Video

‘ಪೆದ್ದಿ’ಯಲ್ಲಿ ಗೌರ್​​​ನಾಯ್ಡು ಗತ್ತಿನಲ್ಲಿ ಶಿವಣ್ಣ ಎಂಟ್ರಿ!

ರಾಮ್‌ ಚರಣ್‌ ‘ಪೆದ್ದಿ’ಯಲ್ಲಿ ಶಿವಣ್ಣ ಗೆಟಪ್ ರಿವೀಲ್‌…

‘ಗೌರ್​​​ನಾಯ್ಡು’ ಅವತಾರದಲ್ಲಿ ‘ಹ್ಯಾಟ್ರಿಕ್‌ ಹೀರೋ’ ಶಿವರಾಜಕುಮಾರ್‌ ಮಿಂಚಿಂಗ್‌

ಶಿವಣ್ಣ ಪಾತ್ರದ ಕುತೂಹಕ್ಕೆ ತೆರೆಬಿತ್ತು!

ನಟ ‘ಗ್ಲೋಬಲ್ ಸ್ಟಾರ್’ ರಾಮ್ ಚರಣ್ ತೇಜ್‌ ಅಭಿನಯದ ತೆಲುಗಿನ ಈ ವರ್ಷದ ಬಹುನಿರೀಕ್ಷಿತ ‘ಪೆದ್ದಿ’ ಸಿನೆಮಾದ ಬಿಡುಗಡೆಗೆ ದಿನಗಣಣನೆ ಶುರುವಾಗಿದೆ. ಇದೇ 2026ರ ಜೂನ್ 4ರಂದು ‘ಪೆದ್ದಿ’ ಅದ್ದೂರಿಯಾಗಿ ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ‘ಪೆದ್ದಿ’ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿರುವ ಚಿತ್ರತಂಡ, ಚಿತ್ರದ ಒಂದಷ್ಟು ಗ್ಲಿಂಪ್ಸ್ ಬಿಡುಗಡೆ ಮಾಡಿದ್ದು, ಈ ಗ್ಲಿಂಪ್ಸ್‌ ನಲ್ಲಿ ರಾಮ್ ಚರಣ್ ಅವತಾರ ನೋಡಿ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ. ಇನ್ನು ‘ಪೆದ್ದಿ’ಯಲ್ಲಿ ಕನ್ನಡದ ನಟ ‘ಹ್ಯಾಟ್ರಿಕ್‌ ಹೀರೋವ ಶಿವರಾಜ ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಶಿವಣ್ಣ ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೀಗ ತೆರೆಬಿದ್ದಿದೆ.

‘ಗೌರ್‌ನಾಯ್ಡು’ ಎಂಬ ಪಾತ್ರದಲ್ಲಿ ಶಿವರಾಜ ಕುಮಾರ್‌

ಹೌದು, ‘ಪೆದ್ದಿ’ ಸಿನೆಮಾದ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿರುವಾಗಲೇ ಚಿತ್ರತಂಡ, ‘ಪೆದ್ದಿ’ ಚಿತ್ರದಲ್ಲಿ ನಟ ಶಿವರಾಜಕುಮಾರ್‌ ಅವರ ಪಾತ್ರವನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ. ಅಂದಹಾಗೆ, ‘ಪೆದ್ದಿ’ ಚಿತ್ರದಲ್ಲಿ ನಟ ಶಿವರಾಜಕುಮಾರ್‌ ‘ಗೌರ್‌ನಾಯ್ಡು’ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕುಸ್ತಿ ಅಖಾಡದಲ್ಲಿ ಅವರು ಕಾಣಿಸಿಕೊಂಡಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು‌ ಮಾಡಿದೆ. ಮೇಕಿಂಗ್ ವಿಡಿಯೋದಲ್ಲಿ ಶಿವಣ್ಣ-ರಾಮ್ ಚರಣ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಇವರಿಬ್ಬರನ್ನು ನೋಡಿ ಥ್ರಿಲ್ ಆಗಿದ್ದಾರೆ.

‘ಪೆದಿ’ ಸಿನೆಮಾದಲ್ಲಿ ನಟ ಶಿವರಾಜಕುಮಾರ್‌ ಅವರ ಪಾತ್ರ ಪರಿಚಯವಿರುವ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

‘ಉಪ್ಪೆನ’ ಸಿನಿಮಾವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್‌ಗೆ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಸ್ಪೆಷಲ್ ರೋಲ್ ಪ್ಲೇ ಮಾಡಿದ್ದಾರೆ. ಇನ್ನುಳಿದಂತೆ, ಜಗಪತಿ ಬಾಬು, ದಿವೇಂದು ಶರ್ಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ಪೆದ್ದಿ’ ಸಿನೆಮಾದ ಹಾಡುಗಳಿಗೆ ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ‘ವೃದ್ಧಿ ಸಿನೆಮಾಸ್’ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ‘ಪೆದ್ದಿ’ ಸಿನೆಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ಮತ್ತು ‘ಸುಕುಮಾರ್ ರೈಟಿಂಗ್ಸ್’ ಬ್ಯಾನರ್‌ಗಳು ಚಿತ್ರಕ್ಕೆ ಬೆಂಬಲವಾಗಿ ನಿಂತಿವೆ. ‘ಪೆದ್ದಿ’ ಚಿತ್ರಕ್ಕೆ ಆರ್. ರತ್ನವೇಲು ಛಾಯಾಗ್ರಹಣ, ನವೀಲ್ ನೂಲಿ ಸಂಕಲನ‌ ಕಾರ್ಯ ನಿರ್ವಹಿಸಿದ್ದಾರೆ.

Related Posts

error: Content is protected !!