಶ್ರೀ ವಿವಾಹ
ನವ ದಂಪತಿಗೆ ಸೆಲೆಬ್ರಿಟಿಗಳ ಆಶೀರ್ವಾದ
ಬೆಂಗಳೂರು, ಆ. 28; ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ, ನಟಿ ಅನುಶ್ರೀ ಇದೇ ಆಗಸ್ಟ್ 28ರ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೊಡಗು ಮೂಲದ ರೋಷನ್ ರಾಮಮೂರ್ತಿ ಜೊತೆ ಅನುಶ್ರೀ ಮದುವೆ ನೆರೆವೇರಿದ್ದು, ಕುಟುಂಬಸ ಸದಸ್ಯರು, ಸ್ನೇಹಿತರು ಮತ್ತು ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಅನುಶ್ರೀ ಹಸೆಮಣೆ ಏರಿದರು. 
ಅದ್ಧೂರಿ ವಿವಾಹ ಅತ್ಯಾಪ್ತರಿಗಷ್ಟೇ ಆಹ್ವಾನ!
ನಿರೂಪಕಿ ಕಂ ನಟಿ ಅನುಶ್ರೀ ತಮ್ಮ ಬಹು ವರ್ಷದ ಗೆಳೆಯ ರೋಷನ್ ರಾಮಮೂರ್ತಿ ಜೊತೆಗೆ ವಿವಾಹವಾಗಿದ್ದಾರೆ. ಅನುಶ್ರೀ ಹಾಗೂ ರೋಷನ್ ಅವರ ಮದುವೆ ಸಮಾರಂಭಕ್ಕೆ ವಧು-ವರರ ಕುಟುಂಬದವರು, ಸ್ನೇಹಿತರು ಮತ್ತು ಅತ್ಯಾಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್ ಒಂದರಲ್ಲಿ ಅದ್ಧೂರಿಯಾಗಿ ನಡೆದ ಅನುಶ್ರೀ – ರೋಷನ್ ವಿವಾಹ ಸಮಾರಂಭದಲ್ಲಿ ನಟರಾದ ಶಿವರಾಜ ಕುಮಾರ್, ರಾಜ್ ಬಿ. ಶೆಟ್ಟಿ, ತಾರಾ, ಪ್ರೇಮಾ, ತರುಣ್ ಸುಧೀರ್, ಹಂಸಲೇಖ, ಶರಣ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು.
ಮೊದಲು ಸ್ನೇಹ… ಆಮೇಲೆ ಪ್ರೇಮ… 
ಮದುವೆ ನೆರವೇರಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಟಿ, ನಿರೂಪಕಿ ಅನುಶ್ರೀ ‘ಮದುವೆ ಬಹಳ ಸುಂದರವಾಗಿ, ಸರಳವಾಗಿ ನಡೆದಿದೆ. ಬಹಳ ಕಡಿಮೆ ಜನರ ಎದುರು ನಮ್ಮಿಬ್ಬರ ವಿವಾಹ ಆಗಬೇಕು ಎಂಬುದು ಆಸೆ ಆಗಿತ್ತು. ಇವರ ಹೆಸರು ರೋಷನ್ ರಾಮಮೂರ್ತಿ. ಕುಶಾಲ ನಗರದಲ್ಲಿ ಇರುವವರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ಕೆಲ ವರ್ಷಗಳ ಹಿಂದೆ ಪರಿಚಯವಾದ ನಮ್ಮ ಸ್ನೇಹ ಆ ನಂತರ ಪ್ರೀತಿಗೆ ತಿರುಗಿತ್ತು. ಈಗ ನನ್ನ ಮದುವೆ ಆಗಿದ್ದಾರೆ. ಮದುವೆಗೆ ಬಂದಿರುವ ಎಲ್ಲರಿಗೂ ಧನ್ಯವಾದಗಳು’ ಎಂದಿದ್ದಾರೆ.
ಅನುಶ್ರೀ ಅವರದ್ದು ಸಿಂಪಲ್ ಲವ್ ಸ್ಟೋರಿಯಂತೆ..!
‘ನಮ್ಮದು ಸಿಂಪಲ್ ಲವ್ ಸ್ಟೋರಿ. ಅದನ್ನು ಯಾರು ಹೇಳಿದರೂ ನಂಬುತ್ತಾ ಇರಲಿಲ್ಲ. ನಾವಿಬ್ಬರು ಫ್ರೆಂಡ್ಸ್ ಆದೆವು. ಕಾಫಿ ಕುಡಿದೆವು. ನನಗೆ ಅವರು ಇಷ್ಟ ಆದರು. ಅವರಿಗೆ ನಾನು ಇಷ್ಟ ಆದೆ. ಲವ್ ಆಯಿತು. ಮದುವೆ ಆದೆವು.
ರೋಷನ್ ಕೂಡ ಅಪ್ಪು ಸರ್ ಅವರನ್ನು ಬಹಳ ಇಷ್ಟಪಡುವವರು. ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ನಾವು ಭೇಟಿ ಮಾಡಿದ್ದು. ಒಂದು ಲೆಕ್ಕದಲ್ಲಿ ಅಪ್ಪು ಸರ್ ಅವರೇ ನಮ್ಮನ್ನು ಸೇರಿಸಿದ್ದಾರೆ’ ಎಂದು ಅನುಶ್ರೀ ಹೇಳಿದ್ದಾರೆ. ‘ನಾವಿಬ್ಬರು ಜೀವನವನ್ನು ತುಂಬ ಸರಳವಾಗಿ ನೋಡುವವರು. ಚಿಕ್ಕ ಚಿಕ್ಕ ಸಂತೋಷಗಳನ್ನು ತುಂಬ ಇಷ್ಟಪಡುತ್ತೇವೆ. ಅವರಿಗೆ ಸಹಾಯ ಮಾಡುವ ಮನೋಭಾವ ಇದೆ. ಅದು ನನಗೆ ಬಹಳ ಇಷ್ಟ ಆಗಿದೆ. ನಮ್ಮ ಅಮ್ಮನಿಗೆ ತುಂಬ ಖುಷಿ ಆಗಿದೆ’ ಎಂದಿದ್ದಾರೆ ಅನುಶ್ರೀ.















