Video

ಟ್ರೇಲರ್ ನಲ್ಲಿ ‘ರಾಜ ರತ್ನಾಕರ’ ಎಂಟ್ರಿ

ಚಂದನ್ ರಾಜ್ ನಟನೆಯ ‘ರಾಜ ರತ್ನಾಕರ’ ಟ್ರೇಲರ್ ರಿಲೀಸ್

ಪಕ್ಕಾ ಮಾಸ್‌ ಕಥಾಹಂದರದ ಮತ್ತೊಂದು ಚಿತ್ರ ‘ರಾಜ ರತ್ನಾಕರ’ ಶೀಘ್ರದಲ್ಲೇ ತೆರೆಗೆ…

ಹೊರಬಂತು ಹೊಸಪ್ರತಿಭೆಗಳ ‘ರಾಜ ರತ್ನಾಕರ’ ಝಲಕ್‌

‘ಚೌಮುದ’ ಬ್ಯಾನರ್ ನಡಿ ಜಯರಾಮ ಸಿ. ಮಾಲೂರು ಅವರು ಮೊದಲ ಬಾರಿಗೆ ನಿರ್ಮಾಣ ಮಾಡಿರುವ ‘ರಾಜ ರತ್ನಾಕರ’ ಸಿನೆಮಾ ಬಿಡುಗಡೆಗೆ ತಯಾರಾಗಿದೆ. ಯುವನಟ ಚಂದನ್‌ ರಾಜ್‌ ನಾಯಕನಾಗಿ ಮತ್ತು ಅಪ್ಸರಾ ನಾಯಕಿಯಾಗಿ ಅಭಿನಯಿಸಿರುವ ‘ರಾಜ ರತ್ನಾಕರ’ ಸಿನೆಮಾದಲ್ಲಿ ಯಮುನಾ ಶ್ರೀನಿಧಿ, ಚೇತನ್‌ ದುರ್ಗಾ, ನಾಗರಾಜ್‌ ರಾವ್‌, ಸಿದ್ದು, ಡಿಂಗ್ರಿ ನರೇಶ್‌ ಮೊದಲಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ‘ರಾಜ ರತ್ನಾಕರ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ಈ ಸಿನೆಮಾದ ಮೊದಲ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ.

ಹೇಗಿದೆ ‘ರಾಜ ರತ್ನಾಕರ’ ಸಿನೆಮಾದ ಟ್ರೇಲರ್‌..?

ಸದ್ಯ ಬಿಡುಗಡೆಯಾಗಿರುವ ‘ರಾಜ ರತ್ನಾಕರ’ ಸಿನೆಮಾದ ಟ್ರೇಲರ್‌ ನಲ್ಲಿ ನಾಯಕ ನಟ ಚಂದನ್ ರಾಜ್ ಪಕ್ಕಾ ಉಡಾಳನಾಗಿ ಮಾಸ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ದುಡಿಬೇಕು ಅನ್ನೋದೆಲ್ಲ ಏನಿಲ್ಲ. ಒಟ್ಟಿನಲ್ಲಿ ದುಡ್ ಮಾಡ್ಬೇಕು ಅಷ್ಟೇ…’ ತಾನು ದುಡ್ಡು ಮಾಡೋದಕ್ಕೆ ತನ್ನ ಕುಟುಂಬವನ್ನು ಇಕ್ಕಟ್ಟಿಗೆ ಸಿಲುಕಿಸಿದರೂ ಸರಿ, ಎಂಬ ಮನಸ್ಥಿತಿ ಹೊಂದಿರುವ ಕೆಳ ಮಧ್ಯಮ ವರ್ಗದ ಹುಡುಗನಾಗಿ ಅಭಿನಯಿಸಿದ್ದಾರೆ. ಒಂದಷ್ಟು ಕಾಮಿಡಿ, ಎಮೋಶನ್ಸ್‌, ಮಾಸ್‌ ಆಡಿಯನ್ಸ್‌ಗೆ ಇಷ್ಟವಾಗುವಂಥ ಹಾಡು, ಆಕ್ಷನ್‌ ದೃಶ್ಯಗಳ ತುಣುಕುಗಳನ್ನು’ರಾಜ ರತ್ನಾಕರ’ ಸಿನೆಮಾದ ಟ್ರೇಲರ್‌ನಲ್ಲಿ ಕಟ್ಟಿಕೊಡಲಾಗಿದೆ. ‘ಎ2 ಮ್ಯೂಸಿಕ್‌’ ಯು-ಟ್ಯೂಬ್‌ ಚಾನೆಲ್‌ನಲ್ಲಿ ‘ರಾಜ ರತ್ನಾಕರ’ ಸಿನೆಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ನಿಧಾನವಾಗಿ ಟ್ರೇಲರ್‌ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

‘ರಾಜ ರತ್ನಾಕರ’ ಸಿನೆಮಾದ ಟ್ರೇಲರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು… 

ಇದೇ ಜೂ. 27ಕ್ಕೆ ‘ರಾಜ ರತ್ನಾಕರ’ ತೆರೆಗೆ

ಯುವ ನಿರ್ದೇಶಕ ವೀರೇಶ್ ಬೊಮ್ಮಸಾಗರ ನಿರ್ದೇಶನದಲ್ಲಿ, ಜಯರಾಮ್‌ ಸಿ. ಮಾಲೂರು ನಿರ್ಮಾಣದಲ್ಲಿ ಮೂಡಿಬಂದಿರುವ ‘ರಾಜ ರತ್ನಾಕರ’ ಸಿನೆಮಾವನ್ನು ಇದೇ 2025ರ ಜೂನ್‌ 27ರಂದು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸದ್ಯ ಟ್ರೇಲರ್‌ ಮೂಲಕ ಹೊರಬಂದಿರುವ ‘ರಾಜ ರತ್ನಾಕರ’ ನಿಧಾನವಾಗಿ ನಿಸಿಪ್ರಿಯರ ಗಮನ ಸೆಳೆಯುತ್ತಿದ್ದು, ಸಿನೆಮಾ ಥಿಯೇಟರಿನಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕ ಪ್ರಭುಗಳಿಗೆ ಇಷ್ಟವಾಗಲಿದೆ ಎಂಬುದು ಇದೇ ಜೂನ್‌ ತಿಂಗಳ ಅಂತ್ಯಕ್ಕೆ ಗೊತ್ತಾಗಲಿದೆ.

Related Posts

error: Content is protected !!