‘Zee5’ ಓಟಿಟಿಯಲ್ಲಿ ‘ರಾಕ್ಷಸ’ ಎಂಟ್ರಿ ಕೊಡ್ತಿದ್ದಾನೆ…
ಹೊಸ ವೆಬ್ ಸಿರೀಸ್ ಘೋಷಿಸಿದ ‘Zee5’
ಇದೇ ಫೆ. 20ರಿಂದ ‘Zee5’ ಓಟಿಟಿಯಲ್ಲಿ ‘ರಾಕ್ಷಸ’ ಸ್ಟ್ರೀಮಿಂಗ್ ಆರಂಭ
ಸೈಕಲಾಜಿಕಲ್-ಕ್ರೈಂ-ಥ್ರಿಲ್ಲರ್ ‘ರಾಕ್ಷಸ’
ಈಗಾಗಲೇ ‘ಅಯ್ಯನ ಮನೆ’, ‘ಮಾರಿಕಲ್ಲು’ ಹೆಸರಿನ ವೆಬ್ ಸರಣಿಯನ್ನು ಯಶಸ್ವಿಯಾಗಿ ವೀಕ್ಷಕರ ಮುಂದಿಟ್ಟಿರುವ ‘Zee5’ ಓಟಿಟಿ ಇದೀಗ ಅಂಥದ್ದೇ ಮತ್ತೊಂದು ವೆಬ್ ಸರಣಿಯನ್ನು ವೀಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ. ಹೌದು ‘Zee5’ ಕನ್ನಡ ಇದೀಗ ಕನ್ನಡ ಒರಿಜಿನಲ್ ಸಿರೀಸ್ ಘೋಷಿಸಿದ್ದು, ಈ ಸರಣಿಗೆ ‘ರಾಕ್ಷಸ’ ಎಂಬ ಟೈಟಲ್ ಇಡಲಾಗಿದೆ. 
ಮತ್ತೊಂದು ರೋಮಾಂಚಕ ಕಹಾನಿ
ನಂಬಿಕೆ ಮತ್ತು ಕೊಲೆಯಲ್ಲಿ ಬೇರೂರಿರುವ ಕರಾಳ ಅಪರಾಧ ಕಥೆಯ ಸುತ್ತ ‘ರಾಕ್ಷಸ’ ವೆಬ್ ಸರಣಿ ಸಾಗಲಿದೆ. ಸದ್ಯ ‘ರಾಕ್ಷಸ’ ವೆಬ್ ಸರಣಿಯ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್ ಓಟಿಟಿ ವೀಕ್ಷಕರ ಗಮನ ಸೆಳೆಯಲು ಯಶಸ್ವಿಯಾಗಿದೆ. ಇನ್ನು ‘ರಾಕ್ಷಸ’ ವೆಬ್ ಸರಣಿಯನ್ನು ಸುಹಾನ್ ಪ್ರಸಾದ್ ಮತ್ತು ಅಪೂರ್ವ ಬರೆದು, ಸುಹಾನ್ ಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ಈ ಸರಣಿಯನ್ನು ನಿರ್ದೇಶಕ ತರುಣ್‌ಸುಧೀರ್ ತಮ್ಮ ‘ತರುಣ್ ಸುಧೀರ್ ಪ್ರೊಡಕ್ಷನ್ಸ್’ ಬ್ಯಾನನರ್ ಮೂಲಕ ನಿರ್ಮಿಸಿದ್ದಾರೆ. ಕನ್ನಡ ಚಿತ್ರರಂಗದ ‘ಚಿನ್ನಾರಿ ಮುತ್ತ’ ಖ್ಯಾತಿಯ ವಿಜಯ್ ರಾಘವೇಂದ್ರ ‘ರಾಕ್ಷಸ’ ಮೂಲಕ ಸಿರೀಸ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಉಳಿದಂತೆ ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ, ಅಭಿಜಿತ್ ಮುಂತಾದವರು ‘ರಾಕ್ಷಸ’ ವೆಬ್ ಸರಣಿಯ ಇತರ ತಾರಾಬಳಗದಲ್ಲಿ ಅಭಿನಯಿಸಿದ್ದಾರೆ.
ಚೊಚ್ಚಲ ವೆಬ್ ಸರಣಿಯ ಮೇಲೆ ವಿಜಯ ರಾಘವೇಂದ್ರ ನಿರೀಕ್ಷೆ
ಇನ್ನು ಇದೇ ಮೊದಲ ಬಾರಿಗೆ ‘ರಾಕ್ಷಸ’ ವೆಬ್ ಸರಣಿಯ ಮೂಲಕ ಓಟಿಟಿಗೆ ಪ್ರವೇಶ ಪಡೆಯುತ್ತಿರುವುದರ ಬಗ್ಗೆ ಮಾತನಾಡಿರುವ ನಾಯಕ ನಟ ವಿಜಯ್ ರಾಘವೇಂದ್ರ, ”ರಾಕ್ಷಸ’ OTT ಜಾಗಕ್ಕೆ ನನ್ನ ಮೊದಲ ಹೆಜ್ಜೆಯಾಗಿದೆ. ಈ ಪ್ರಯಾಣವನ್ನು ಪ್ರಾರಂಭಿಸಲು ನಾನು ಇದಕ್ಕಿಂತ ಪ್ರಾಮಾಣಿಕ ಅಥವಾ ಸವಾಲಿನ ಕಥೆಯನ್ನು ಕೇಳಲು ಸಾಧ್ಯವಿಲ್ಲ. ನನ್ನನ್ನು ಆಕರ್ಷಿಸಿದ್ದು ಅಪರಾಧ ಅಥವಾ ಸಸ್ಪೆನ್ಸ್ ಮಾತ್ರವಲ್ಲ, ಕರ್ತವ್ಯ, ನಂಬಿಕೆ ಮತ್ತು ವೈಯಕ್ತಿಕ ಜವಾಬ್ದಾರಿಯ ನಡುವೆ ಹರಿದ ವ್ಯಕ್ತಿ ಪಾತ್ರದ ಭಾವನಾತ್ಮಕ ತೂಕ. ZEE5 ಬೇರೂರಿರುವ, ಶಕ್ತಿಯುತವಾದ ಕನ್ನಡ ಕಥೆಗಳಿಗೆ ಜಾಗವನ್ನು ಸೃಷ್ಟಿಸುತ್ತಿದೆ ಮತ್ತು OTT ರಾಕ್ಷಸದಂತಹ ನಿರೂಪಣೆಗಳು ಉಸಿರಾಡಲು ಮತ್ತು ಪ್ರೇಕ್ಷಕರೊಂದಿಗೆ ಹೆಚ್ಚು ಕಾಲ ಉಳಿಯಲು ಅನುವು ಮಾಡಿಕೊಡುತ್ತದೆ. ಅಂತಿಮ ಸಂಚಿಕೆಯ ನಂತರವೂ ಈ ಸರಣಿಯು ಶಾಶ್ವತವಾದ ಪ್ರಭಾವ ಬೀರುತ್ತದೆ ಎಂದು ನಾನು ನಂಬುತ್ತೇನೆ’ ಎಂದಿದ್ದಾರೆ. 
ಕಥೆ, ನಿರೂಪಣೆ ‘ರಾಕ್ಷಸ’ ವೆಬ್ ಸರಣಿಯ ಜೀವಾಳ…
ಓಟಿಟಿಯಲ್ಲಿ ತಮ್ಮ ನಿರ್ಮಾಣದ ಚೊಚ್ಚಲ ಪ್ರವೇಶದ ಬಗ್ಗೆ ಮಾತನಾಡಿರುವ ನಿರ್ಮಾಪಕ ತರುಣ್ ಕಿಶೋರ್ ಸುಧೀರ್, ‘ಒಬ್ಬ ನಿರ್ಮಾಪಕನಾಗಿ, ನಾನು ಬೇರೂರಿರುವ, ತೀವ್ರವಾದ ಮತ್ತು ಭಾವನಾತ್ಮಕವಾಗಿ ಪ್ರಾಮಾಣಿಕವಾದ ಕಥೆಯನ್ನು ಬೆಂಬಲಿಸಲು ಉತ್ಸುಕನಾಗಿದ್ದೆ. ರಾಕ್ಷಸ ತನ್ನ ಬಲವಾದ ಬರವಣಿಗೆ ಮತ್ತು ತನಿಖಾ ತಿರುಳಿನಿಂದಾಗಿ ಎದ್ದು ಕಾಣುತ್ತದೆ, ಮತ್ತು ಕಥೆಯು ಉತ್ತರ ಕರ್ನಾಟಕದಲ್ಲಿ ಸೆಟ್ ಆಗಿರುವುದರಿಂದ ನಾವು ವಿಶೇಷವಾಗಿ ಉತ್ಸುಕರಾಗಿದ್ದೇವೆ, ಇದು ವಿಶಿಷ್ಟ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಭೂದೃಶ್ಯವನ್ನು ಹೊಂದಿರುವ ಪ್ರದೇಶವಾಗಿದೆ. ಈ ಯೋಜನೆಯೊಂದಿಗೆ ಒಟಿಟಿ ಕ್ಷೇತ್ರಕ್ಕೆ ಕಾಲಿಡುವುದು ಒಂದು ರೋಮಾಂಚಕಾರಿ ಕಲಿಕೆಯ ಅನುಭವವಾಗಿದೆ, ಮತ್ತು ZEE5 ಈ ಕಥೆಗೆ ಸರಿಯಾದ ನೆಲೆಯಾಗಿದೆ ಎಂದು ಭಾವಿಸಿದೆ, ಏಕೆಂದರೆ ಅದು ಬಲವಾದ, ಸ್ಥಳೀಯವಾಗಿ ಬೇರೂರಿರುವ ನಿರೂಪಣೆಗಳನ್ನು ಆಳವಾಗಿ ಹೇಳುವತ್ತ ಗಮನಹರಿಸಿದೆ’ ಎಂದು ಅಭಿಪ್ರಾಯ ಹಂಚಿಕೊಂಡರು.
ಅಂದಹಾಗೆ, ಕ್ರೈಮ್ ಕಂ ಸೈಕಾಲಜಿಕಲ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ರಾಕ್ಷಸ’ ಸರಣಿ ಒಟ್ಟು ಏಳು ಭಾಗಗಳಲ್ಲಿ ಪ್ರಸಾರವಾಗಲಿದೆ. ಇದೇ 2026ರ ಫೆಬ್ರವರಿ 20ರಿಂದ Zee5ನಲ್ಲಿ ‘ರಾಕ್ಷಸ’ ವೆಬ್ ಸರಣಿ ಸ್ಟ್ರೀಮಿಂಗ್ ಆಗಲಿದೆ.















