Pop Corner

‘ಕೆಡಿ’ ಬಿಡುಗಡೆಗೆ ದಿನಗಣನೆ.., ಇದೇ ಏ. 30ಕ್ಕೆ ‘ಕೆಡಿ’ ತೆರೆಗೆ

ಏ. 30ಕ್ಕೆ ತೆರೆಗೆ ಬರಲು ‘ಕೆಡಿ’ ರೆಡಿ

ಜೋಗಿ ಪ್ರೇಮ್ – ಧ್ರುವ ಸರ್ಜಾ ಕಾಂಬಿನೇಶನ್‌ನ ಚಿತ್ರಕ್ಕೆ ಕೌಂಟ್‌ಡೌನ್‌

ಈ ವರ್ಷದ ಮತ್ತೊಂದು ಕನ್ನಡದ ಬಹುನಿರೀಕ್ಷಿತ ಮಲ್ಟೀಸ್ಟಾರ್‌ ಚಿತ್ರ

ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗಾಗಲೇ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ ನಾಯಕ ನಟ ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನೆಮಾ ತೆರೆಗೆ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ‘ಕೆಡಿ’ ತೆರೆಗೆ ಬರೋದು ಸ್ವಲ್ಪ ತಡವಾಗಿದ್ದು, ಇದೀಗ ‘ಕೆಡಿ’ ಬಿಡುಗಡೆಗೆ ಅಂತಿಮ ದಿನ ನಿಗಧಿಯಾಗಿದೆ. ಹೌದು, ಧ್ರುವ ಸರ್ಜಾ ನಾಯಕನಾಗಿರುವ ಜೋಗಿ ಪ್ರೇಮ್‌ ನಿರ್ದೇಶನವಿರುವ ‘ಕೆಡಿ’ ಚಿತ್ರ ಇದೇ 2026ರ ಏಪ್ರಿಲ್‌ 30ಕ್ಕೆ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. 

ಈ ವರ್ಷದ ಬಿಗ್‌ಬಜೆಟ್‌ ಬಿಗ್‌ಸ್ಟಾರ್ಸ್‌ ಸಿನೆಮಾ

ಏಪ್ರಿಲ್ ಎರಡನೇ ವಾರ ‘ಕೆಡಿ’ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದ ಚಿತ್ರತಂಡ, ಏಪ್ರಿಲ್‌ 30ರಂದು ‘ಕೆಡಿ’ ಚಿತ್ರವನ್ನು ತೆರೆಗೆ ತರುವುದಾಗಿ ಹೇಳಿಕೊಂಡಿದೆ. ಅಂದಹಾಗೆ, ‘ಕೆಡಿ’ ಈ ವರ್ಷ ಕನ್ನಡದಲ್ಲಿ ತೆರೆಗೆ ಬರುತ್ತಿರುವ ಮೊದಲ ಬಿಗ್‌ ಬಜೆಟ್‌ ಮಲ್ಟೀಸ್ಟಾರ್ಸ್‌ ಸಿನೆಮಾ. ಹಾಗಾಗಿ ‘ಕೆಡಿ’ ಚಿತ್ರದ ಮೇಲೆ ಇಡೀ ಚಿತ್ರರಂಗ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲ ಎರಡನ್ನೂ ಇಟ್ಟುಕೊಂಡಿದೆ. ‘ಕೆಡಿ’ಯ ಮೇಲಿರುವ ಈ ಎಲ್ಲಾ ನಿರೀಕ್ಷೆ, ಕುತೂಹಲಗಳಿಗೆ ಇದೇ ತಿಂಗಳ ಕೊನೆಗೆ ತೆರೆ ಬೀಳಲಿದೆ.

‘ಕೆಡಿ’ಯಲ್ಲಿ ಬೃಹತ್‌ ಕಲಾವಿದರ ದಂಡು

‘ಕೆಡಿ’ ಚಿತ್ರದಲ್ಲಿ ಧ್ರುವ ಸರ್ಜಾ ನಾಯಕ ನಟನಾಗಿ, ರೀಶ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ನಟ ಕಿಚ್ಚ ಸುದೀಪ್ ಅವರು ‘ಕೆಡಿ’ ಸಿನೆಮಾದಲ್ಲಿ ‘ಕಾಲ ಭೈರವ’ ಎಂಬ ಹೆಸರಿನಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಉಳಿದಂತೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್‌, ನೂರಾ ಫತೇಹಿ ಹೀಗೆ ದೊಡ್ಡ ಕಲಾವಿದರ ತಾರಾಗಣವೇ ‘ಕೆಡಿ’ ಚಿತ್ರದಲ್ಲಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲೂ ‘ಕೆಡಿ’ ತೆರೆಗೆ ಬರುತ್ತಿದೆ.

Related Posts

error: Content is protected !!