Quick ಸುದ್ದಿಗೆ ಒಂದು click

ಜೂನ್ 4ಕ್ಕೆ ರಾಮ್ ಚರಣ್ ಅಭಿನಯದ ‘ಪೆದ್ದಿ’ ರಿಲೀಸ್‌!

ರಾಮ್ ಚರಣ್ ನಟನೆಯ ‘ಪೆದ್ದಿ’ ರಿಲೀಸ್ ಡೇಟ್ ಅನೌನ್ಸ್…

ಶೂಟಿಂಗ್ ಮುಗಿಸಿದ ‘ಪೆದ್ದಿ’ 2026ರ ಜೂನ್ 4ಕ್ಕೆ ತೆರೆಗೆ ಬರಲಿದೆ

ರಾಮ್ ಚರಣ್ ಸಿನೆಮಾ ರಿಲೀಸಿಗೆ ಡೇಟ್‌ ಫಿಕ್ಸ್‌

ಟಾಲಿವುಡ್‌ನ ‘ಮೆಗಾ ಪವರ್ ಸ್ಟಾರ್’ ರಾಮ್ ಚರಣ್ ತೇಜ್‌ ಅಭಿನಯದ ಬಹು ನಿರೀಕ್ಷಿತ ಸ್ಪೋರ್ಟ್ ಆಕ್ಷನ್ ಡ್ರಾಮಾ ‘ಪೆದ್ದಿ’ ಸಿನೆಮಾದ ಚಿತ್ರೀಕರಣ ಇತ್ತೀಚೆಗೆ ಯಶಸ್ವಿಯಾಗಿ ಮುಗಿದಿದೆ. ಚಿತ್ರೀಕರಣ ಮುಗಿಯುತ್ತಿದ್ದಂತೆ, ‘ಪೆದ್ದಿ’ ಚಿತ್ರತಂಡ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಅಂದಹಾಗೆ, ಇದೇ 2026ರ ಜೂನ್ 4ಕ್ಕೆ ವಿಶ್ವಾದ್ಯಂತ ಬಹುನಿರೀಕ್ಷಿತ ‘ಪೆದ್ದಿ’ ಸಿನೆಮಾ ಅದ್ಧೂರಿಯಾಗಿ ತೆರೆಗೆ ಬರಲಿದೆ.

ಬಹುತಾರಾಗಣ, ಬಹುನಿರೀಕ್ಷಿತ ‘ಪೆದ್ದಿ’

ಈ ಹಿಂದೆ ತೆಲುಗಿನಲ್ಲಿ ತೆರೆಕಂಡು ಸೂಪರ್‌ ಹಿಟ್‌ ಆಗಿದ್ದ ‘ಉಪ್ಪೆನ’ ಸಿನೆಮಾವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಬುಚ್ಚಿ ಬಾಬು ಸನಾ ‘ಪೆದ್ದಿ’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ಮತ್ತು ‘ಸುಕುಮಾರ್ ರೈಟಿಂಗ್ಸ್’ ಬ್ಯಾನರ್‌ಗಳು ‘ಪೆದ್ದಿ’ ಚಿತ್ರಕ್ಕೆ ಬೆಂಬಲವಾಗಿ ನಿಂತಿವೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಪೆದ್ದಿ’ ಸಿನೆಮಾದಲ್ಲಿ ನಾಯಕ ನಟ ರಾಮ್ ಚರಣ್‌ಗೆ ಬಾಲಿವುಡ್ ಬೆಡಗಿ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ‘ಹ್ಯಾಟ್ರಿಕ್‌ ಹೀರೋ’ ಖ್ಯಾತಿಯ ಶಿವರಾಜ ಕುಮಾರ್ ಕೂಡ ‘ಪೆದ್ದಿ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನುಳಿದಂತೆ, ಜಗಪತಿ ಬಾಬು, ದಿವೇಂದು ಶರ್ಮಾ ಮುಂತಾದ ಕಲಾವಿದರ ದೊಡ್ಡ ತಾರಾಬಳಗವೇ ‘ಪೆದ್ದಿ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದೆ.

ರಾಮ್‌ ಚರಣ್‌ ಅಭಿಮಾನಿಗಳ ಕಾತರಕ್ಕೆ ಸಿಕ್ಕಿತು ಉತ್ತರ..!

ಅಂದಹಾಗೆ, ಚಿತ್ರತಂಡದ ಯೋಜನೆಯಂತೆ ಎಲ್ಲವೂ ನಡೆದಿದ್ದರೆ ಇಷ್ಟೊತ್ತಿಗಾಗಲೇ ಬಹುನಿರೀಕ್ಷಿತ ‘ಪೆದ್ದಿ’ ಸಿನೆಮಾ ಬಿಡುಗಡೆಯಾಗಿ ತೆರೆಗೆ ಬರಬೇಕಿತ್ತು. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ‘ಪೆದ್ದಿ’ ತೆರೆಗೆ ಬರೋದು ತಡವಾಯಿತು ಎಂಬುದು ಟಾಲಿವುಡ್‌ ಅಂಗಳದಲ್ಲಿ ಕೇಳಿಬರುತ್ತಿರುವ ಮಾತು. ಇನ್ನು ಸೆಟ್ಟೇರಿದಾಗಿನಿಂದಲೂ ‘ಪೆದ್ದಿ’ ಸಿನೆಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ರಾಮ್‌ ಚರಣ್‌ ಅಭಿಮಾನಿಗಳು ‘ಪೆದ್ದಿ’ ಸಿನೆಮಾ ಬಿಡುಗಡೆಯಾಗೋದು ಯಾವಾಗ ಎಂಬ ಕಾತುರದಲ್ಲಿದ್ದರು. ಇದೀಗ ರಾಮ್‌ ಚರಣ್‌ ಅಭಿಮಾನಿಗಳ ಎಲ್ಲಾ ಕಾತುರಕ್ಕೆ ‘ಪೆದ್ದಿ’ ಚಿತ್ರತಂಡದ ಕಡೆಯಿಂದ ಉತ್ತರ ಸಿಕ್ಕಿದೆ. ಕೊನೆಗೂ ಚಿತ್ರತಂಡ ಅಧಿಕೃತವಾಗಿ, ‘ಪೆದ್ದಿ’ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದು, ಇದೇ 2026ರ ಜೂನ್‌ 4ಕ್ಕೆ ‘ಪೆದ್ದಿ’ ಚಿತ್ರ ಅದ್ಧೂರಿಯಾಗಿ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಬಹುಭಾಷೆಗಳಲ್ಲಿ ಏಕಕಾಲಕ್ಕೆ ‘ಪೆದ್ದಿ’ ತೆರೆಗೆ…

‘ಪೆದ್ದಿ’ ಚಿತ್ರಕ್ಕೆ ಸಂಗೀತ ಮಾಂತ್ರಿಕ ಎ. ಆರ್. ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ‘ವೃದ್ಧಿ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಾಣ ಮಾಡುತ್ತಿದ್ದಾರೆ. ‘ಪೆದ್ದಿ’ ಚಿತ್ರಕ್ಕೆ ಆರ್. ರತ್ನವೇಲು ಛಾಯಾಗ್ರಹಣ, ನವೀಲ್ ನೂಲಿ ಸಂಕಲನ‌ ಕಾರ್ಯ ನಿರ್ವಹಿಸಿದ್ದಾರೆ. ತೆಲುಗಿನ ಜೊತೆ ಕನ್ನಡ, ತಮಿಳು, ಮಲೆಯಾಳಂ, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ‘ಪೆದ್ದಿ’ ಏಕಕಾಲಕ್ಕೆ ತೆರೆಗೆ ಬರುತ್ತಿದೆ.

Related Posts

error: Content is protected !!