Street Beat

ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ ‘ಶೋಧ’ ಚಿತ್ರಕ್ಕೆ ಮುಹೂರ್ತ

ಸೆಟ್ಟೇರಿತು ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ ‘ಶೋಧ’

ನಟನೆ ತರಬೇತಿಯ ಜೊತೆಗೆ ನಿರ್ಮಾಣಕ್ಕೂ ಸೈ ಎಂದ ಧವನ್ ಸೋಹ…

‘ಶೋಧ’ನೆಗೆ ಹೊರಟ ‘ಫ್ಲೆಮಿಂಗೋ’ ಸ್ಟುಡೆಂಟ್ಸ್

ಸುಮಾರು ಒಂದೂವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಅಸಂಖ್ಯಾತ ಪ್ರತಿಭೆಗಳಿಗೆ ತರಬೇತಿ ನೀಡಿ ಕಿರುತೆರೆ ಮತ್ತು ಹಿರಿತೆರೆಗೆ ಕಲಾವಿದರನ್ನಾಗಿ ಪರಿಚಯಿಸಿರುವ ‘ಫ್ಲೆಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಫಿಲಂ ಅಕಾಡೆಮಿ’ ಬಗ್ಗೆ ಅನೇಕರಿಗೆ ಗೊತ್ತಿರಬಹುದು. ಇದೀಗ ಈ ಸಂಸ್ಥೆಯ ವಿದ್ಯಾರ್ಥಿಗಳನ್ನೇ ಪ್ರಮುಖ ಪಾತ್ರದಲ್ಲಿ ಇಟ್ಟುಕೊಂಡು ಈ ಸಂಸ್ಥೆ ಹೊಸಚಿತ್ರವೊಂದನ್ನು ತಯಾರಿಸಿ ತೆರೆಗೆ ತರಲು ಮುಂದಾಗಿದೆ. ಅಂದಹಾಗೆ, ಈ ಹೊಸಚಿತ್ರಕ್ಕೆ ‘ಶೋಧ’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ‘ಶೋಧ’ ಚಿತ್ರದ ಮುಹೂರ್ತ ಬೆಂಗಳೂರಿನ ರಾಜಾಜಿನಗರದ ಶ್ರೀದಂಡಪಾಣಿ (ಮುರುಘ) ದೇವಸ್ಥಾನದಲ್ಲಿ ನೆರವೇರಿತು.

ಹೊಸ ಪ್ರತಿಭೆಗಳ ‘ಶೋಧ’ನೆ!

ಅಂದಹಾಗೆ, ‘ಸ್ಕಂದ ಫಿಲಂ ಹೌಸ್’ ಹಾಗೂ ‘ಫ್ಲೆಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಫಿಲಂ ಅಕಾಡೆಮಿ’ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ‘ಶೋಧ’ ಚಿತ್ರಕ್ಕೆ ಹಿರಿಯ ನಟ ಮತ್ತು ನಿರ್ದೇಶಕ ಎಂ. ಡಿ. ಕೌಶಿಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಫ್ಲೆಮಿಂಗೋ’ ಸಂಸ್ಥೆಯ ರೂವಾರಿ ಧವನ್ ಸೋಹ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ನೂರಾರು ಸಿನೆಮಾಗಳಿಗೆ ಬೇಕಾದ ಕಲಾವಿದರನ್ನು ಆಡಿಷನ್‌ ಮೂಲಕ ಆಯ್ಕೆ ಮಾಡಿ, ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದ ‘ಫ್ಲೆಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಫಿಲಂ ಅಕಾಡೆಮಿ’ ಈಗ ತಮ್ಮದೇ ಸಂಸ್ಥೆಯ ಚೇತನ್‌ ಎಂಬ ಯುವ ಪ್ರತಿಭೆಯನ್ನು ‘ಶೋಧ’ ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದೆ.

ಇಂದಿನ ವ್ಯವಸ್ಥೆಯ ಸುತ್ತ ನಡೆಯುವ ಕಥಾನಕ

ಇನ್ನು ‘ಶೋಧ’ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಚಿತ್ರವಾಗಿದ್ದು, ಇಂದಿನ ಸಾಮಾಜಿಕ, ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆಯ ಸುತ್ತ ಚಿತ್ರದ ಕಥಾಹಂದರ ಸಾಗಲಿದೆ. ಯುವ ಪ್ರತಿಭೆ ಚೇತನ್‌, ‘ಶೋಧ’ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ನಮ್ಮ ನಡವೆಯೇ ಹುದುಗಿ ಹೋಗಿರುವ ಸತ್ಯದ ‘ಶೋಧ’ಕ್ಕೆ ಹೊರಟಾಗ ಏನೇನು ಎದುರಾಗುತ್ತದೆ ಎಂಬುದೇ ಚಿತ್ರದ ಕಥೆಯ ಒಂದು ಎಳೆ. ಅದನ್ನು ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವಂತೆ ತೆರೆಮೇಲೆ ತರುತ್ತಿದ್ದೇವೆ. ಪೊಲೀಸ್‌ ತನಿಖೆಯ ಎಳೆಯನ್ನು ಇಟ್ಟುಕೊಂಡು ಈ ಚಿತ್ರದ ಕಥೆ ಸಾಗುತ್ತದೆ. ಪ್ರೇಕ್ಷಕರಿಗೆ ಇಷ್ಟವಾಗುವಂಥ ಎಲ್ಲಾ ಥರದ ಮನರಂಜನೆಯ ಅಂಶಗಳೂ ಈ ಸಿನೆಮಾದಲ್ಲಿ ಇರಲಿದೆ’ ಎಂಬುದು ‘ಶೋಧ’ ಚಿತ್ರತಂಡದ ಒಕ್ಕೊರಲ ಮಾತು.

ಬಿರುಸಿನಿಂದ ಸಾಗಿದ ‘ಶೋಧ’ ಕಾರ್ಯ! ಶೀಘ್ರದಲ್ಲೇ ತೆರೆಗೆ…

‘ಶೋಧ’ ಚಿತ್ರದ ಹಾಡುಗಳಿಗೆ ಭುವನೇಶ್ ರೆಡ್ಡಿ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಚಂದು ಸಿ. ಛಾಯಾಗ್ರಹಣ, ಸೂರ್ಯೋದಯ ಸಂಕಲನ ಕಾರ್ಯವಿದೆ. ಬೆಂಗಳೂರು, ಕನಕಪುರ ಸುತ್ತಮುತ್ತ ಸುಮಾರು 15 ದಿನಗಳ ಕಾಲ ‘ಶೋಧ’ ಚಿತ್ರದ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಸದ್ಯ ‘ಶೋಧ’ ಚಿತ್ರದ ಪ್ರೀ-ಪ್ರೊಡಕ್ಷನ್ಸ್‌ ಕೆಲಸಗಳು ಪೂರ್ಣಗೊಂಡಿದ್ದು, ಒಂದೇ ಹಂತದಲ್ಲಿ ‘ಶೋಧ’ ಚಿತ್ರದ ಚಿತ್ರೀಕರಣ ನಡೆಯಲಿದೆ. ಒಟ್ಟಾರೆ ಬಿರುಸಿನಿಂದ ‘ಶೋಧ’ ಚಿತ್ರದ ಕೆಲಸಗಳು ನನಡೆಯುತ್ತಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಇದೇ ಆಗಸ್ಟ್ ವೇಳೆಗೆ ‘ಶೋಧ’ ಪ್ರೇಕ್ಷಕರ ಮುಂದೆ ಬರುವ ಯೋಚನೆಯಲ್ಲಿದೆ.

Related Posts

error: Content is protected !!