Quick ಸುದ್ದಿಗೆ ಒಂದು click

ಜ. 29-ಫೆ. 6 ರ ವರೆಗೆ 17ನೇ ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’

17ನೇ ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ ಜ. 29ರಿಂದ ಫೆ. 06ರ ವರೆಗೆ ನಡೆಯಲಿದೆ.

ಮೂರು ಕಡೆಗಳಲ್ಲಿ ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ ಚಿತ್ರ ಪ್ರದರ್ಶನ

17ನೇ ‘ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದ ಪೂರ್ವಭಾವಿ ಸಭೆ

ಬೆಂಗಳೂರು, ಡಿ. 23; ಪ್ರತಿ ವರ್ಷ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆಯುತ್ತದೆ. ಈ ಬಾರಿ ಚಲನಚಿತ್ರೋತ್ಸವದಲ್ಲಿ 60 ದೇಶಗಳ ಸಿನಿಮಾಗಳ ಪ್ರದರ್ಶನ ಆಗಲಿವೆ. ಎಲ್ಲಾ ಸಿನಿಮಾಗಳನ್ನು ಒಂದೇ ಕಡೆ ನೋಡಲು ಅವಕಾಶ ಇರಲಿದೆ. ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿರುವ ಸಿನಿಮಾ ಸಹ ಪ್ರದರ್ಶನ ಆಗಲಿದೆ ಎಂಬುದು ವಿಶೇಷ. ಈ ವರ್ಷ ‘ಮಹಿಳಾ ಸಬಲೀಕರಣ’ ಥೀಮ್ ಬಗ್ಗೆ ಚರ್ಚೆ ನಡೆಯಲಿದೆ.

ಪ್ರತಿ ಬಾರಿಯೂ ‘ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿನಿಮೋತ್ಸವ’ ನಡೆಯುತ್ತದೆ. ಈ ಸಿನಿಮೋತ್ಸವದಲ್ಲಿ ವಿವಿಧ ಸಿನಿಮಾಗಳು ಪ್ರದರ್ಶನ ಕಾಣುತ್ತವೆ. ಇದರ ಜೊತೆಗೆ ಕನ್ನಡದ ತಂತ್ರಜ್ಞರು, ಕಲಾವಿದರ ಜೊತೆಗೆ ಪರಭಾಷಾ ಕಲಾವಿದರು ಹಾಗೂ ನಿರ್ದೇಶಕರ ಜೊತೆ ಹಲವು ವಿಷಯಗಳನ್ನು ಚರ್ಚಿಸೋ ಅವಕಾಶ ಸಿಗುತ್ತದೆ. ಈಗ 2026ನೇ ಸಾಲಿನ ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ಕ್ಕೆ ದಿನಾಂಕ ನಿಗದಿ ಆಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಜ.29ರಿಂದ ಫೆ.6ರವರೆಗೆ ಸಿನಿಮೋತ್ಸವ ನಡೆಯಲಿದೆ. ಒಂಭತ್ತು ದಿನಗಳ ಕಾಲ ಈ ಸಿನಿ ಹಬ್ಬ ಇರಲಿದೆ. ಈ ಮೊದಲು ಒರಿಯನ್ ಮಾಲ್​​ನಲ್ಲಿ ಮಾತ್ರ ಸಿನಿಮೋತ್ಸವ ನಡೆಯುತ್ತಿತ್ತು. ಆದರೆ, ಈ ಬಾರಿ ಮೂರು ಕಡೆಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಲುಲು ಮಾಲ್, ಚಾಮರಾಜಪೇಟೆಯ ಡಾ. ರಾಜ್​ಕುಮಾರ್ ಭವನ ಮತ್ತು ಬನಶಂಕರಿಯ ‘ಸುಚಿತ್ರಾ ಫಿಲ್ಮ್​ ಸೊಸೈಟಿ’ಯಲ್ಲಿ ಸಿನಿಮಾ ಪ್ರದರ್ಶನ ಆಗಲಿದೆ.

ಬೆಂಗಳೂರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಲ್ಲಿಯವರೆಗೆ 110 ಸಿನಿಮಾಗಳು ಆಯ್ಕೆ ಆಗಿವೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಚಲನಚಿತ್ರೋತ್ಸವದಲ್ಲಿ 60 ದೇಶಗಳ ಸಿನಿಮಾಗಳ ಪ್ರದರ್ಶನ ಆಗಲಿವೆ. ಎಲ್ಲಾ ಸಿನಿಮಾಗಳನ್ನು ಒಂದೇ ಕಡೆ ನೋಡಲು ಅವಕಾಶ ಇರಲಿದೆ. ‘ಆಸ್ಕರ್ ಪ್ರಶಸ್ತಿ’ಗೆ ಶಾರ್ಟ್ ಲಿಸ್ಟ್ ಆಗಿರುವ ಸಿನಿಮಾ ಸಹ ಪ್ರದರ್ಶನ ಆಗಲಿದೆ ಎಂಬುದು ವಿಶೇಷ. ಈ ವರ್ಷ ಮಹಿಳಾ ಸಬಲೀಕರಣ ಥೀಮ್ ಬಗ್ಗೆ ಚರ್ಚೆ ನಡೆಯಲಿದೆ.

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!