ಬಹುನಿರೀಕ್ಷಿತ ‘ಡೆವಿಲ್’ ಟ್ರೇಲರ್ ರಿಲೀಸ್
ಹೊರಬಂತು ‘ಡೆವಿಲ್’ ಸಿನೆಮಾ ಟ್ರೇಲರ್
ಮಾಸ್ ಲುಕ್‌ನಲ್ಲಿ ಖಡಕ್ ಎಂಟ್ರಿಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್
ದರ್ಶನ್ ‘ಡೆವಿಲ್’ ಕಣ್ತುಂಬಿಕೊಳ್ಳಲು ‘ಸೆಲೆಬ್ರಿಟಿಸ್’ ರೆಡಿ
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ‘ಡೆವಿಲ್’ ಸಿನೆಮಾದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಸದ್ಯ ಭರದಿಂದ ‘ಡೆವಿಲ್’ ಸಿನೆಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ‘ಡೆವಿಲ್’ ಸಿನೆಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. 
ಹೇಗಿದೆ ‘ಡೆವಿಲ್’ ಟ್ರೇಲರ್..?
ಆರಂಭದಲ್ಲಿಯೇ ‘ಡೆವಿಲ್’ ಚಿತ್ರತಂಡ ಹೇಳಿದಂತೆ, ಡಿಸೆಂಬರ್ 5ನೇ ತಾರೀಖು ಬೆಳಿಗ್ಗೆ 10.05ಕ್ಕೆ ‘ಡೆವಿಲ್’ ಸಿನೆಮಾ ಟ್ರೇಲರ್ ಬಿಡುಗಡೆಯಾಗಿದೆ. ‘ಸರೆಗಮ’ ಮ್ಯೂಸಿಕ್ ಯು-ಟ್ಯೂಬ್ ಚಾನೆಲ್‌ನಲ್ಲಿ ‘ಡೆವಿಲ್’ ಸಿನೆಮಾ ಟ್ರೇಲರ್ ಬಿಡುಗಡೆಯಾಗಿದ್ದು, ಮಾಸ್ ಆಡಿಯನ್ಸ್ ಗಮನ ಸೆಳೆಯುವಂತೆ ‘ಡೆವಿಲ್’ ಟ್ರೇಲರ್ ಹೊರಬಂದಿದೆ.
‘ಡೆವಿಲ್’ ಸಿನೆಮಾ ಇದೇ 2025ರ ಡಿಸೆಂಬರ್ 11ರಂದು ರಿಲೀಸ್ ಆಗುತ್ತಿದೆ. ಇದಕ್ಕೂ ಒಂದು ವಾರ ಮೊದಲು ಚಿತ್ರದ ಟ್ರೇಲರ್ ಬಿಡುಗಡೆ ಕಂಡಿದೆ. ‘ಡೆವಿಲ್’ ಸಿನೆಮಾ ಯಾವ ರೀತಿ ಇರಲಿದೆ ಎಂಬುದರ ಒಂದು ಸಣ್ಣ ಝಲಕ್ ಟ್ರೇಲರ್‌ನಲ್ಲಿ ಸಿಕ್ಕಿದೆ. ಇನ್ನು ‘ಡೆವಿಲ್’ ಸಿನೆಮಾದ ಟ್ರೇಲರ್‌ನಲ್ಲಿ ನಾಯಕ ನಟ ದರ್ಶನ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್ ಲುಕ್, ಖಡಕ್ ಡೈಲಾಗ್ಸ್ ಮಾಸ್ ಆಡಿಯನ್ಸ್‌ಗಳ, ಅದರಲ್ಲೂ ದರ್ಶನ್ ಅಭಿಮಾನಿಗಳ ಗಮನ ಸೆಳೆಯುವಂತಿದೆ. ಟ್ರೇಲರ್‌ನಲ್ಲಿ ಹಲವು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರುವ ದರ್ಶನ್ ಅವರ ಸ್ಟೈಲಿಶ್ ಲುಕ್ ಅಭಿಮಾನಿಗಳಿಗೆ ಕಿಕ್ ಕೊಡುವಂತಿದೆ. ‘ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ… ನಾನು ಬರ್ತಿದೀನಿ ಚಿನ್ನ…’ ಎಂದು ದರ್ಶನ್ ಡೈಲಾಗ್ ಹೇಳುವಾಗ ರಿಲೀಸ್ ದಿನಾಂಕ ತೋರಿಸಲಾಗುತ್ತದೆ. ವಿನಯ್ ಗೌಡ, ಅಚ್ಯುತ್ ಕುಮಾರ್ ಹಾಗೂ ಗಿಲ್ಲಿ ನಟ ಮೊದಲಾದವರನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಟ್ರೇಲರಿನಲ್ಲಿ ಹಿನ್ನೆಲೆ ಸಂಗೀತ, ಮೇಕಿಂಗ್ ಎಲ್ಲವೂ ಗಮನ ಸೆಳೆಯುವಂತಿದೆ.
‘ಡೆವಿಲ್’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
‘ಡೆವಿಲ್’ ರಿಲೀಸ್‌ಗೆ ಕೌಂಡ್ ಡೌನ್ ಶುರು..!
ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಸಿನೆಮಾವನ್ನು ನಿರ್ದೇಶನ ಮಾಡಿದ್ದ ಪ್ರಕಾಶ್ ‘ಡೆವಿಲ್’ ಸಿನೆಮಾವನ್ನು ನಿರ್ದೇಶನ ಮಾಡಿದ್ದಾರೆ. ‘ಡೆವಿಲ್’ ಸಿನೆಮಾದಲ್ಲಿ ನಾಯಕ ನಟ ದರ್ಶನ್ ಅವರಿಗೆ ಜೊತೆಯಾಗಿ ರಚನಾ ರೈ ನಟಿಸಿದ್ದಾರೆ. ಉಳಿದಂತೆ ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ, ಶೋಭರಾಜ್, ವಿನಯ್ ಗೌಡ, ಗಿಲ್ಲಿ ನಟ ಮೊದಲಾದ ಕಲಾವಿದರ ದೊಡ್ಡ ತಾರಾಗಣವೇ ‘ಡೆವಿಲ್’ ಚಿತ್ರದಲ್ಲಿದೆ. ‘ಡೆವಿಲ್’ ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಪ್ರಕಾಶ್ ಹಾಗೂ ಜಯಮ್ಮ ಚಿತ್ರವನ್ನು ನಿರ್ಮಿಸಿದ್ದಾರೆ. ಸದ್ಯ ‘ಡೆವಿಲ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರ ಇದೇ ಡಿಸೆಂಬರ್ 11ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ.















