Video

‘ಧರ್ಮಂ‌’ ಟ್ರೇಲರಿನಲ್ಲಿ ಜಾತಿ ಸಂಘರ್ಷದ ಕಥನ

ಜಾತಿ ಹಿನ್ನೆಲೆಯ ‘ಧರ್ಮಂ‌’ ಚಿತ್ರದ ಟ್ರೇಲರ್‌ ರಿಲೀಸ್‌

ತೆರೆಗೆ ಬರುತ್ತಿದೆ ಜಾತಿ-ಧರ್ಮದ ಮೇಲೆ ಮತ್ತೊಂದು ರಕ್ತ ಚರಿತ್ರೆಯ ಕಥೆ

ಹೊಸಬರ ಜಾತಿ ಸಂಘರ್ಷದ ಚಿತ್ರ ಶೀಘ್ರದಲ್ಲೇ ತೆರೆಗೆ

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ಧರ್ಮಂ’ ಚಿತ್ರ ತೆರೆಗೆ ಬರಲು ತಯಾರಿ ನಡೆಸುತ್ತಿದೆ. ಈಗಾಗಲೇ ‘ಧರ್ಮಂ’ ಚಿತ್ರದ ಬಹುತೇಕ ಪ್ರೊಡಕ್ಷನ್ಸ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. ನಿರ್ದೇಶಕ ತರುಣ್ ಕಿಶೋರ್ ಸುಧೀರ್ ‘ಧರ್ಮಂ’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಶುಭ ಹಾರೈಸಿದರು. 80ರ ದಶಕದ ಹಿನ್ನೆಲೆಯಲ್ಲಿ ‘ಧರ್ಮಂ’ ಚಿತ್ರದ ಟ್ರೇಲರ್‌ ಅನ್ನು ತೆರೆಮೇಲೆ ತೋರಿಸಲಾಗಿದೆ.

ಹೇಗಿದೆ ‘ಧರ್ಮಂ’ ಟ್ರೇಲರ್‌…?

ಸಂಪೂರ್ಣ ಗ್ರಾಮೀಣ ಹಿನ್ನೆಲೆಯಲ್ಲಿ ‘ಧರ್ಮಂ’ ಸಿನೆಮಾದ ಟ್ರೇಲರ್‌ ಅನ್ನು ಕಟ್ಟಿಕೊಡಲಾಗಿದೆ. ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಚಿತ್ರದ ಕಥೆಯಲ್ಲಿ ಜಾತಿ, ಜಾತಿಗಳ ನಡುವಿನ ಸಂಘರ್ಷವನ್ನು ರಗಡ್ ಆಗಿ ಕಟ್ಟಿಕೊಡಲಾಗಿದೆ. ‘ಜಾತಿಯಲ್ಲಿ ಹಿಂದುಳಿಯುದಲ್ಲ.. ಜೀವನದಲ್ಲಿ ಮುಂದೆ ಬರದಂತೆ ನೋಡಿಕೊಳ್ಳಬೇಕು.. ಇಲ್ಲಿ ನ್ಯಾಯ ನೀತಿ ಧರ್ಮಕ್ಕೆ ಬೆಲೆ ಇಲ್ಲ…’, ‘ಜಾತಿಯಲ್ಲಿ ಹಿಂದುಳಿಯುದಲ್ಲ.. ಜೀವನದಲ್ಲಿ ಮುಂದೆ ಬರದಂತೆ ನೋಡಿಕೊಳ್ಳಬೇಕು…’, ‘ಇಲ್ಲಿ ನ್ಯಾಯ ನೀತಿ ಧರ್ಮಕ್ಕೆ ಬೆಲೆ ಇಲ್ಲ…’, ‘ಧರ್ಮ ಉಳಿಬೇಕಂದ್ರೆ ..ನಿನ್ನ ಜಾತಿ ಸಾಯಬೇಕು…’ ಎಂಬ ಒಂದಷ್ಟು ಖಡಕ್‌ ಡೈಲಾಗ್ಸ್‌ ‘ಧರ್ಮಂ’ ಚಿತ್ರದ ಟ್ರೇಲರ್‌ನಲ್ಲಿದೆ. ಹಳ್ಳಿಯಲ್ಲಿ ಜಾತಿಗಳ ನಡುವಿನ ಶೋಷಣೆ, ದಬ್ಬಾಳಿಕೆಯ ಜೊತೆಗೆ ಆಕ್ಷನ್ ಸನ್ನಿವೇಶಗಳನ್ನು ಸೇರಿಸಿ ‘ಧರ್ಮ’ ಚಿತ್ರದ ಟ್ರೇಲರ್‌ ಅನ್ನು ಕಟ್‌ ಮಾಡಲಾಗಿದೆ.

‘ಧರ್ಮಂ’ ಸಿನೆಮಾದ ಟ್ರೇಲರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಹೊಸ ಪ್ರತಿಭೆಗಳ ಕೈಯಲ್ಲಿ ಅರಳಿದ ‘ಧರ್ಮಂ’

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ‘ಧರ್ಮಂ’ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ‘ಧರ್ಮಂ’ ಚಿತ್ರದಲ್ಲಿ ಸಾಯಿ ಶಶಿಕುಮಾರ್‌ ನಾಯಕನಾಗಿ ಮತ್ತು ವಿರಾಣಿಕ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನವ ನಿರ್ದೇಶಕ ನಾಗಮುಖ ಈ ಸಿನೆಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಡಾ. ಎಸ್. ಕೆ. ರಾಮಕೃಷ್ಣ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಉಳಿದಂತೆ ಹಿರಿಯ ನಟ ಅಶೋಕ ಹೆಗ್ಡೆ, ಭೀಷ್ಮ ರಾಮಯ್ಯ ಮೊದಲಾದವರು ‘ಧರ್ಮಂ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಟ್ರೇಲರ್‌ ಮೂಲಕ ಹೊರಬಂದಿರುವ ‘ಧರ್ಮಂ’ ಚಿತ್ರವನ್ನು ಇದೇ 2025ರ ಡಿಸೆಂಬರ್‌ 5 ಕ್ಕೆ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Related Posts

error: Content is protected !!