ಎಐ ಚಿತ್ರ ನಿರ್ಮಾತೃ ನೂತನ್ ಗೆ ‘ಇಂಡೋ-ಕೊರಿಯಾ ಫಿಲಂ ಫೆಸ್ಟಿವಲ್’ ಗೌರವ
ಜಗತ್ತಿನ ಮೊದಲ ಎಐ ಚಿತ್ರ ತಯಾರಕ ಖ್ಯಾತಿಯ ಕನ್ನಡಿಗ
ಕನ್ನಡ ಪ್ರತಿಭೆ ನೂತನ್ ಅವರಿಗೆ ‘ಇಂಡೋ-ಕೊರಿಯಾ ಫಿಲಂ ಫೆಸ್ಟಿವಲ್’ ನಲ್ಲಿ ಸನ್ಮಾನ
ಕನ್ನಡದ ತಂತ್ರಜ್ಞನಿಗೆ ಸಂದ ಗೌರವ
ಬೆಂಗಳೂರು: ಜಗತ್ತಿನ ಮೊದಲ ಎ. ಐ (AI) ಚಿತ್ರ ತಯಾರಿಸಿದ ಕನ್ನಡದ ತಂತ್ರಜ್ಞ ನೂತನ್ ಅವರಿಗೆ ‘ಇಂಡೋ-ಕೊರಿಯಾ ಫಿಲಂ ಫೆಸ್ಟಿವಲ್’ನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡದಲ್ಲಿ ‘ಲವ್ ಯು’ ಎಂಬ ಹೆಸರಿನಲ್ಲಿ ಜಗತ್ತಿನ ಮೊದಲ ಸಂಪೂರ್ಣ ಎ. ಐ (AI) ಚಲನಚಿತ್ರವನ್ನು ತಯಾರಿಸಿದ್ದ ನೂತನ್, ಬಳಿಕ ಅದನ್ನು ಅಧಿಕೃತ ಎ. ಐ (AI) ಚಲನಚಿತ್ರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಿದ್ದರು. ಕನ್ನಡ ಮಾತ್ರವಲ್ಲದೆ ಇಡೀ ಭಾರತ ಚಿತ್ರರಂಗದ ಇತಿಹಾಸದಲ್ಲೇ ಇದೊಂದು ಹೊಸ ದಾಖಲೆಯಾಗಿತ್ತು. ಭಾರತದಲ್ಲಿ ಸೆನ್ಸಾರ್ ಮಂಡಳಿಯಿಂದ ಸೆನ್ಸಾರ್ ಪ್ರಮಾಣ ತ್ರ ಪಡೆದುಕೊಂಡ ಸಂಪೂರ್ಣ ಎ. ಐ (AI) ಚಲನಚಿತ್ರ ಎಂಬ ಹೆಗ್ಗಳಿಕೆಗೂ ನೂತನ್ ನಿರ್ಮಿಸಿದ ‘ಲವ್ ಯು’ ಚಿತ್ರ ಪಾತ್ರವಾಗಿತ್ತು.
ಸದ್ಯ ನೂತನ್ ಅವರು ‘ಮೀ ವಿಥ್ ದಿ ಕಿಂಗ್ ಕೆಂಪೇಗೌಡ’ ಮತ್ತು ‘ಆಪರೇಷನ್ ಸಿಂಧೂರ’ ಹೆಸರಿನ ಎ. ಐ (AI) ಸಿನೆಮಾಗಳ ತಯಾರಿಕೆಯಲ್ಲಿ ನಿರತರಾಗಿದ್ದು, ಶೀಘ್ರದಲ್ಲಿಯೇ ಈ ಸಿನೆಮಾಗಳು ತೆರೆಗೆ ಬರಲಿದೆ.















