Video

‘ಅಣ್ಣ From Mexico’ ಟೀಸರ್ ರಿಲೀಸ್

ಹೊರಬಂತು ‘ಅಣ್ಣ From Mexico’ ಚಿತ್ರದ ಟೀಸರ್

ಡಾಲಿ‌ ಧನಂಜಯ್ ನಟನೆಯ ‘ಅಣ್ಣ From Mexico’ ತೆರೆಗೆ ಬರಲು ರೆಡಿ…

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೈಯಿಂದ ‘ಅಣ್ಣ From Mexico’ ಟೀಸರ್ ರಿಲೀಸ್‌

ಕನ್ನಡ ಚಿತ್ರರಂಗದ ‘ನಟ ರಾಕ್ಷಸ’ ಡಾಲಿ ಧನಂಜಯ್ ಅಭಿನಯದ ಹೊಸಚಿತ್ರ ‘ಅಣ್ಣ From Mexico’ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ‘ಅಣ್ಣ From Mexico’ ಚಿತ್ರದ ಬಹುತೇಕ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ‘ಅಣ್ಣ From Mexico’ ಚಿತ್ರದ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ’ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ‘ಅಣ್ಣ From Mexico’ ಚಿತ್ರದ ಟೀಸರ್ ಬಿಡುಗಡೆಗೊಳಿಸಿ ಇಡೀ ತಂಡಕ್ಕೆ ಶುಭ ಹಾರೈಸಿದರು.

ಹೇಗಿದೆ ‘ಅಣ್ಣ From Mexico’ ಟೀಸರ್‌..?

ಸಿನೆಮಾದ ಹೆಸರೇ ಹೇಳುವಂತೆ, ‘ಅಣ್ಣ From Mexico’ ಔಟ್‌ ಅಂಡ್‌ ಔಟ್‌ ಮಾಸ್‌ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಸಿನೆಮಾವಾಗಿ ತೆರೆಗೆ ಬರುತ್ತಿದೆ. ‘ಅಣ್ಣ From Mexico’ ಸಿನೆಮಾದ ಟೀಸರಿನಲ್ಲಿ ನಾಯಕ ನಟ ಧನಂಜಯ್‌, ವಿದೇಶಿ ಕಲಾವಿದರ ಜೊತೆ ಮಾಸ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಸಿನೆಮಾದಲ್ಲೂ ಮಾಸ್‌ ಆಡಿಯನ್ಸ್‌ಗೆ ಇಷ್ಟವಾಗುವಂತ ಎಲ್ಲ ಅಂಶಗಳಿರುವ ಸುಳಿವನ್ನು ‘ಅಣ್ಣ From Mexico’ ಸಿನೆಮಾದ ಟೀಸರಿನಲ್ಲಿ ಬಿಟ್ಟುಕೊಡಲಾಗಿದೆ.

‘ಅಣ್ಣ From Mexico’ ಚಿತ್ರದ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಶೀಘ್ರದಲ್ಲಿಯೇ ‘ಅಣ್ಣ from Mexico’ ತೆರೆಗೆ…

ಇನ್ನು ‘ಅಣ್ಣ From Mexico’ ಚಿತ್ರಕ್ಕೆ ಈ ಹಿಂದೆ ಡಾಲಿ ಧನಂಜಯ್‌ ಅಭಿನಯದ ‘ಬಡವ ರಾಸ್ಕಲ್‌’ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಶಂಕರ್‌ ಗುರು ಆಕ್ಷನ್-ಕಟ್ ಹೇಳಿದ್ದಾರೆ. ‘ಅಣ್ಣ From Mexico’ ಚಿತ್ರದಲ್ಲಿ ಧನಂಜಯ್‌ ಅವರಿಗೆ ರೀಷ್ಮಾ ನಾಣಯ್ಯ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ರಂಗಾಯಣ ರಘು, ನಾಗಭೂಷಣ, ಪೂರ್ಣ ಮೈಸೂರು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಅಣ್ಣ From Mexico’ ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದು, ಚಿತ್ರಕ್ಕೆ ಅಜಯ್ ಸಂಕಲನ , ಗುಣ ಕಲಾ ನಿರ್ದೇಶನ ಮಾಡಿದ್ದಾರೆ. ‘ಐರಾ ಫಿಲ್ಮ್ಸ್​’ ಹಾಗೂ ‘ರಾಯಲ ಸ್ಟುಡಿಯೋಸ್’​​​​ ಬ್ಯಾನರ್​​ ಅಡಿ ‘ಅಣ್ಣ From Mexico’ ಚಿತ್ರ ನಿರ್ಮಾಣವಾಗುತ್ತಿದೆ. ಇದೇ ಜುಲೈ ಅಂತ್ಯದೊಳಗೆ ‘ಅಣ್ಣ From Mexico’ ಚಿತ್ರ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

Related Posts

error: Content is protected !!