‘ಜೆರಾಕ್ಸ್’ ವೆಬ್ ಸೀರಿಸ್‌ಗೆ ನಾಗಭೂಷಣ್ ಹೀರೋ!
‘ಜೆರಾಕ್ಸ್’ ವೆಬ್ ಸರಣಿಗೆ ನಾಗಭೂಷಣ್ ಎಂಟ್ರಿ
ಧನಂಜಯ ನಿರ್ಮಾಣದ ‘ಜೆರಾಕ್ಸ್’ ವೆಬ್ ಸರಣಿಗೆ ನಾಗಭೂಷಣ್ ನಾಯಕ
‘ZEE5’ ಕನ್ನಡದಲ್ಲಿ ಡಾಲಿ ಧನಂಜಯ್ ವೆಬ್ ಸಿರೀಸ್
ಕೆಲ ದಿನಗಳ ಹಿಂದಷ್ಟೇ ನಟ ಕಂ ನಿರ್ಮಾಪಕ ಡಾಲಿ ಧನಂಜಯ ‘ಜೆರಾಕ್ಸ್’ ಎಂಬ ಹೆಸರಿನ ವೆಬ್ ಸರಣಿಯನ್ನು ನಿರ್ಮಿಸುತ್ತಿರುವ ವಿಷಯ ಹೊರಬಿದ್ದಿತ್ತು. ಇದೀಗ ಈ ‘ಜೆರಾಕ್ಸ್’ ವೆಬ್ ಸರಣಿಯ ಕುರಿತಾದ ಮತ್ತೊಂದು ಮಾಹಿತಿ ಕೂಡ ಹೊರಬಿದ್ದಿದೆ. ಅದೇನೆಂದರೆ, ಡಾಲಿ ಧನಂಜಯ್ ನಿರ್ಮಾಣ ಮಾಡುತ್ತಿರುವ ‘ಜೀ5’ (ZEE5) ಓಟಿಟಿಯಲ್ಲಿ ಪ್ರಸಾರವಾಗಲಿರುವ ‘ಜೆರಾಕ್ಸ್’ ವೆಬ್ ಸರಣಿಯಲ್ಲಿ ನಟ ನಾಗಭೂಷಣ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. 
‘ಜೆರಾಕ್ಸ್’ ತಂಡದಿಂದ ಹೊರಬಿದ್ದ ಸುದ್ದಿ…
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ನಟನಾಗಿ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಡಾಲಿ ಧನಂಜಯ್ ತಮ್ಮ ‘ಡಾಲಿ ಪಿಕ್ಚರ್ಸ್’ ಬ್ಯಾನರ್ ನಡಿ ‘ಜೆರಾಕ್ಸ್’ ವೆಬ್ ಸರಣಿಯನ್ನು ನಿರ್ಮಿಸುತ್ತಿದ್ದಾರೆ. ಈ ಸಿರೀಸ್ ನ್ನು ‘ಬ್ಲಿಂಕ್’ ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶಿಸಲಿದ್ದಾರೆ. ‘ಜೆರಾಕ್ಸ್’ ವೆಬ್ ಸರಣಿಯ ಮುಖ್ಯಭೂಮಿಕೆಯಲ್ಲಿ ನಾಗಭೂಷಣ್ ನಟಿಸಲಿದ್ದಾರೆ.
ಮತ್ತೊಂದು ವೆಬ್ ಸರಣಿಯಲ್ಲಿ ನಾಗಭೂಷಣ್…
ಈಗಾಗಲೇ ಕನ್ನಡದಲ್ಲಿ ‘ಟಗರು ಪಲ್ಯ’, ‘ವಿದ್ಯಾಪತಿ’ ಸಿನೆಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ನಟ ನಾಗಭೂಷಣ್, ಸಿನೆಮಾಗಳ ಜೊತೆಜೊತೆಗೆ ‘ಇಕ್ಕಟ್’ ಹಾಗೂ ‘ಹನಿಮೂನ್’ ಎಂಬ ವೆಬ್ ಸರಣಿಗಳ ಮೂಲಕ ತಮ್ಮ ನಟನಾ ಕೌಶಲ್ಯ ಪ್ರದರ್ಶಿಸಿದ್ದಾರೆ. ಸಿನೆಮಾ ಮತ್ತು ಓಟಿಟಿ ವೀಕ್ಷಕರಿಗೆ ಚಿರಪರಿಚಿತರಾಗಿರುವ ನಾಗಭೂಷಣ್ ಈಗ ‘ಜೆರಾಕ್ಸ್’ ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಸದ್ಯ ಬಹು ಬೇಡಿಕೆ ಕಾಮಿಡಿ ನಟರುಗಳಲ್ಲಿ ಒಬ್ಬರಾಗಿರುವ ಅವರು ಈಗ ಡಾರ್ಕ್ ಹಾಸ್ಯ ಥ್ರಿಲ್ಲರ್ ಕಥೆಯ ‘ಜೆರಾಕ್ಸ್’ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
ಹಳೇ ಮೈಸೂರು ಸೊಗಡಿನ ಪಾತ್ರ…
ಈಗಾಗಲೇ ‘ಜೆರಾಕ್ಸ್’ ವೆಬ್ ಸರಣಿ ತನ್ನ ಶೀರ್ಷಿಕೆಯೊಂದಿಗೆ ಒಂದಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಈ ಸರಣಿಯು ಮಂಡ್ಯ-ಮೈಸೂರು ಸುತ್ತಮುತ್ತ ನಡೆಯುತ್ತಿದ್ದು, ‘ಜೆರಾಕ್ಸ್’ ಅಂಗಡಿಯ ಮಾಲೀಕ ಪ್ರಕಾಶ್ ಜೀವನದಲ್ಲಿ ನಡೆಯುವ ಅನಿರೀಕ್ಷಿತ ತಿರುವುಗಳನ್ನು’ಜೆರಾಕ್ಸ್’ ವೆಬ್ ಸರಣಿಯಲ್ಲಿ ಹಾಸ್ಯಭರಿತವಾಗಿ ಒಂದಷ್ಟು ಥ್ರಿಲ್ಲಿಂಗ್ ವಿಷಯಗಳನ್ನು ಇಟ್ಟುಕೊಂಡು ತೆರೆಮೇಲೆ ಕಟ್ಟಿಕೊಡಲಾಗುತ್ತಿದೆ ಇಡೀ ‘ಜೆರಾಕ್ಸ್’ ವೆಬ್ ಸರಣಿಯಲ್ಲಿ ಹಳೇ ಮೈಸೂರು ಭಾಗದ ಸೊಗಡಿದೆ ಎಂದಿದೆ ತಂಡ.
ಇನ್ನು ‘ಜೆರಾಕ್ಸ್’ ವೆಬ್ ಸರಣಿಯ ಘೋಷಣೆಯೊಂದಿಗೆ, ‘ZEE5’ ಕನ್ನಡ ಸ್ಥಳೀಯ ಸಂವೇದನೆಗಳಲ್ಲಿ ಬೇರೂರಿರುವ ಕಥೆಗಳು ಮತ್ತು ಸಾಂಸ್ಕೃತಿಕ ಸತ್ಯ ಮತ್ತು ಸಮಕಾಲೀನ ಪ್ರಸ್ತುತತೆಯನ್ನು ಪರದೆಗೆ ತರುವ ಸೃಷ್ಟಿಕರ್ತರ ಮೇಲೆ ತನ್ನ ಗಮನ ಬಲಪಡಿಸುವುದನ್ನು ಮುಂದುವರೆಸಿದೆ ಎಂದಿದೆ. ಖಂಡಿತವಾಗಿಯೂ ‘ಜೆರಾಕ್ಸ್’ ವೆಬ್ ಸರಣಿಯ ನಮ್ಮ ಈ ಪ್ರಯತ್ನ ಕನ್ನಡದ ವೀಕ್ಷಕರಿಗೆ ಹೊಸ ಅನುಭವಕೊಡಲಿದೆ ಎಂಬ ಆಶಯವನ್ನು ‘ಜೀ5’ ಕನ್ನಡ ವ್ಯಕ್ತಪಡಿಸಿದೆ.
‘ಜೆರಾಕ್ಸ್’ ಪಾರ್ಟ್ ಆಗಿರೋದಕ್ಕೆ ನಾಗಭೂಷಣ್ ಫುಲ್ ಖುಷ್..!
‘ಜೆರಾಕ್ಸ್’ ವೆಬ್ ಸರಣಿಯ ಬಗ್ಗೆ ಮಾತನಾಡಿರುವ ನಾಯಕ ನಟ ನಾಗಭೂಷಣ, ‘ನಾನು ಈ ‘ಜೆರಾಕ್ಸ್’ ವೆಬ್ ಸರಣಿಯ ಭಾಗವಾಗಿರುವುದಕ್ಕೆ ಖುಷಿಯಾಗಿದ್ದೇನೆ. ಈ ಸರಣಿಯು ಯಾವುದೇ ಬೇರೆ ವಿಷಯಕ್ಕಿಂತ ಭಿನ್ನವಾಗಿದೆ, ಅದು ಅನಿರೀಕ್ಷಿತ, ವಿಲಕ್ಷಣ ಮತ್ತು ನಿರಂತರವಾಗಿ ಬದಲಾಗುತ್ತಿದೆ. ಶ್ರೀನಿಧಿ ಸೃಷ್ಟಿಸಿರುವ ಪ್ರಪಂಚವು ಅದೇ ಸಮಯದಲ್ಲಿ ಪರಿಚಿತ ಮತ್ತು ವಿಲಕ್ಷಣವೆನಿಸುತ್ತದೆ. ಒಬ್ಬ ಕಲಾವಿದನಾಗಿ ಆ ಸ್ಥಳವು ಅನ್ವೇಷಿಸಲು ಬಹಳ ರೋಮಾಂಚನಕಾರಿಯಾಗಿತ್ತು. ಕನ್ನಡ ‘ZEE5’ ವಿಭಿನ್ನವಾಗಿರಲು ಧೈರ್ಯವಿರುವ ಕಥೆಗಳಿಗೆ ಅವಕಾಶ ನೀಡುತ್ತಿದೆ ಎಂದು ನನಗೆ ರೋಮಾಂಚನವಾಗಿದೆ. ಸಹಜವಾಗಿಯೇ ‘ಜೆರಾಕ್ಸ್’ ವೆಬ್ ಸರಣಿಯ ಮೇಲೆ ಸಾಕಷ್ಟು ನಿರೀಕ್ಷೆ ಗರಿಗೆದರಿದೆ’ ಎಂದಿದ್ದಾರೆ.















