Quick ಸುದ್ದಿಗೆ ಒಂದು click

ತೆಲುಗು ಆ್ಯಕ್ಟರ್ ರಾಮ್ ಪೋತಿನೇನಿ‌ ಈಗ ಡೈರೆಕ್ಟರ್‌!

ಡೈರೆಕ್ಟರ್ ಕ್ಯಾಪ್ ತೊಟ್ಟ ತೆಲುಗು ನಟ ರಾಮ್ ಪೋತಿನೇನಿ

ಸದ್ದಿಲ್ಲದೆ ರಾಮ್‌ ಪೋತಿನೇನಿ ನಿರ್ದೇಶನದ ‘RAPO23’ ಸಿನೆಮಾ ಅನೌನ್ಸ್!

ನಟನೆಗೂ ಸೈ.., ನಿರ್ದೇಶನಕ್ಕೂ ಜೈ..!

17 ಮೇ 2026, ಹೈದರಾಬಾದ್‌: ತೆಲುಗಿನ ಪ್ರತಿಭಾನ್ವಿತ ಯುವ ನಾಯಕ ನಟ ರಾಮ್ ಪೋತಿನೇನಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ರಾಮ್ ಹೊಸ ಸಿನೆಮಾ ಘೋಷಣೆಯಾಗಿದೆ. ಇನ್ನು ಇಲ್ಲಿಯವರೆಗೆ ತೆಲುಗು ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡಿರುವ ರಾಮ್‌ ಪೋತಿನೇನಿ, ಇದೇ ಮೊದಲ ಬಾರಿಗೆ ನಟನೆಯ ಜೊತೆಗೆ ನಿರ್ದೇಶನಕ್ಕೂ ಇಳಿಯುತ್ತಿದ್ದಾರೆ.

ಹೌದು, ಟಾಲಿವುಡ್‌ನ ‘ಎನರ್ಜೆಟಿಕ್ ಸ್ಟಾರ್’ ರಾಮ್ ಪೋತಿನೇನಿ ಕಳೆದ ಬಾರಿ ‘ಆಂಧ್ರ ಕಿಂಗ್ ತಾಲೂಕಾ’ ಸಿನೆಮಾಗೆ ಸಾಹಿತ್ಯ ಬರೆದು ಸೈ ಎನಿಸಿಕೊಂಡಿದ್ದರು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿರುವ ರಾಮ್‌ ಪೋತಿನೇನಿ, ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ತಮ್ಮ 23ನೇ ಚಿತ್ರಕ್ಕೆ ರಾಮ್ ಪೋತಿನೇನಿ ಸ್ವತಃ ತಾವೇ ಆಕ್ಷನ್-ಕಟ್ ಹೇಳುತ್ತಿದ್ದು, ಅವರ ಬರ್ತಡೇ ಪ್ರಯುಕ್ತ ಈ ಸಿನೆಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ರಾಮ್‌ ಜನ್ಮದಿನಕ್ಕೆ ಹೆಸರಿಡದ ಚಿತ್ರದ ಪೋಸ್ಟರ್‌ ರಿಲೀಸ್‌…

ಇನ್ನು ರಾಮ್‌ ಪೋತಿನೇನಿ ನಿರ್ದೇಶನ ಮಾಡುತ್ತಿರುವ ಹೊಸ ಸಿನೆಮಾಕ್ಕೆ ಸದ್ಯಕ್ಕೆ ಯಾವುದೇ ಹೆಸರನ್ನು ಇಟ್ಟಿಲ್ಲ. ಈ ಹೊಸ ಸಿನೆಮಾದಲ್ಲಿ ವೀರ ಎಂಬ ಪಾತ್ರದಲ್ಲಿ ರಾಮ್ ಪೋತಿನೇನಿ ನಟಿಸುತ್ತಿದ್ದು, ಜಾಕೆಟ್ ಧರಿಸಿ ವಿ ಕಟ್ ಹೇರ್ ಸ್ಟೈಲ್ ನಲ್ಲಿ ರಾಮ್‌ ಪೋತಿನೇನಿ ಅವರು ಕಾಣಿಸಿಕೊಂಡಿದ್ದಾರೆ. ಆದರೆ ಮುಖ ರಿವೀಲ್ ಮಾಡದೆ ಪೋಸ್ಟರ್ ನಲ್ಲಿ ರಾಮ್‌ ಒಂದಷ್ಟು ಕುತೂಹಲ ಹೆಚ್ಚಿಸಿದ್ದಾರೆ.

ಇದೇ ವರ್ಷಾಂತ್ಯಕ್ಕೆ ರಾಮ್‌ ಪೋತಿನೇನಿ ನಿರ್ದೇಶನದ ಚಿತ್ರ ತೆರೆಗೆ…

ಸದ್ಯಕ್ಕೆ ರಾಮ್‌ ಪೋತಿನೇನಿ ನಟನೆ ಮತ್ತು ನಿರ್ದೇಶನದ ಹೊಸ ಸಿನೆಮಾಗೆ ‘RAMO23’ ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ. ಇದೇ 2026ರ ಜೂನ್ ನಲ್ಲಿ ಈ ಹೊಸ ಸಿನೆಮಾದ ಚಿತ್ರೀಕರಣ ಆರಂಭವಾಗಲಿದ್ದು, ಇದೇ ವರ್ಷಾಂತ್ಯಕ್ಕೆ ಅಂದರೆ ಡಿಸೆಂಬರ್ ನಲ್ಲಿ ಈ ಚಿತ್ರವನ್ನು ಬಿಡುಗಡೆ‌ ಮಾಡಲು ರಾಮ್‌ ಪೋತಿನೇನಿ ಮತ್ತು ಚಿತ್ರತಂಡ ಯೋಜನೆ ಹಾಕಿಕೊಂಡಿದ್ದಾರೆ. ಅಂದಹಾಗೇ ಇದೊಂದು ಸೈಕಲಾಜಿಕಲ್-ಥ್ರಿಲ್ಲರ್ ಸಿನೆಮಾವಾಗಿದ್ದು, ರಾಮ್‌ ಪೋತಿನೇನಿ ತಮ್ಮದೇ ‘ರಾಪೋ ಸಿನಿಮ್ಯಾಟಿಕ್ಸ್’ ಬ್ಯಾನರಿನಲ್ಲಿ ಈ ಸಿನೆಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಶೀಘ್ರದಲ್ಲೇ ರಾಮ್ ಪೋತಿನೇನಿ ರಿವೀಲ್ ಮಾಡಲಿದ್ದಾರೆ.

Related Posts

error: Content is protected !!