Pop Corner

ರಿಷಬ್ ಶೆಟ್ಟಿ ಅಭಿನಯದ ‘ಜೈ ಹನುಮಾನ್’ ಚಿತ್ರಕ್ಕೆ ಮುಹೂರ್ತ

ಅಂಜನಾದ್ರಿ ಬೆಟ್ಟದಲ್ಲಿ ಸೆಟ್ಟೇರಿತು ‘ಜೈ ಹನುಮಾನ್’

ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ್’ಗೆ ಮುಹೂರ್ತ

ಹನುಮಾನ್‌ ಅವತಾರದಲ್ಲಿ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ

‘ಕಾಂತಾರ’ ಪಾರ್ಟ್- 1 ಸಿನೆಮಾದ ಸೂಪರ್ ಸಕ್ಸಸ್ ಬಳಿಕ ನಟ ಕಂ ನಿರ್ದೇಶಕ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಬಹುಭಾಷೆಯಲ್ಲಿ ತಯಾರಾಗುತ್ತಿರುವ ‘ಜೈ ಹನುಮಾನ್’ ಸಿನೆಮಾದಲ್ಲಿ ಅಭಿನಯಿಸುತ್ತಿರುವುದು ಅನೇಕರಿಗೆ ಗೊತ್ತಿರಬಹುದು. ಇದೀಗ ಈ ಸಿನೆಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ್’ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು, ಚಿತ್ರರಂಗದ ಅನೇಕ ಗಣ್ಯರು ಈ ವೇಳೆ ಹಾಜರಿದ್ದರು.

‘ಜೈ ಹನುಮಾನ್’ ಚಿತ್ರಕ್ಕೆ ಶುಭ ಕೋರಿದ ಗಣ್ಯರು

‘ಟೀ ಸಿರೀಸ್’ ಮುಖ್ಯಸ್ಥ ಭೂಷಣ್ ಕುಮಾರ್ ‘ಜೈ ಹನುಮಾನ್’ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ರು. ವಿತರಕ ಅನಿಲ್ ಥಡಾನಿ ಕ್ಯಾಮೆರಾಗೆ ಚಾಲನೆ ನೀಡಿದರು. ರಿಷಬ್ ಶೆಟ್ಟಿ ಜೊತೆ ಪತ್ನಿ ಪ್ರಗತಿ ಶೆಟ್ಟಿ, ನಿರ್ದೇಶಕ‌ ಪ್ರಶಾಂತ್ ವರ್ಮಾ, ನಿರ್ಮಾಪಕರಾದ ನವೀನ್ ಯೆರ್ನೇನಿ ಮತ್ತು ವೈ ರವಿ ಶಂಕರ್, ನಟ ತೇಜ್ ಸಜ್ಜಾ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು.‌ ಹನುಮ ಹುಟ್ಟಿದ ಸ್ಥಳ ಅಂಜನಾದ್ರಿಯಲ್ಲಿಯೇ ‘ಜೈ ಹನುಮಾನ್’ ಸಿನೆಮಾದ ಪೂಜೆ ಮಾಡಿರುವ ಚಿತ್ರತಂಡ, ಚಿತ್ರೀಕರಣ ಆರಂಭಿಸಿದೆ.

‘ಹನುಮಾನ್’ ಚಿತ್ರದ ಸೀಕ್ವೆಲ್‌…

‘ಜೈ ಹನುಮಾನ್’ ಚಿತ್ರಕ್ಕೆ ತೆಲುಗು ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನ ಮಾಡುತ್ತಿದ್ದಾರೆ. 2 ವರ್ಷಗಳ ಹಿಂದೆ ತೆಲುಗಿನ ‘ಹನುಮಾನ್’ ಚಿತ್ರ ಕಟ್ಟಿಕೊಟ್ಟಿದ್ದ ಪ್ರಶಾಂತ್ ವರ್ಮಾ ಇದೀಗ ಸೀಕ್ವೆಲ್ ಸಿನಿಮಾ ಮಾಡ್ತಿದ್ದಾರೆ.

ತೆಲುಗು ಚಿತ್ರರಂಗದ ಪ್ರಖ್ಯಾತ ಬ್ಯಾನರ್ ‘ಮೈತ್ರಿ ಮೂವೀ ಮೇಕರ್ಸ್‌’ನ ನವೀನ್ ಯೆರ್ನೇನಿ ಮತ್ತು ವೈ ರವಿ ಶಂಕರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಪುಷ್ಪ’, ‘ವಾಲ್ತೇರು ವೀರಯ್ಯ’, ‘ವೀರ ಸಿಂಹ ರೆಡ್ಡಿ’, ‘ರಂಗಸ್ಥಲಂ’ ರೀತಿಯ ಅನೇಕ ಹಿಟ್ ಸಿನಿಮಾಗಳನ್ನು ನಿರ್ಮಾಣ ಸಂಸ್ಥೆ ಈ ಬ್ಯಾನರ್‌ನಲ್ಲಿ ಈಗ ರಿಷಬ್ ಶೆಟ್ಟಿ ಅವರ ಜೈ ‘ಹನುಮಾನ್’ ಸಿನಿಮಾ ತಯಾರಾಗುತ್ತಿದೆ. ‘ಟೀ ಸಿರೀಸ್’ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದೆ.‌ ಈ ‘ಜೈ ಹನುಮಾನ್‌’ ಸಿನಿಮಾವು ನಿರ್ದೇಶಕ ಪ್ರಶಾಂತ್ ವರ್ಮಾ ಅವರೇ ಕ್ರಿಯೇಟ್ ಮಾಡಿರುವ ‘ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್’ ಅಡಿಯಲ್ಲಿ ತಯಾರಾಗಲಿದೆ.

‘ಜೈ ಹನುಮಾನ್’ ಚಿತ್ರಕ್ಕೆ ಎಂ. ಎಂ. ಕೀರವಾಣಿ ಸಂಗೀತ ನಿರ್ದೇಶನವಿದ್ದು, ಎಸ್. ತಿರುನಾವುಕ್ಕರಸು ಛಾಯಾಗ್ರಾಹಣ, ಶ್ರೀನಾಗೇಂದ್ರ ತಂಗಳ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ. ಮುಂದಿನ ವರ್ಷದ ಅಂತ್ಯದೊಳಗೆ ‘ಜೈ ಹನುಮಾನ್’ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Related Posts

error: Content is protected !!