Telewalk

ಓಟಿಟಿ ಎಂಟ್ರಿಗೆ ‘ಕೆಡಿ’ ರೆಡಿ..!

‘Zee5’ ಕನ್ನಡ ಓಟಿಟಿಯಲ್ಲಿ ‘ಕೆಡಿ- ದಿ ಡೆವಿಲ್’ ಬಿಡುಗಡೆ

ಥಿಯೇಟರಿನಿಂದ ಹೋಂ ಥಿಯೇಟರಿನತ್ತ ಬಂದ ‘ಕೆಡಿ – ದಿ ಡೆವಿಲ್’ 

ಜೂ. 5ಕ್ಕೆ ‘ಕೆಡಿ- ದಿ ಡೆವಿಲ್’ ಸಿನೆಮಾ ಸ್ಟ್ರೀಮಿಂಗ್

ಇದೇ 2026ರ ಏಪ್ರಿಲ್‌ ಅಂತ್ಯಕ್ಕೆ ತೆರೆಕಂಡಿರುವ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಪ್ರೇಮ್‌ ನಿರ್ದೇಶನದ ‘ಕೆಡಿ – ದಿ ಡೆವಿಲ್’ ಸಿನೆಮಾ ಥಿಯೇಟರಿನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಇದೇ ‘ಕೆಡಿ – ದಿ ಡೆವಿಲ್‌’ ಸಿನೆಮಾ ಥಿಯೇಟರಿನಿಂದ ಓಟಿಟಿಗೆ ಎಂಟ್ರಿಯಾಗುತ್ತಿದೆ. ಹೌದು, ಇದೇ 2026ರ ಜೂನ್ 5ರಂದು ‘Zee5’ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ‘ಕೆಡಿ – ದಿ ಡೆವಿಲ್’ ಸಿನೆಮಾ ಏಕಕಾಲಕ್ಕೆ ವೀಕ್ಷಣೆಗೆ ಲಭ್ಯವಾಗಲಿದೆ.

‘ಕೆಡಿ- ದಿ ಡೆವಿಲ್’ ಸಿನೆಮಾದಲ್ಲಿ ದೊಡ್ಡ ತಾರಾಬಳಗವಿದೆ. ಬಾಲಿವುಡ್‌ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ಡಾ. ವಿ. ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ, ಜಿಶು ಸೇನ್‌ಗುಪ್ತಾ, ನೋರಾ ಫತೇಹಿ ಮತ್ತು ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇರಿದಂತೆ ಅನೇಕರು ನಟಿಸಿದ್ದಾರೆ. 70ರ ದಶಕದ ಕಾಲಘಟ್ಟದ ಕಥೆಯನ್ನು ‘ಕೆಡಿ’ಯಲ್ಲಿ ಪ್ರೇಮ್ ಕಟ್ಟಿಕೊಟ್ಟಿದ್ದಾರೆ. ಅಣ್ಣ-ತಮ್ಮನ ಭಾವನಾತ್ಮಕ ಬಾಂಧವ್ಯ, ರಾಜಕೀಯ ಪೈಪೋಟಿ ಚಿತ್ರದಲ್ಲಿದೆ. ಅಣ್ಣನೇ ಸರ್ವಸ್ವ ಎಂದುಕೊಂಡು ಬದುಕುತ್ತಿರುವ ಕಾಳಿದಾಸ ಅಲಿಯಾಸ್ ಕೆಡಿ ಎಂಬಾತನ ಕಥೆ ಈ ಸಿನೆಮಾದಲ್ಲಿದೆ.

ಧ್ರುವ ಸರ್ಜಾ ಅವರ ಪಾತ್ರದ ಸುತ್ತ ಆ ಕಾಲ ಘಟ್ಟದ ಕಥೆಗಳು ತೆರೆದುಕೊಳ್ಳುತ್ತಾ ಸಾಗುತ್ತೆ. ಇದರ ಜೊತೆಗೆ ಆಕ್ಷನ್‌ ಮತ್ತು ಎಮೋಷನ್‌ ಎರಡನ್ನು ಬ್ಲೆಂಡ್‌ ಮಾಡಿ, ವೀಕ್ಷಕರಿಗೆ ಭರ್ಜರಿ ಮನರಂಜನೆಯ ಭೋಜನ ಪ್ರೇಮ್‌ ಬಡಿಸಿದ್ದಾರೆ. ಸಂಗೀತ ಸಂಯೋಜಕ ಅರ್ಜುನ್ ಜನ್ಯ ಮ್ಯೂಸಿಕ್‌, ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ. ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಕೆವಿಎನ್’ ‘ಕೆಡಿ’ ಸಿನೆಮಾ ನಿರ್ಮಾಣ ಮಾಡಿದೆ.

Related Posts

error: Content is protected !!