ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ದಂಪತಿ!
ತಂದೆಯಾಗುತ್ತಿರುವ ಖುಷಿಯಲ್ಲಿ ಡಾಲಿ ಧನಂಜಯ್
ಬೇಬಿ ಬಂಪ್ ಪೋಟೋಶೂಟ್ ಮೂಲಕ ಖುಷಿ ಸುದ್ದಿ ಹಂಚಿಕೊಂಡ ಡಾಲಿ ಜೋಡಿ
ಡಾ. ಧನ್ಯತಾ ಮತ್ತು ಡಾಲಿ ಪೋಟೋಶೂಟ್ ಪೋಟೋಗಳು ವೈರಲ್! 
ಕನ್ನಡ ಚಿತ್ರರಂಗದ ನಟ, ನಿರ್ಮಾಪಕ ಡಾಲಿ ಧನಂಜಯ್ ಅವರು ಇದೀಗ ತಂದೆಯಾಗುವ ಖುಷಿಯಲ್ಲಿದ್ದಾರೆ. ಹೌದು, ಕಳೆದ ವರ್ಷವಷ್ಟೇ ಡಾ. ಧನ್ಯತಾ ಅವರೊಂದಿಗೆ ಹಸೆಮಣೆ ಏರಿದ್ದ ನಟ ಡಾಲಿ ಧನಂಜಯ್ ಈಗ ತಂದೆಯಾಗುತ್ತಿದ್ದಾರೆ. ಡಾ. ಧನ್ಯತಾ ಗರ್ಭಿಣಿ ಆಗಿದ್ದು ಡಾಲಿ ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಡಾ. ಧನ್ಯತಾ ಜೋಡಿ ಬೇಬಿ ಬಂಪ್ ಪೋಟೊಶೂಟ್ ಮಾಡಿಸಿದ್ದು, ಪತಿ ಡಾಲಿ ಸಹ ಪತ್ನಿಯ ಫೋಟೋಶೂಟ್ನಲ್ಲಿ ಜೊತೆಯಾಗಿದ್ದಾರೆ.
ಬೇಬಿ ಬಂಪ್ ಪೋಟೋಶೂಟ್‌ಗೆ ಧನಂಜಯ್ ಸಾಥ್…
ಇದೀಗ ಧನ್ಯತಾ ಅವರು ಬೇಬಿ ಬಂಪ್ ಪೋಟೋಶೂಟ್ ಮಾಡಿಸಿದ್ದು, ಪತಿ ಡಾಲಿ ಸಹ ಪತ್ನಿಯ ಪೋಟೋಶೂಟ್ನಲ್ಲಿ ಜೊತೆಯಾಗಿದ್ದಾರೆ. ಡಾ. ಧನ್ಯತಾ ಮತ್ತು ಡಾಲಿ ಧನಂಜಯ್ ಅವರುಗಳು ಪೋಟೊಶೂಟ್ನಲ್ಲಿ ಮುದ್ದಾಗಿ ಕಾಣುತ್ತಿದ್ದು, ಮಗುವಿನ ನಿರೀಕ್ಷೆಯಲ್ಲಿರುವ ಪೋಷಕರ ಖುಷಿ ಎದ್ದು ಕಾಣುತ್ತಿದೆ. ಸದ್ಯ ಡಾಲಿ ದಂಪತಿಯ ಬೇಬಿ ಬಂಪ್ ಪೋಟೋಶೂಟ್ ಪೋಟೋಗಳು ಸೋಶಿಯಲ್ ವೈರಲ್ ಆಗಿ ಹರಿದಾಡುತ್ತಿದೆ.
ಕೆಲ ತಿಂಗಳ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ನಟ ಡಾಲಿ ಧನಂಜಯ್, ತಂದೆಯಾಗುತ್ತಿರುವ ಖುಷಿಯ ಬಗ್ಗೆ ಮಾತನಾಡಿದ್ದರು. ಇದೊಂದು ಹೊಸ ಅನುಭವ ಎಂದು ಹೇಳಿಕೊಂಡಿದ್ದರು. ಅಂದಹಾಗೆ, ಕಳೆದ ವರ್ಷ (2025) ಫೆಬ್ರವರಿಯಲ್ಲಿ ಡಾಲಿ ಧನಂಜಯ್ ಮತ್ತು ವೈದ್ಯೆ ಡಾ. ಧನ್ಯತಾ ಅವರು ಮೈಸೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ವಿವಾಹವಾದ ಒಂದು ವರ್ಷದ ಬಳಿಕ ಇದೀಗ ಡಾಲಿ ಧನಂಜಯ್ – ಡಾ. ಧನ್ಯತಾ ದಂಪತಿ ಮೊದಲ ಮಗುವಿನ ಪೋಷಕರಾಗುವ ನಿರೀಕ್ಷೆಯಲ್ಲಿದ್ದಾರೆ. 
ಡಾಲಿ ದಂಪತಿಗೆ ಶುಭ ಹಾರೈಸಿದ ತಾರೆಯರು…
ಇನ್ನು ಪೋಷಕರಾಗುತ್ತಿರುವ ನಟ ಡಾಲಿ ಧನಂಜಯ್ – ಡಾ. ಧನ್ಯತಾ ದಂಪತಿಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಒಂದೆಡೆ ಶುಭ ಹಾರೈಸುತ್ತಿದ್ದರೆ, ಮತ್ತೊಂದೆಡೆ ಚಿತ್ರರಂಗದಲ್ಲಿ ನಟರಾದ ನಾಗಭೂಷಣ್, ಸಂಗೀತ ನಿರ್ದೇಶಕ ಕಂ ಗಾಯಕ ವಾಸುಕಿ ವೈಭವ್, ನಟಿಯರಾದ ಶ್ರುತಿ ಹರಿಹರನ್, ಅರ್ಚನಾ ಕೊಟ್ಟಿಗೆ ಮುಂತಾದವರು ಧನಂಜಯ್ – ಡಾ. ಧನ್ಯತಾ ದಂಪತಿಗೆ ಶುಭ ಹಾರೈಸಿದ್ದಾರೆ.















