ಹೊರಬಂತು ‘ಕಾಂತಾರ: ಚಾಪ್ಟರ್ 1’ ; ಮತ್ತೊಂದು ದಂತಕಥೆ ಹೇಳಲು ರಿಷಬ್ ರೆಡಿ
ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ರಿಲೀಸ್
ಏಕಕಾಲಕ್ಕೆ ಬಹುಭಾಷೆಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆ
ಅದ್ಧೂರಿ ಮೇಕಿಂಗ್ ನಲ್ಲಿ ಅರಳಿದ ರಿಷಬ್ ದಂತಕಥೆ
ಕನ್ನಡ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಒಂದಾಗಿರುವ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ 2025ರ ಅಕ್ಟೋಬರ್ 1ರಂದು ‘ಕಾಂತಾರ’ ಸಿನೆಮಾದ ಪ್ರೀಕ್ವೆಲ್ ಆಗಿ, ‘ಕಾಂತಾರ: ಚಾಪ್ಟರ್ 1’ ಬಿಡುಗಡೆಯಾಗುತ್ತಿದೆ. ಇನ್ನು ‘ಕಾಂತಾರ: ಚಾಪ್ಟರ್ 1’ ಸಿನೆಮಾದ ಬಿಡುಗಡೆಗೆ ಹತ್ತು ದಿನಗಳು ಬಾಕಿಯಿರುವಾಗಲೇ ಚಿತ್ರತಂಡ, ‘ಕಾಂತಾರ: ಚಾಪ್ಟರ್ 1’ ಸಿನೆಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. 
ಹೇಗಿದೆ ‘ಕಾಂತಾರ: ಚಾಪ್ಟರ್ 1’ ಟ್ರೇಲರ್..?
‘ಕಾಂತಾರ’ ಸಿನೆಮಾ ಸೂಪರ್ ಹಿಟ್ ಆಗುತ್ತಿದ್ದಂತೆ, ‘ಕಾಂತಾರ’ ಚಿತ್ರಕ್ಕೆ ಪ್ರೀಕ್ವೆಲ್ ತರೋದಾಗಿ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಘೋಷಿಸಿದ್ದರು. ಅದರಂತೆಯೇ ‘ಕಾಂತಾರ’ ಸಿನೆಮಾದ ಪ್ರೀಕ್ವೆಲ್ ಆಗಿ ‘ಕಾಂತಾರ: ಚಾಪ್ಟರ್ 1’ ಸಿನೆಮಾ ಮೂಡಿಬಂದಿರುವುದು ಟ್ರೇಲರ್‌ನಲ್ಲಿ ಕಾಣುತ್ತಿದೆ. ಇನ್ನು ‘ಕಾಂತಾರ: ಚಾಪ್ಟರ್ 1’ ಸಿನೆಮಾದ ಟ್ರೇಲರ್ ಅದ್ದೂರಿಯಾಗಿ ಮೂಡಿ ಬಂದಿದ್ದು, ಅದ್ಭುತ ದೃಶ್ಯಗಳು ಮತ್ತು ಸ್ಟಂಟ್‌ಗಳು ಪ್ರೇಕ್ಷಕರ ಗಮನ ಸೆಳೆಯುವಂತಿವೆ. ‘ಹೊಂಬಾಳೆ ಫಿಲ್ಮ್ಸ್’ ಅದ್ದೂರಿತನಕ್ಕೆ ಯಾವುದೇ ಕೊರತೆ ಆಗದಂತೆ ನೋಡಿಕೊಂಡಿದ್ದು, ನಟ ಕಂ ನಿರ್ದೇಶಕ ರಿಷಬ್ ಮಾಡಿದ ಸ್ಟಂಟ್‌ಗಳು ಗಮನ ಸೆಳೆಯುವ ರೀತಿಯಲ್ಲಿ ಇದೆ. ಇತಿಹಾಸದ ಕಥೆ, ರಾಜಮನೆತನ, ದೈವ ಭಕ್ತಿ, ಪ್ರೇಮಕಥೆ, ಯುದ್ಧ ಹೀಗೆ ಅನೇಕ ಅಂಶಗಳನ್ನು ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ, ‘ಕಾಂತಾರ: ಚಾಪ್ಟರ್ 1’ ಸಿನೆಮಾದ ಟ್ರೇಲರ್ ನಲ್ಲಿ ಕಟ್ಟಿಕೊಟ್ಟಿದ್ದಾರೆ. ನಟ ರಿಷಬ್ ಶೆಟ್ಟಿ ಅವರಿಗೆ ರುಕ್ಮಿಣಿ ವಸಂತ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಉಳಿದಂತೆ ಗುಲ್ಶನ್ ದೇವಯ್ಯ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಹೀಗೆ ಬೃಹತ್ ಕಲಾವಿದರ ದಂಡೇ ಟ್ರೇಲರ್ ನಲ್ಲಿ ಕಾಣಣುತ್ತದೆ.
‘ಕಾಂತಾರ: ಚಾಪ್ಟರ್ 1’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
‘ಕಾಂತಾರ: ಚಾಪ್ಟರ್ 1’ ಸಿನೆಮಾದ ಮೈಲೇಜ್ ಹೆಚ್ಚಿಸಿದ ಟ್ರೇಲರ್
‘ಕಾಂತಾರ: ಚಾಪ್ಟರ್ 1’ ಸಿನೆಮಾದ ಕೆಲಸಗಳು ಪ್ರಾರಂಭವಾಗಿ ಸುಮಾರು ಮೂರು ವರ್ಷಗಳು ಕಳೆದಿದ್ದರೂ, ಚಿತ್ರತಂಡ ಮಾತ್ರ ಈ ಸಿನೆಮಾದ ಬಗ್ಗೆ ಎಲ್ಲಿಯೂ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಕೆಲ ತಿಂಗಳ ಹಿಂದಷ್ಟೇ ‘ಕಾಂತಾರ: ಚಾಪ್ಟರ್ 1’ ಸಿನೆಮಾದ ಮೇಕಿಂಗ್ ವಿಡಿಯೋ ಒಂದು ಬಿಡುಗಡೆಯಾಗಿ, ಸಿನಿಪ್ರಿಯರ ಕುತೂಹಲ ಹೆಚ್ಚಿಸಿತ್ತು. ಇದೀಗ ‘ಕಾಂತಾರ: ಚಾಪ್ಟರ್ 1’ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್ ನೋಡಿದ ಬಳಿಕ ‘ಕಾಂತಾರ: ಚಾಪ್ಟರ್ 1’ ಸಿನೆಮಾದ ಮೈಲೇಜ್ ಇನ್ನಷ್ಟು ಹೆಚ್ಚಿದೆ ಎನ್ನಬಹುದು.
ಪಶ್ಚಿಮ ಘಟ್ಟದ ಹಲವು ಅದ್ಭುತ ಲೊಕೇಶನ್ಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನೆಮಾದ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರಕ್ಕಾಗಿ ಅದ್ದೂರಿ ಸೆಟ್ಗಳನ್ನು ಕೂಡ ನಿರ್ಮಾಣ ಮಾಡಲಾಗಿದೆ. ಇದೆಲ್ಲವೂ ಟ್ರೇಲರ್‌ನಲ್ಲಿ ಎದ್ದು ಕಾಣುತ್ತಿದ್ದು, ಸಹಜವಾಗಿಯೇ ಟ್ರೇಲರ್ ‘ಕಾಂತಾರ: ಚಾಪ್ಟರ್ 1’ ಸಿನೆಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
‘ಕಾಂತಾರ: ಚಾಪ್ಟರ್ 1’ರ ಕಥೆ ಏನು..?
‘ಕಾಂತಾರ’ ಸಿನೆಮಾದಲ್ಲಿ ದೈವದ ವೇಷ ಹಾಕುವ ವ್ಯಕ್ತಿ (ರಿಷಬ್ ಶೆಟ್ಟಿ) ಕಾಡಿನ ನಡುವೆ ಇರುವ ಒಂದು ಜಾಗದಲ್ಲಿ ಮಾಯ ಆಗುತ್ತಾನೆ. ಆ ಜಾಗದ ಬಗ್ಗೆ ಕೇಳಿದಾಗ ಅದರ ಇತಿಹಾಸ ಆರಂಭ ಆಗುತ್ತದೆ. ಇಲ್ಲಿ, ರಕ್ತದ ಇತಿಹಾಸದ ಇದೆ. ರಾಜ ಮನೆತನದ ಕಥೆ ಇದೆ. ಜನ ಸಾಮಾನ್ಯನಿಗೂ ರಾಜ ಮನೆತನಕ್ಕೂ ಮೂಡುವ ಪ್ರೀತಿ ಇದೆ. ‘ಕಾಂತಾರ: ಚಾಪ್ಟರ್ 1’ ಸಿನೆಮಾವನ್ನು ‘ಹೊಂಬಾಳೆ ಫಿಲ್ಮ್ಸ್’ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದು, ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.















