Street Beat

25 ದಿನಗಳನ್ನು ಪೂರ್ಣಗೊಳಿಸಿದ ‘ಸೀಟ್ ಎಡ್ಜ್’ ಚಿತ್ರ

ಥಿಯೇಟರಿನಲ್ಲಿ 25 ದಿನ ಪೂರ್ಣಗೊಳಿಸಿದ ‘ಸೀಟ್ ಎಡ್ಜ್’

ನೋಡುಗರನ್ನು ಬೆಚ್ಚಿಬೀಳಿಸುವಲ್ಲಿ ಯಶಸ್ವಿಯಾದ ‘ಸೀಟ್ ಎಡ್ಜ್’ ಚಿತ್ರ

ಹಾರರ್-ಥ್ರಿಲ್ಲರ್ ‘ಸೀಟ್ ಎಡ್ಜ್’ ಚಿತ್ರಕ್ಕೆ ಪ್ರೇಕ್ಷಕರ ಸ್ಪಂದನೆ 

ನಟ ಸಿದ್ದು ಮೂಲಿಮನಿ, ರವೀಕ್ಷಾ ಶೆಟ್ಟಿ, ರಘು ರಾಮನಕೊಪ್ಪ, ಗಿರೀಶ್‌ ಶಿವಣ್ಣ, ಮಿಮಿಕ್ರಿ ಗೋಪಿ ಮೊದಲಾದ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ‘ಸೀಟ್ ಎಡ್ಜ್’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆರಂಭದಿಂದಲೂ ತನ್ನ ಟೈಟಲ್, ಟೀಸರ್ ಮತ್ತು ಹಾಡುಗಳ ಮೂಲಕ ಚಂದನವನದಲ್ಲಿ ಸಿನಿಪ್ರಿಯರ ಗಮನ ಸೆಳೆದಿದ್ದ ‘ಸೀಟ್ ಎಡ್ಜ್’ ಚಿತ್ರ ಇದೇ ಜನವರಿ ಕೊನೆಯ ಶುಕ್ರವಾರ (ಜ. 30) ಅದ್ದೂರಿಯಾಗಿ ತೆರೆಗೆ ಬಂದಿತ್ತು. ಕರ್ನಾಟಕ ರಾಜ್ಯದಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಪರದೆಗಳಲ್ಲಿ ‘ಸೀಟ್ ಎಡ್ಜ್’ ಚಿತ್ರ ಏಕಕಾಲದಲ್ಲಿ ತೆರೆ ಕಂಡಿತ್ತು. ಥಿಯೇಟರಿನಲ್ಲಿ ಬಿಡುಗಡೆಯಾದ ಬಳಿಕ ನೋಡುಗರ ಗಮನ ಸೆಳೆಯಲು ಯಶಸ್ವಿಯಾದ ‘ಸೀಟ್ ಎಡ್ಜ್’ ಚಿತ್ರ, ಬಿಡುಗಡೆಯಾದ ಬಹುತೇಕ ಎಲ್ಲಾ ಪರದೆಗಳಲ್ಲೂ ತುಂಬಿದ ಪ್ರದರ್ಶನ ಕಾಣುವಲ್ಲಿ ಯಶಸ್ವಿಯಾಗಿದೆ.

‘ಸೀಟ್ ಎಡ್ಜ್’ ಚಿತ್ರತಂಡದ ಮುಖದಲ್ಲಿ ಗೆಲುವಿನ ನಗು…

ಇದೇ ಜನವರಿ 30ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಿ, ತೆರೆಗೆ ಬಂದಿದ್ದ ‘ಸೀಟ್ ಎಡ್ಜ್’ ಚಿತ್ರ ಇದೀಗ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 25 ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿದೆ. ‘ಸೀಟ್ ಎಡ್ಜ್’ ಚಿತ್ರಕ್ಕೆ ಸಿಕ್ಕ ಇಂಥದ್ದೊಂದು ಗೆಲುವು ಚಿತ್ರತಂಡದ ಮುಖದಲ್ಲಿ ಗೆಲುವಿನ ನಗುವನ್ನು ಮೂಡಿಸಿದೆ. ‘ಸೀಟ್ ಎಡ್ಜ್’ ಯಶಸ್ವಿ 25 ದಿನಗಳ ಪ್ರದರ್ಶನ ಪೂರ್ಣಗೊಳಿಸಿರುವ ವೇಳೆ ಮಾತನಾಡಿದ ಚಿತ್ರದ ನಿರ್ದೇಶಕ ಚೇತನ್ ಶೆಟ್ಟಿ, ‘ನಮ್ಮ ‘ಸೀಟ್ ಎಡ್ಜ್’ ಚಿತ್ರಕ್ಕೆ ಥಿಯೇಟರಿನಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಸ್ಪಂದನೆ ಪ್ರೇಕ್ಷಕರಿಂದ ಸಿಕ್ಕಿದೆ. ಸಿನೆಮಾ ನೋಡಿದ ಪ್ರತಿಯೊಬ್ಬರೂ ‘ಸೀಟ್ ಎಡ್ಜ್’ನಲ್ಲಿ ಕೂತು ತಮಗಾದ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಜನರಿಗೆ ಇಷ್ಟವಾಗುವಂಥ ಸಿನೆಮಾ ಮಾಡಿದ್ದೇವೆ ಎಂಬ ಖುಷಿ ನಮಗಿದೆ. ‘ಸೀಟ್ ಎಡ್ಜ್’ ನಮಗೆ ಮರೆಯಲಾಗದ ಅನುಭವ, ನೆನಪುಗಳನ್ನು ಕೊಟ್ಟಿದೆ. ಚಿತ್ರವನ್ನು ಗೆಲ್ಲಿಸಿದ ಕನ್ನಡದ ಎಲ್ಲಾ ಚಿತ್ರಪ್ರೇಮಿಗಳಿಗೆ ಧನ್ಯವಾದಗಳು’ ಎಂದಿದ್ದಾರೆ.

ಇನ್ನು ‘ಸೀಟ್ ಎಡ್ಜ್’ ಚಿತ್ರಕ್ಕೆ ಸಿಕ್ಕಿರುವ ಗೆಲುವಿನ ಬಗ್ಗೆ ಮಾತನಾಡಿರುವ ಚಿತ್ರದ ನಿರ್ಮಾಪಕ ಗಿರಿಧರ ಟಿ. ವಸಂತಪುರ, ‘ಕನ್ನಡ ಚಿತ್ರ ಪ್ರೇಕ್ಷಕರು ಉಳ್ಳೆಯ ಸದಭಿರುಚಿ ಚಿತ್ರಗಳನ್ನು ನೋಡಿ ಗೆಲ್ಲಿಸುತ್ತಾರೆ ಎಂಬುದಕ್ಕೆ ‘ಸೀಟ್ ಎಡ್ಜ್’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯೇ ನಿದರ್ಶನ. ಮನಸ್ಸಿಗೆ ಮುಟ್ಟುವಂಥ ಸಿನಿಮಾಗಳನ್ನು ಮಾಡಿದರೆ, ಖಂಡಿತ ಪ್ರೇಕ್ಷಕರು ನೋಡುತ್ತಾರೆ ಎಂಬ ಭರವಸೆ ನಮಗೆ ‘ಸೀಟ್ ಎಡ್ಜ್’ ಚಿತ್ರದಲ್ಲಿ ಸಿಕ್ಕಿದೆ. ಉತ್ತರ ಕರ್ನಾಟಕದಿಂದ ಹಿಡಿದು ದಕ್ಷಿಣ ಕರ್ನಾಟಕದವರೆಗೆ ಎಲ್ಲಾ ಕಡೆಯೂ ನಮ್ಮ ಸಿನೆಮಾವನ್ನು ಪ್ರೇಕ್ಷಕರು ನೋಡಿ ಆನಂದಿಸಿದ್ದಾರೆ’ ಎಂದು ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಸದ್ಯ ‘ಸೀಟ್ ಎಡ್ಜ್’ ಚಿತ್ರ 25 ದಿನಗಳನ್ನು ಪೂರೈಸಿದ್ದು, ರಾಜ್ಯಾದ್ಯಂತ ಸುಮಾರು 10ಕ್ಕೂ ಹೆಚ್ಚಿನ ಕಡೆಗಳಲ್ಲಿ ನಾಲ್ಕನೇ ವಾರ ಪೂರೈಸಿ ಐದನೇ ವಾರದತ್ತ ಮುನ್ನಡೆಯುತ್ತಿದೆ.

ಮತ್ತೊಂದು ಚಿತ್ರಕ್ಕೆ ತಯಾರಾದ ‘ಸೀಟ್‌ ಎಡ್ಜ್‌’ ಚಿತ್ರತಂಡ!

ಸದ್ಯ ‘ಸೀಟ್‌ ಎಡ್ಜ್‌’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಖುಷಿಯಾಗಿರುವ ಚಿತ್ರತಂಡ, ಶೀಘ್ರದಲ್ಲಿಯೇ ಮತ್ತೊಂದು ಹೊಸಚಿತ್ರ ಘೋಷಿಸುವ ತಯಾರಿಯಲ್ಲಿದೆ. ಈಗಾಗಲೇ ಹೊಸಚಿತ್ರದ ಸ್ಕ್ರಿಪ್ಟ್‌ ಕೆಲಸಗಳು ಆರಂಭವಾಗಿದ್ದು, ಆದಷ್ಟು ಬೇಗ ಹೊಸಚಿತ್ರವನ್ನು ಘೋಷಣೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. ಆ ಸಿನೆಮಾದ ಬಗ್ಗೆ ಹೆಚ್ಚಿನ ಮಾಹಿತಿಗಳು ಮುಂದಿನ ದಿನಗಳಲ್ಲಿ ಹೊರಬರಲಿದೆ.

Related Posts

error: Content is protected !!