ಆಕ್ಷನ್ ಪ್ಯಾಕ್ಡ್ ‘ದಿಲ್ಮಾರ್’ ಸಿನೆಮಾ ಟ್ರೇಲರ್ ರಿಲೀಸ್
‘ದಿಲ್ಮಾರ್’ ಚಿತ್ರದ ಔಟ್ ಅಂಡ್ ಔಟ್ ಆಕ್ಷನ್ ಟ್ರೇಲರ್ ಔಟ್
ಪಕ್ಕಾ ರಗಡ್ ಸ್ಟೈಲ್ ಆಕ್ಷನ್ ಜೊತೆಗೊಂದು ಸೈಕ್ ಲವ್ ಸ್ಟೋರಿ…!
ಹೊಸ ಪ್ರತಿಭೆಗಳ ‘ದಿಲ್ಮಾರ್’ ಸಿನೆಮಾ ತೆರೆಗೆ ಬರೋಕೆ ರೆಡಿ
ಯುವ ಪ್ರತಿಭೆ ರಾಮ್ ಕನ್ನಡದಲ್ಲಿ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ, ತೆಲುಗಿನ ನಟಿ ಡಿಂಪಲ್ ಹಯಾತಿ ಹಾಗೂ ಆದಿತಿ ಪ್ರಭುದೇವ ನಾಯಕಿಯರಾಗಿ ಕಾಣಿಸಿಕೊಂಡಿರುವ
‘ದಿಲ್ಮಾರ್’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ‘ದಿಲ್ಮಾರ್’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ‘ದಿಲ್ಮಾರ್’ ಚಿತ್ರದ ಆಕ್ಷನ್ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ಹೇಗಿದೆ ‘ದಿಲ್ಮಾರ್’ ಟ್ರೇಲರ್..?
ಸದ್ಯ ಬಿಡುಗಡೆಯಾಗಿರುವ ‘ದಿಲ್ಮಾರ್’ ಸಿನೆಮಾದ ಟ್ರೇಲರ್ ಔಟ್ ಅಂಡ್ ಔಟ್ ಆಕ್ಷನ್ ಕಂಟೆಂಟ್ ಅನ್ನು ಇಟ್ಟುಕೊಂಡು ಮೂಡಿಬಂದಿದೆ. ಸೈಕ್ ಪ್ರೀತಿ ಕಥೆ ಜೊತೆಗೆ ಮಾಸ್ ಆಡಿಯನ್ಸ್ ಗಮನ ಸೆಳೆಯುವಂಥ ಡೈಲಾಗ್ ಅನ್ನು ಟ್ರೇಲರಿನಲ್ಲಿ ಕಾಣಬಹುದಾಗಿದೆ. ಲಾಂಗು-ಮಚ್ಚು, ರಕ್ತ, ಪ್ರೀತಿ, ಹೊಡೆದಾಟ ಹೀಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಸಿನೆಮಾದಲ್ಲಿ ಇರಬಹುದಾದ ಎಲ್ಲಾ ಅಂಶಗಳನ್ನೂ ‘ದಿಲ್ಮಾರ್’ ಸಿನೆಮಾದ ಟ್ರೇಲರ್‌ನಲ್ಲಿ ನಿರ್ದೇಶಕರು ತೋರಿಸಿದ್ದಾರೆ.
ಇನ್ನು ‘ದಿಲ್ಮಾರ್’ ಸಿನೆಮಾದಲ್ಲಿ ನಾಯಕ ರಾಮ್, ನಾಯಕಿಯರಾದ ಡಿಂಪಲ್ ಹಯಾತಿ, ಅದಿತಿ ಪ್ರಭುದೇವ ಜೊತೆಗೆ ಹಿರಿಯ ನಟ ಡೈಲಾಗ್ ಕಿಂಗ್ ಸಾಯಿ ಕುಮಾರ್, ಶರತ್ ಲೋಹಿತಾಶ್ವ, ಅಶೋಕ್, ಗೋವಿಂದೇ ಗೌಡ (ಜಿ. ಜಿ) ಹೀಗೆ ಹಲವು ಹಿರಿಯ-ಕಿರಿಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ‘ದಿಲ್ಮಾರ್’ ಸಿನೆಮಾದ ಟ್ರೇಲರ್ ‘ಸರೆಗಮ’ ಯು-ಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸಿನೆಮಾದ ಟ್ರೇಲರಿಗೆ ಯು-ಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
‘ದಿಲ್ಮಾರ್’ ಸಿನೆಮಾದ ಆಕ್ಷನ್ ಪ್ಯಾಕ್ಡ್ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಇದೇ ಅಕ್ಟೋಬರ್ 24ಕ್ಕೆ ‘ದಿಲ್ಮಾರ್’ ತೆರೆಗೆ
‘ದಿಲ್ಮಾರ್’ ಸಿನೆಮಾಕ್ಕೆ ಚಂದ್ರಮೌಳಿ ಕಥೆ ಬರೆದು ಆಕ್ಷನ್-ಕಟ್ ಹೇಳಿದ್ದಾರೆ. ತೆಲುಗಿನ ‘ಅರ್ಜುನ್ ರೆಡ್ಡಿ’ ಖ್ಯಾತಿಯ ರಾದನ್ ‘ದಿಲ್ಮಾರ್’ ಸಿನೆಮಾಗೆ ಸಂಗೀತ ಸಂಯೋಜಿಸಿದ್ದಾರೆ. ‘ದಿಲ್ಮಾರ್’ ಸಿನೆಮಾಕ್ಕೆ ತನ್ವಿಕ್ ಛಾಯಾಗ್ರಹಣ, ಶಶಾಂಕ್ ಮುರುಳಿಧರನ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.
ಕೆ. ಮಹೇಶ್ ಮತ್ತು ನಾಗರಾಜ್ ಭದ್ರಾವತಿ ಜಂಟಿಯಾಗಿ ‘ದಿಲ್ಮಾರ್’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ಇದೇ 2025ರ ಅಕ್ಟೋಬರ್ 24ಕ್ಕೆ ‘ದಿಲ್ಮಾರ್’ ಸಿನೆಮಾ ತೆರೆಗೆ ಬರುತ್ತಿದೆ. ಒಟ್ಟಾರೆ ‘ದಿಲ್ಮಾರ್’ ಸಿನೆಮಾ ಥಿಯೇಟರಿನಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮನ ಗೆಲ್ಲಲಿದೆ ಎಂಬ ಕುತೂಹಲಕ್ಕೆ ಇದೇ ಅಕ್ಟೋಬರ್ ಅಂತ್ಯಕ್ಕೆ ಉತ್ತರ ಸಿಗಲಿದೆ.















