ಪಡ್ಡೆ ಹುಡಗರ ಮನಸೆಳೆವಂತಿರುವ ‘ಧರ್ಮಂ’ ಸಾಂಗ್!
‘ಶೇಕ್ ಇಟ್ ಪುಷ್ಪಾವತಿ’ಯ ಮೊತ್ತೊಂದು ಸಾಂಗ್…
‘ಧರ್ಮಂ’ ಚಿತ್ರದ ‘ನಾನು ದಿಲ್ಲಿ ಹಳ್ಳಿ ಸುತ್ತಿ ಬಂದ…’ ಹಾಡು ಬಿಡುಗಡೆ
ಐಶ್ವರ್ಯ ರಂಗರಾಜನ್ ಹಾಡಿರುವ ಐಟಂ ಸಾಂಗ್
ನಟಿ ನಿಮಿಕಾ ರತ್ನಾಕರ್ ಗ್ಲಾಮರಸ್ ಆಗಿ ಹೆಜ್ಜೆ ಹಾಕಿರುವ ‘ಶೇಕ್ ಇಟ್ ಪುಷ್ಪಾವತಿ…’ ಹಾಡಿಗೆ ಧ್ವನಿಯಾಗಿ ಕನ್ನಡ ಸಂಗೀತ ಪ್ರಿಯರ ಗಮನ ಸೆಳೆದಿರುವ ಗಾಯಕಿ ಐಶ್ವರ್ಯಾ ರಂಗರಾಜನ್. ಈ ಬಾರಿ ಐಶ್ವರ್ಯಾ ರಂಗರಾಜನ್ ಮತ್ತೊಂದು ಅಂಥದ್ದೇ ಹಾಡಿನ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದಾರೆ. ಹೌದು, ಸದ್ಯ ಐಶ್ವರ್ಯಾ ರಂಗರಾಜನ್ ‘ಧರ್ಮಂ’ ಚಿತ್ರದ ‘ನಾನು ದಿಲ್ಲಿ ಹಳ್ಳಿ ಸುತ್ತಿ ಬಂದೆ…’ ಎಂಬ ಮತ್ತೊಂದು ಐಟಂ ಹಾಡಿಗೆ ಧ್ವನಿಯಾಗಿದ್ದು, ಇತ್ತೀಚೆಗೆ ಆ ಹಾಡು ಬಿಡುಗಡೆಯಾಗಿದೆ. 
ಹೇಗಿದೆ ‘ಧರ್ಮಂ’ ಐಟಂ ಸಾಂಗ್…?
‘ಧರ್ಮಂ’ ಚಿತ್ರವನ್ನು ‘ಶಾಂತ ಸಿನೆಮಾಸ್’ ಬ್ಯಾನರಿನಲ್ಲಿ ಡಾ. ಕೆ. ಎಸ್. ರಾಮಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ನಾಗಮುಖ ನಿರ್ದೇಶನದಲ್ಲಿ ‘ಧರ್ಮಂ’ ಚಿತ್ರ ಮೂಡಿಬರುತ್ತಿದೆ. ಸದ್ಯ ‘ಧರ್ಮಂ’ ಚಿತ್ರದ ‘ನಾನು ದಿಲ್ಲಿ ಹಳ್ಳಿ ಸುತ್ತಿ ಬಂದೆ…’ ಎಂಬ ಈ ಗೀತೆ ಪಡ್ಡೆ ಹುಡಗರ ಗಮನಸೆಳೆವಂತಿದೆ. ‘ಸರೆಗಮ’ ಕನ್ನಡ ಯೂ-ಟ್ಯೂಬ್ ನಲ್ಲಿ ರಿಲೀಸ್ ಆಗಿರುವ ಐಟಂ ಸಾಂಗ್ ಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ. ನಾಗಮುಖ ಸಾಹಿತ್ಯ ಬರೆದಿರುವ ‘ನಾನು ದಿಲ್ಲಿ ಹಳ್ಳಿ ಸುತ್ತಿ ಬಂದೆ…’ ಹಾಡಿಗೆ ಸರವಣ ಸುಬ್ರಮಣಿಯಂ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಸಾಯಿ ಶಶಿಕುಮಾರ್ ‘ಧರ್ಮಂ’ ಸಿನೆಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ವಿರಾನಿಕ ಶೆಟ್ಟಿ ನಾಯಕಿ ಆಗಿ ಅಭಿನಯಿಸಿದ್ದಾರೆ. ನಾಗಶೆಟ್ಟಿ ಈ ಸಿನೆಮಾಗೆ ಛಾಯಾಗ್ರಹಣ ಮಾಡಿದ್ದಾರೆ. ಬಾಲ ಮಾಸ್ಟರ್ ‘ಧರ್ಮಂ’ ಚಿತ್ರದ ಈ ಹಾಡಿನಲ್ಲಿ ಕಲಾವಿದರಿಗೆ ಹೆಜ್ಜೆ ಹಾಕಿಸಿದ್ದಾರೆ.
‘ಧರ್ಮಂ’ ಚಿತ್ರದ ‘ನಾನು ದಿಲ್ಲಿ ಹಳ್ಳಿ ಸುತ್ತಿ ಬಂದೆ…’ ಎಂಬ ಗೀತೆಯ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…















