Street Beat

‘ಸುಮ್ನೆ ತಮಾಷೆಗೆ..’ ಸ್ಕ್ರಿಪ್ಟ್ ಪೂಜೆ ಆಯ್ತು!

ಹೊಸಬರ ‘ಸುಮ್ನೆ ತಮಾಷೆಗೆ..’ ಸಿನೆಮಾದ ಸ್ಕ್ರಿಪ್ಟ್ ಪೂಜೆ

‘ಕಡಲ ತೀರದ ಭಾರ್ಗವ’ ಹಾಗೂ ‘ಯಾವ ಮೋಹನ ಮುರಳಿ ಕರೆಯಿತು’ ನಿರ್ದೇಶಕರ ಹೊಸಚಿತ್ರ

ಚಿತ್ರೀಕರಣಕ್ಕೆ ತಯಾರಾದ ‘ಸುಮ್ನೆ ತಮಾಷೆಗೆ..’ ಚಿತ್ರ

ಸ್ಯಾಂಡಲ್ ವುಡ್ ನಲ್ಲಿ ಕೆಲವು ಸಿನೆಮಾಗಳು ತಮ್ಮ ತಾರಾಗಣದ ಮೂಲಕ, ಬಜೆಟ್‌ ಮೂಲಕ ಗಮನ ಸೆಳೆದರೆ, ಇನ್ನು ಕೆಲವು ಸಿನೆಮಾಗಳು ತಮ್ಮ ಕಥಾಹಂದರ, ಕಂಟೆಂಟ್‌, ಟೈಟಲ್‌ ಮೂಲಕವೇ ಗಮನ ಸೆಳೆಯುತ್ತವೆ. ಇದೀಗ ಹೀಗೆ ತನ್ನ ಟೈಟಲ್‌ ಮೂಲಕ ಹೊಸಬರ ಸಿನೆಮಾವೊಂದು ಗಮನ ಸೆಳೆಯುತ್ತಿದೆ. ಆ ಸಿನೆಮಾದ ಹೆಸರು ‘ಸುಮ್ನೆ ತಮಾಷೆಗೆ..’

ಕನ್ನಡದಲ್ಲಿ ಈ ಹಿಂದೆ ‘ಕಡಲ ತೀರದ ಭಾರ್ಗವ’ ನಿರ್ದೇಶಿಸಿದ್ದ ಪನ್ನಗ ಹಾಗೂ ಅವರ ಸ್ನೇಹಿತರು, ‘ಯಾವ ಮೋಹನ‌ ಮುರಳಿ ಕರೆಯಿತು’ ನಿರ್ದೇಶಕ ವಿಶ್ವಾಸ್ ಕೃಷ್ಣ ಈ ಸಿನೆಮಾಗೆ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ಘಟಕಲ ಸುರೇಶ್ ಬಾಬು ‘ಸುಮ್ನೆ ತಮಾಷೆಗೆ..’ ಸಿನೆಮಾಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಈಗಾಗಲೇ ‘ಸುಮ್ನೆ ತಮಾಷೆಗೆ..’ ಚಿತ್ರದ ಒಂದಷ್ಟು ತೆರೆಮರೆಯ ಕೆಲಸಗಳು ನಡೆದಿದ್ದು,  ಇತ್ತೀಚೆಗೆ ಬೆಂಗಳೂರಿನ ಜೆ. ಪಿ. ನಗರದ ‘ಶ್ರೀಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಸನ್ನಿಧಿ’ಯಲ್ಲಿ ಈ ಸಿನೆಮಾದ ಸ್ಕ್ರಿಪ್ಟ್‌ ಪೂಜೆ ನೆರವೇರಿದೆ.

‘ಕಡಲ ತೀರದ ಭಾರ್ಗವ’, ‘ಯಾವ ಮೋಹನ ಮುರಳಿ ಕರೆಯಿತು’ ಹಾಗೂ ‘ಪೀಟರ್’ ಸಿನೆಮಾಗಳಲ್ಲಿ ನಟಿಸಿರುವ ಪಟೇಲ್ ವರುಣ್ ರಾಜು ‘ಸುಮ್ನೆ ತಮಾಷೆಗೆ..’ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಯುವ ಪ್ರತಿಭೆಗಳಾದ ಹರೀಶ್, ದರ್ಶನ್ ಹಾಗೂ ಮಾಧವ ತಾರಾಬಳಗದಲ್ಲಿದ್ದಾರೆ. ಸಾಮ್ರಾಟ್ ಮ್ಯೂಸಿಕ್, ಪುನೀತ್ ಓಂಕಾರ್ ಸ್ಟ‌ಂಟ್ ಕೊರಿಯೋಗ್ರಫಿ ಚಿತ್ರಕ್ಕಿದೆ. ಉಳಿದಂತೆ ‘ಸುಮ್ನೆ ತಮಾಷೆಗೆ..’ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.

Related Posts

error: Content is protected !!