Quick ಸುದ್ದಿಗೆ ಒಂದು click

ಕಿಚ್ಚನ ‘ಮಾರ್ಕ್’ ಶೂಟಿಂಗ್‌ ಕಂಪ್ಲೀಟ್‌!

ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರದ ಚಿತ್ರೀಕರಣ ಮುಕ್ತಾಯ

ಶೂಟಿಂಗ್‌ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳತ್ತ ಮುಖ ಮಾಡಿದ ‘ಮಾರ್ಕ್’ ಚಿತ್ರತಂಡ 

‘ಮಾರ್ಕ್’ ತೆರೆಗೆ ತರಲು ಚಿತ್ರತಂಡ ಕಸರತ್ತು

ನಟ ಕಿಚ್ಚ ಸುದೀಪ್‌ ಅಭಿನಯದ ‘ಮಾರ್ಕ್’ ಸಿನೆಮಾದ ಅಂತಿಮ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿರುವ ಚಿತ್ರತಂಡ, ಸುದೀಪ್ ಅಭಿಮಾನಿಗಳಿಗೆ ‘ಮಾರ್ಕ್’ ಚಿತ್ರದ ಬಗ್ಗೆ ಮತ್ತೊಂದು ಅಪ್‌ ಡೇಟ್‌ ಕೊಟ್ಟಿದೆ. ಹೌದು, ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ‘ಮಾರ್ಕ್’ ಚಿತ್ರದ ಕೊನೆ ಹಂತದ ಚಿತ್ರೀಕರಣ ಮುಗಿಸಿ‌ರುವ ಚಿತ್ರತಂಡ ಕುಂಬಳಕಾಯಿ ಹೊಡೆದಿದೆ. ಅಂತಿಮ ಹಂತದ ‘ಮಾರ್ಕ್’ ಚಿತ್ರದ ಚಿತ್ರೀಕರಣದಲ್ಲಿ ಚಿತ್ರದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದು, ಶೂಟಿಂಗ್ ಮುಗಿಸಿದ ಖುಷಿಯನ್ನು ಹಂಚಿಕೊಂಡರು.

ಇದೇ ಡಿಸೆಂಬರ್ 25ಕ್ಕೆ ‘ಮಾರ್ಕ್’ ಬಿಡುಗಡೆ ಖಚಿತ

ಈ ಹಿಂದೆ ನಟ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ ನಲ್ಲಿ ‘ಮ್ಯಾಕ್ಸ್‌’ ಸಿನೆಮಾ ಮೂಡಿಬಂದಿತ್ತು. ಇದೀಗ ಮತ್ತೆ ಈ ಇಬ್ಬರ ಕಾಂಬಿನೇಶನ್‌ ನಲ್ಲಿ ‘ಮಾರ್ಕ್’ ಸಿನೆಮಾ ತೆರೆಗೆ ಬರುತ್ತಿದೆ. ‘ಮ್ಯಾಕ್ಸ್’ ಸಿನೆಮಾದ ರೀತಿಯೇ ಈ ಬಾರಿ ಕೂಡ ‘ಮಾರ್ಕ್’ ಸಿನೆಮಾದಲ್ಲಿ ನಾಯಕ ನಟ ಸುದೀಪ್‌ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನೆಮಾದಲ್ಲಿ ಅಜಯ್ ಮಾರ್ಕಂಡೆ ಎಂಬ ಪಾತ್ರವನ್ನು ಸುದೀಪ್ ನಿರ್ವಹಿಸಿದ್ದಾರೆ. ‘ಮಾರ್ಕ್’ ಸಿನೆಮಾಗೆ ಶೇಖರ್ ಚಂದ್ರ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್ ಬಿ. ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ‘ಸತ್ಯಜ್ಯೋತಿ ಫಿಲಂಸ್‌’ ಹಾಗೂ ‘ಕಿಚ್ಚ ಕ್ರಿಯೇಷನ್ಸ್’ ಬ್ಯಾನರ್‌ಗಳು ಜತೆಯಾಗಿ ಈ ‘ಮಾರ್ಕ್’ ಚಿತ್ರವನ್ನು ನಿರ್ಮಿಸಿವೆ. ಅಂದಹಾಗೆ, ಇದೇ 2025ರ ಡಿಸೆಂಬರ್‌ 25ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ  ‘ಮಾರ್ಕ್’ ಸಿನೆಮಾ ಅದ್ಧೂರಿಯಾಗಿ ಬಿಡುಗಡೆಯಾಗಿ ತೆರೆಗೆ ಬರಲಿದೆ.

Related Posts

error: Content is protected !!