ಮರ್ಡರ್ ಮಿಸ್ಟರಿ ಕಥೆ ಹೊತ್ತ ‘ಬೆಂಗಳೂರು ಇನ್’ ಟ್ರೇಲರ್ ರಿಲೀಸ್
ಹೊರಬಂತು ‘ಬೆಂಗಳೂರು ಇನ್’ ಚಿತ್ರದ ಟ್ರೇಲರ್
ರೋಚಕ ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಧರ್ಮ ಕೀರ್ತಿರಾಜ್ ಹೊಸಚಿತ್ರ
ಇದೇ ಏ. 17ಕ್ಕೆ ‘ಬೆಂಗಳೂರು ಇನ್’ ತೆರೆಗೆ
ಈ ವರ್ಷ ನಟ ಧರ್ಮ ಕೀರ್ತಿರಾಜ್ ಮತ್ತೊಂದು ಹೊಸ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ಆ ಹೊಸ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಚಿತ್ರದ ಹೆಸರು ‘ಬೆಂಗಳೂರು ಇನ್’. ಈಗಾಗಲೇ ಸದ್ದಿಲ್ಲದೆ ‘ಬೆಂಗಳೂರು ಇನ್’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ‘ಬೆಂಗಳೂರು ಇನ್’ ಚಿತ್ರದ ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಟ್ರೇಲರ್ ಕೂಡ ಬಿಡುಗಡೆಯಾಗಿದೆ. 
ಧರ್ಮ ಕೀರ್ತಿರಾಜ್ ಕ್ರೈಂ-ಥ್ರಿಲ್ಲರ್ ಕಹಾನಿ…
ಮೊದಲೇ ಹೇಳಿದಂತೆ, ‘ಬೆಂಗಳೂರು ಇನ್’ ಚಿತ್ರ ಅಪ್ಪಟ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಚಿತ್ರ. ಬೆಂಗಳೂರಿನಲ್ಲಿ ನಡೆಯುವ ರೋಚಕ ಮರ್ಡರ್ ಮಿಸ್ಟರಿಯ ಸುತ್ತ ಇಡೀ ‘ಬೆಂಗಳೂರು ಇನ್’ ಚಿತ್ಸರದ ಕಥಾಹಂದರ ಸಾಗುತ್ತದೆ. ಒಬ್ಬ ಫುಡ್ ಡೆಲಿವರಿ ಏಜೆಂಟ್ ಸುತ್ತ ಕಥೆ ಹೆಣೆಯಲಾಗಿದೆ ಎಂಬುದು ಚಿತ್ರತಂಡದ ಮಾತು. ‘ಬೆಂಗಳೂರು ಇನ್’ ಚಿತ್ರದಲ್ಲಿ ನಾಯಕ ನಟ ಧರ್ಮ ಕೀರ್ತಿರಾಜ್ ಅವರಿಗೆ ರಿಷಾ ಗೌಡ ಮತ್ತು ಅನುಷಾ ರೈ ನಾಯಕಿಯರಾಗಿ ಜೋಡಿಯಾಗಿದ್ದಾರೆ. ಹಿರಿಯ ನಟ ಶಶಿಕುಮಾರ್ ಚಿತ್ರದಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಲರಾಜವಾಡಿ, ಮಂಜು ಪಾವಗಡ, ಕುರಿ ಸುನೀಲ್, ಯಶಸ್ ಅಭಿ ಮೊದಲಾದ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಹೇಗಿದೆ ‘ಬೆಂಗಳೂರು ಇನ್’ ಸಿನೆಮಾ ಟ್ರೇಲರ್..?
ಮೊದಲೇ ಹೇಳಿದಂತೆ, ‘ಬೆಂಗಳೂರು ಇನ್’ ಒಂದು ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರದ ಸಿನೆಮಾ. ಒಂದು ಕೊಲೆ, ಅದರ ಹಿಂದಿನ ಕಾರಣಗಳು ಮತ್ತು ನಿಗೂಢತೆಯನ್ನು ಬೇಧಿಸುವ ಝಲಕ್ ಅನ್ನು ‘ಬೆಂಗಳೂರು ಇನ್’ ಸಿನೆಮಾದ ಟ್ರೇಲರಿನಲ್ಲಿ ತೋರಿಸಲಾಗಿದೆ. ಕಮರ್ಷಿಯಲ್ ಅಂಶಗಳ ಜೊತೆಗೆ ಒಂದು ಸಂದೇಶ ಕೂಡ ಚಿತ್ರದಲ್ಲಿದೆ ಎಂದಿದೆ ಚಿತ್ರತಂಡ. ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಒಂದು ಲವ್ ಸ್ಟೋರಿ ಕೂಡ ‘ಬೆಂಗಳೂರು ಇನ್’ ಸಿನೆಮಾದಲ್ಲಿರುವುದು ಟ್ರೇಲರಿನಲ್ಲಿ ಕಾಣುತ್ತದೆ.
‘ಬೆಂಗಳೂರು ಇನ್’ ಚಿತ್ರದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಇದೇ ಏ. 17ಕ್ಕೆ ‘ಬೆಂಗಳೂರು ಇನ್’ ತೆರೆಗೆ
ಸದ್ಯ ‘ಬೆಂಗಳೂರು ಇನ್’ ಚಿತ್ರದ ಹಾಡುಗಳು ಆ ಬಳಿಕ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿರುವ ಚಿತ್ರತಂಡ, ಭರ್ಜರಿಯಾಗಿ ಚಿತ್ರದ ಪ್ರಚಾರ ಕಾರ್ಯಗಳನ್ನು ಆರಂಭಿಸಿದೆ. ಈಗಾಗಲೇ ‘ಬೆಂಗಳೂರು ಇನ್’ ಚಿತ್ರಕ್ಕೆ ಒಂದಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
‘ಬೆಂಗಳೂರು ಇನ್’ ಚಿತ್ರಕ್ಕೆ ವೆಂಕಟೇಶಮೂರ್ತಿ ನಿರ್ಮಾಪಕರಾಗಿ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ರಾಜೇಶ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಕಾರ್ತಿಕ್ ಕೆ. ಮೂರ್ತಿ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ‘ಬೆಂಗಳೂರು ಇನ್’ ಚಿತ್ರಕ್ಕೆ ನವೀನ್ ಪಂಚಾಕ್ಷರಿ ಛಾಯಾಗ್ರಹಣವಿದ್ದು, ಅಸಿಫ್ ಎ. ಖಾದರ್, ಅರವಿಂದ್ ಮುರಳಿ ಸಂಗೀತ ಸಂಯೋಜಿಸಿದ್ದಾರೆ. ಕುಮಾರ್ ಸಿ. ಕೆ ‘ಬೆಂಗಳೂರು ಇನ್’ ಚಿತ್ರದ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.
‘ಶ್ರೀ ಸಾಯಿಬಾಬಾ ಸಿನಿ ಎಂಟರ್ಪ್ರೈಸಸ್’ ಬ್ಯಾನರಿನಲ್ಲಿ ನಿರ್ಮಾಣಗೊಂಡ ‘ಬೆಂಗಳೂರು ಇನ್’ ಚಿತ್ರದ ಆಡಿಯೋ ಹಕ್ಕುಗಳನ್ನು ‘ಎಂಆರ್ ಟಿ ಮ್ಯೂಸಿಕ್’ ಸಂಸ್ಥೆ ಖರೀದಿಸಿದೆ. ಅಂದಹಾಗೆ, ‘ಬೆಂಗಳೂರು ಇನ್’ ಚಿತ್ರ ಇದೇ ಏಪ್ರಿಲ್ 17ರ ಶುಕ್ರವಾರ ಬಿಡುಗಡೆಯಾಗಿ ರಾಜ್ಯಾದ್ಯಂತ ತೆರೆ ಕಾಣಲಿದೆ.















