Video

‘ಜೆರಾಕ್ಸ್‌’ ವೆಬ್‌ ಸೀರಿಸ್‌ ಟ್ರೇಲರ್‌ ಔಟ್‌

ಹೊರಬಂತು ‘ಜೆರಾಕ್ಸ್‌’ ವೆಬ್‌ ಸರಣಿಯ ಟ್ರೇಲರ್‌

‘ಜೀ5’ ಓಟಿಟಿಯ ಹೊಸ ಡಾರ್ಕ್‌ ಕಾಮಿಡಿ-ಥ್ರಿಲ್ಲರ್‌ ‘ಜೆರಾಕ್ಸ್‌’ ವೆಬ್‌ ಸರಣಿ

6 ಸಂಚಿಕೆಗಳಲ್ಲಿ ವೀಕ್ಷಕರ ಮುಂದೆ ಬರಲಿದೆ ‘ಜೆರಾಕ್ಸ್‌’

‘ಜೀ5’ ಓಟಿಟಿಯಲ್ಲಿ ಮತ್ತೊಂದು ಹೊಸ ವೆಬ್‌ ಸರಣಿ ಬಿಡುಗಡೆಯಾಗಲು ವೇದಿಕೆ ಸಿದ್ಧವಾಗಿದೆ. ‘ಜೀ5’ನಲ್ಲಿ ಹೊಸದಾಗಿ ಸ್ಟ್ರೀಮಿಂಗ್‌ ಆಗುತ್ತಿರುವ ವೆಬ್‌ ಸರಣಿಗೆ ‘ಜೆರಾಕ್ಸ್‌’ ಎಂದು ಹೆಸರಿಡಲಾಗಿದ್ದು, ಇದೀಗ ‘ಜೆರಾಕ್ಸ್‌’ ವೆಬ್‌ ಸರಣಿಯ ಟ್ರೇಲರ್‌ ಬಿಡುಗಡೆಯಾಗಿದೆ. ಇನ್ನು ‘ಜೆರಾಕ್ಸ್‌’ ವೆಬ್‌ ಸರಣಿ ಒಟ್ಟು 6 ಸಂಚಿಕೆಗಳನ್ನು ಹೊಂದಿದ್ದು, ಡಾರ್ಕ್‌ ಕಾಮಿಡಿಯ ಜೊತೆಗೆ ಸಸ್ಪೆನ್ಸ್‌-ಥ್ರಿಲ್ಲರ್‌ ಅಂಶಗಳೊಂದಿಗೆ ‘ಜೆರಾಕ್ಸ್‌’ ವೆಬ್‌ ಸರಣಿ ವೀಕ್ಷಕರ ಮುಂದೆ ಬರುತ್ತಿದೆ.

‘ಡಾಲಿ ಪಿಕ್ಚರ್ಸ್‌’ ಬ್ಯಾನರಿನಲ್ಲಿ ನಟ ಧನಂಜಯ್‌ ನಿರ್ಮಾಣ

ಕನ್ನಡ ಚಿತ್ರರಂಗದ ‘ಡಾಲಿ’ ಖ್ಯಾತಿಯ ನಟ ಕಂ ನಿರ್ಮಾಪಕ ಡಾಲಿ ಧನಂಜಯ ‘ಜೆರಾಕ್ಸ್‌’ ವೆಬ್‌ ಸೀರಿಸ್‌ ಅನ್ನು ನಿರ್ಮಾಣ ಮಾಡುತ್ತಿದ್ದಾರೆ. ಧನಂಜಯ್‌ ಅವರ ‘ಡಾಲಿ ಪಿಕ್ಚರ್ಸ್‌’ ಲಾಂಛನದಲ್ಲಿ ಹಾಗೂ ‘ಬ್ಲಿಂಕ್‌’ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶನದಲ್ಲಿ ‘ಜೆರಾಕ್ಸ್‌’ ವೆಬ್‌ ಸರಣಿ ಮೂಡಿ ಬರುತ್ತಿದೆ. ‘ಜೆರಾಕ್ಸ್‌’ ವೆಬ್‌ ಸರಣಿಯಲ್ಲಿ ನಟ ನಾಗಭೂಷಣ್‌, ಪಾಯಲ್‌ ಚೆಂಗಪ್ಪ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಮಂಜು ಪಾವಗಡ, ಓಂ ಪ್ರಕಾಶ್‌ ರಾವ್‌, ಶ್ರೀವತ್ಸ, ಯಶ್ವಂತ್‌ ಶೆಟ್ಟಿ, ವಿಜಯ್‌ ಪ್ರಸಾದ್‌, ತುಕಾಲಿ ಸಂತು, ಜಗ್ಗಪ್ಪ, ಸಿದ್ದು ಮಂಡ್ಯ, ಸುಧಾಕರ್‌ ಗೌಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಹೇಗಿದೆ ‘ಜೆರಾಕ್ಸ್‌’ ವೆಬ್‌ ಸೀರಿಸ್‌ ಟ್ರೇಲರ್‌..?

ಮಳವಳ್ಳಿಯ ರಾಯದುರ್ಗದ ಪ್ರಕಾಶ (ನಾಗಭೂಷಣ) ಒಬ್ಬ ಸಾಮಾನ್ಯ ‘ಜೆರಾಕ್ಸ್‌’ ಅಂಗಡಿ ಕೆಲಸಗಾರನಾಗಿರುತ್ತಾನೆ. ಅವನ ‘ಜೆರಾಕ್ಸ್‌’ ಯಂತ್ರಕ್ಕೆ ಒಂದು ತಾಯಿತ ಸೇರಿದಾಗ ಅವನ ಜೀವನ ಬದಲಾಗುತ್ತದೆ. ಅವನು ತೆಗೆಯುವ ‘ಜೆರಾಕ್ಸ್‌’ ಕಾಪಿಗಳಿಗೆ ಜೀವ ಬಂದು ಅವನ ಜೀವನ ಉಲ್ಟಾಪಲ್ಟಾವಾಗುತ್ತದೆ. ಇದರಿಂದ ಆಗುವ ಅಚಾನಕ್‌ ಬದಲಾವಣೆಗಳು, ಊರಿನಲ್ಲಾಗುವ ಆಶ್ಚರ್ಯಕರ ಘಟನೆಗಳು, ಕುತೂಹಲಕಾರಿ ಸನ್ನಿವೇಶಗಳನ್ನು ಕಥೆ ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಅಪ್ಪಟ ಮಂಡ್ಯ ಜಿಲ್ಲೆಯ ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ‘ಜೆರಾಕ್ಸ್‌’ ವೆಬ್‌ ಸರಣಿ ಮೂಡಿಬಂದಿರುವುದು ಟ್ರೇಲರ್‌ನಲ್ಲಿ ಕಾಣುತ್ತದೆ.

‘ಜೆರಾಕ್ಸ್‌’ ವೆಬ್‌ ಸರಣಿಯ ಟ್ರೇಲರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

2026ರ ಏಪ್ರಿಲ್‌ 24ರಿಂದ ‘ಜೆರಾಕ್ಸ್‌’ ಪ್ರೀಮಿಯರ್‌

ಅಂದಹಾಗೆ, ಈಗಾಗಲೇ ತನ್ನ ಟೈಟಲ್‌, ಕಂಟೆಂಟ್‌ ಮತ್ತು ಟ್ರೇಲರ್‌ ಮೂಲಕ ಓಟಿಟಿ ನೋಡುಗರ ಗಮನ ಸೆಳೆಯುತ್ತಿರುವ ‘ಜೆರಾಕ್ಸ್‌’ ವೆಬ್‌ ಸರಣಿಯು ಇದೇ 2026ರ ಏಪ್ರಿಲ್‌ 24ರಿಂದ ‘ಜೀ5’ನಲ್ಲಿ ಪ್ರೀಮಿಯರ್‌ ಆಗಲಿದೆ. ಇನ್ನು ‘ಜೆರಾಕ್ಸ್‌’ ವೆಬ್‌ ಸರಣಿಯ ಬಗ್ಗೆ ಮಾತನಾಡಿರುವ ನಟ ಕಂ ನಿರ್ಮಾಪಕ ಡಾಲಿ ಧನಂಜಯ, ‘ನನಗೆ ಈ ಕಥೆ ಇಷ್ಟವಾಗಲು ಕಾರಣ ಅದು ಹೇಳುವ ತತ್ವ, ಪ್ರತಿಯೊಂದು ಹಾಸ್ಯ ಸನ್ನಿವೇಶದ ಹಿಂದೆ ಅಡಗಿರುವ ತತ್ವ, ನನ್ನನ್ನು ತನ್ನತ್ತ ಸೆಳೆಯಿತು. ‘ಜೆರಾಕ್ಸ್‌’ ಕಾಪಿಗಳಿಗೆ ಜೀವ ಬಂದಾಗ, ಜನರು ತಮ್ಮ ಪ್ರತಿಬಿಂಬವನ್ನೇ ಸ್ವೀಕರಿಸಲು ಹೇಗೆ ನಿರಾಕರಿಸುತ್ತಾರೆ ಇವೆಲ್ಲವು ನನ್ನನ್ನು ಆಕರ್ಷಿಸಿತು. ಈ ಕಥೆಯು ಒಂಟಿತನ, ಹಾಸ್ಯ, ಪಶ್ಚಾತಾಪ, ಗೊಂದಲ ಎಲ್ಲವನ್ನೂ ಒಳಗೊಂಡಿದೆ. ಇದು ಕೇವಲ ಹಾಸ್ಯವನ್ನಷ್ಟೇ ಹೇಳದೇ, ಜೀವನದ ಮೌಲ್ಯಗಳನ್ನೂ ಕೂಡ ಹೇಳುತ್ತದೆ’ ಎಂದಿದ್ದಾರೆ.

Related Posts

error: Content is protected !!